ಮೂರು ತಿಂಗಳಿಂದ ಬೃಂದಾವನದ ಬಳಿ ಆಡಿದ್ದೇ ಆಟ – ಕೊನೆಗೂ ಸೆರೆ ಸಿಕ್ಕ ಚಿರತೆ

ಮೂರು ತಿಂಗಳಿಂದ ಬೃಂದಾವನದ ಬಳಿ ಆಡಿದ್ದೇ ಆಟ – ಕೊನೆಗೂ ಸೆರೆ ಸಿಕ್ಕ ಚಿರತೆ

ಮಂಡ್ಯ : ಮೂರು ತಿಂಗಳಾಯ್ತು. ಕೆ.ಆರ್ ಎಸ್ ಹತ್ರ ಹೋಗೋಕು ಅಲ್ಲಿನ ಜನತೆಗೆ ಭಯ. ಹೋಗದೆ ಇರೋಕು ಆಗಲ್ಲ. ಹೋದರೆ ಚಿರತೆಯದ್ದೇ ಚಿಂತೆ. ಇದರ ಮಧ್ಯೆ ಪ್ರವಾಸಿಗರ ನೆಚ್ಚಿನ ತಾಣವಾದ ಬೃಂದಾವನವನ್ನೂ ಕೆಲ ದಿನಗಳ ಕಾಲ ಬಂದ್ ಮಾಡಲಾಗಿತ್ತು. ಬೃಂದಾವನದಲ್ಲೂ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಅದರಲ್ಲೂ ಕೃಷ್ಣರಾಜ ಸಾಗರ ಅಣೆಕಟ್ಟು ಬಳಿ ಪದೇ ಪದೇ ಕಾಣಿಸಿಕೊಂಡ ಚಿರತೆ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. ಅಂತೂ ಇಂತೂ ಮೂರು ತಿಂಗಳಿಂದ ಕಾಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

ಇದನ್ನೂ ಓದಿ: ಬೇಲಿ ಹಾರಿ, ಕಾರಿನಲ್ಲಿದ್ದವನ ಮೇಲೆ ಎರಗಿದ ಚಿರತೆ – ಜೀವ ಉಳಿದಿದ್ದೇ ಹೆಚ್ಚು!

ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಡ್ಯಾಂ ಬಳಿ ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಲೇ ಇತ್ತು. ಡ್ಯಾಂ ಸುತ್ತಮುತ್ತ 8 ಬೋನುಗಳನ್ನು ಚಿರತೆಯನ್ನ ಸೆರೆ ಹಿಡಿಯಲು ಇಡಲಾಗಿತ್ತು. ಟ್ರ್ಯಾಪ್ ಕ್ಯಾಮೆರಾ ಇಟ್ಟು ಚಿರತೆಯ ಚಲನವಲನವನ್ನೂ ಗಮನಿಸಲಾಗುತ್ತಿತ್ತು. ಅದೆಷ್ಟೇ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ರೂ ಕೂಡಾ ಚಿರತೆ ಚೆಲ್ಲಾಟವಾಡುತ್ತಲೇ ಇತ್ತು. ಅಕ್ಕಪಕ್ಕದ ಗ್ರಾಮಗಳ ಸಾಕುಪ್ರಾಣಿಗಳನ್ನ ಬೇಟೆಯಾಡಿ ಭಯ ಹುಟ್ಟಿಸಿತ್ತು. ಕೊನೆಗೂ ಬೃಂದಾವನದ ಬಳಿ ಇರಿಸಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ. ಚಿರತೆ ಸೆರೆ ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ ಕೆ.ಆರ್ ಎಸ್ ಅಣೆಕಟ್ಟು ಸುತ್ತಮುತ್ತಲಿನ ಜನ ಮತ್ತು ಸಿಬ್ಬಂದಿ ನಿರಾಳರಾಗಿದ್ದಾರೆ.

suddiyaana