ಅಭಿಗೆ ಪಾಕ್ ಯುವತಿ ಪ್ರಪೋಸ್ – ಫ್ಲೈಯಿಂಗ್ ಕಿಸ್, L ಸ್ಟೈಲ್ ಸೀಕ್ರೆಟ್
ಯುವಿ ಶಿಷ್ಯ ಭವಿಷ್ಯದ ಕೊಹ್ಲಿನಾ?

ಅಭಿಗೆ ಪಾಕ್ ಯುವತಿ ಪ್ರಪೋಸ್ – ಫ್ಲೈಯಿಂಗ್ ಕಿಸ್, L ಸ್ಟೈಲ್ ಸೀಕ್ರೆಟ್ಯುವಿ ಶಿಷ್ಯ ಭವಿಷ್ಯದ ಕೊಹ್ಲಿನಾ?

ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಮುಗ್ದು ಎರಡು ದಿನ ಕಳೆದ್ರೂ ಅದ್ರ ಫೀವರ್ ಮಾತ್ರ ಕಮ್ಮಿಯಾಗಿಲ್ಲ. ಅದ್ರಲ್ಲೂ ಸೂಪರ್ 4 ಹಂತದ ಪಂದ್ಯ ಆದ್ಮೇಲೆ ಅಭಿಷೇಕ್ ಶರ್ಮಾ ಮಾತ್ರ ಫುಲ್ ಟ್ರೆಂಡಿಂಗ್​ನಲ್ಲಿದ್ದಾರೆ. ಅವ್ರ ಬ್ಯಾಟಿಂಗ್ ಸ್ಟೈಲ್, ಆನ್ ಫೀಲ್ಡ್ ಅಗ್ರೆಶನ್, ರಿವೇಂಜ್, ಕೌಂಟರ್, ಸೆಲೆಬ್ರೇಷನ್ ಎಲ್ಲವೂ ಸೂಪರ್ ಎನ್ನುವಂತಿದೆ. ಟೀಂ ಇಂಡಿಯಾ ಪರ ಓಪನಿಂಗ್ ಬ್ಯಾಟ್ಸ್​ಮನ್ ಆಗಿ ಫಸ್ಟ್ ಬಾಲ್​ನಲ್ಲೇ ಬಿಗ್ ಹಿಟ್​ಗಳ ಮೂಲಕ ಎದುರಾಗಳಿಗಳ ಗುಂಡಿಗೆ ನಡುಗಿಸುತ್ತಿದ್ದಾರೆ. ಈಗಾಗ್ಲೇ ಟೂರ್ನಿಯಲ್ಲಿ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದು ಸ್ಟೈಕ್​ರೇಟ್ ಅಂತೂ ಅಲ್ಟಿಮೇಟ್ ಆಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ವಿರುದ್ಧದ ಮ್ಯಾಚಲ್ಲಿ ಅಭಿಷೇಕ್ ತೋರಿದ ಡೇರಿಂಗ್ ಌಟಿಟ್ಯೂಡ್​ಗೆ ಫ್ಯಾನ್ಸ್ ಅಂತೂ ಫಿದಾ ಆಗಿದ್ದಾರೆ.

ಇದನ್ನೂ ಓದಿ : 30 ವರ್ಷಕ್ಕೆ ಎಂಟ್ರಿ.. 34ಕ್ಕೆ ಕ್ಯಾಪ್ಟನ್ಸಿ – ಗುರಿ ಮರೆತ ಸೂರ್ಯನಿಗೆ ಪತ್ನಿಯೇ ಗುರು

ಪಾಕ್ ವಿರುದ್ಧದ ಪಂದ್ಯದ ಬಳಿಕ ಅಭಿಷೇಕ್ ಫುಲ್ ಟ್ರೆಂಡ್!

ಸೆಪ್ಟೆಂಬರ್ 21ರಂದು ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರೋ ಏಕೈಕ ತಂಡವಾಗಿದೆ. ಅದ್ರಲ್ಲೂ ಈ ಮ್ಯಾಚಲ್ಲಿ ಅಭಿಷೇಕ್ ಪರ್ಫಾಮೆನ್ಸ್ ನೆಕ್ಸ್ಟ್​ ಲೆವೆಲ್​ನಲ್ಲಿತ್ತು. ಓಪನರ್ ಆಗಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಫಸ್ಟ್ ಬಾಲ್​ನಲ್ಲೇ ಸಿಕ್ಸರ್ ಸಿಡಿಸಿದ್ರು. ಗಿಲ್ ಜೊತೆಗೂಡಿ ಪಾಕ್ ಬೌಲರ್​ಗಳನ್ನ ಬೆಂಡೆತ್ತಿದ್ರು. ಈ ವೇಳೆ ಸ್ಲೆಡ್ಜಿಂಗ್​ಗೆ ಟ್ರೈ ಮಾಡ್ತಿದ್ದ ಪಾಕ್ ಬೌಲರ್ ಹ್ಯಾರಿಸ್ ರೌಫ್​ಗೆ ಆನ್ ದಿ ಸ್ಪಾಟಲ್ಲೇ ಖಡಕ್ ತಿರುಗೇಟು ಕೊಟ್ಟಿದ್ರು. ಮಾತಲ್ಲಷ್ಟೇ ಅಲ್ಲ ಬ್ಯಾಟಲ್ಲೂ ತೋರಿಸ್ತೀನಿ ಅಂತಾ ಸಿಕ್ಸ್, ಫೋರ್​ಗಳಲ್ಲೇ ಡೀಲ್ ಮಾಡ್ತಿದ್ರು. 6 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ 39 ಎಸೆತಗಳಲ್ಲಿ 74 ರನ್‌ ಸಿಡಿಸಿದ್ರು. ಇನ್ನು ಅರ್ಧಶತಕ ಆದ್ಮೇಲೆ ಅವ್ರ ಸೆಲೆಬ್ರೇಷನ್​ ಹಲ್​ಚಲ್ ಎಬ್ಬಿಸಿದೆ.

ಫ್ಲೈಯಿಂಗ್ ಕಿಸ್, ಎಲ್ ಸ್ಟೈಲ್ ಸೆಲೆಬ್ರೇಷನ್!

ಸೂಪರ್‌ 4 ಹಂತದ ಈ ಪಂದ್ಯದಲ್ಲಿ ಪಾಕ್‌ ವಿರುದ್ಧ ಅಭಿಷೇಕ್‌ ಶರ್ಮಾ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆ ಬಳಿಕ ಹೆಲ್ಮೆಟ್ ಮತ್ತು ಗ್ಲೌಸ್ ತೆಗೆದು ಸೆಲೆಬ್ರೇಟ್ ಮಾಡಿದ್ರು. ಮೊದಲಿಗೆ ಅಭಿಷೇಕ್ ತಮ್ಮ ಫ್ಯಾಮಿಲಿ ಮೆಂಬರ್ಸ್ ಕುಳಿತಿದ್ದ ಸ್ಟ್ಯಾಂಡ್ ಕಡೆ ತಿರುಗಿ ಫ್ಲೈಯಿಂಗ್ ಕಿಸ್ ಕೊಟ್ರು. ಆ ಬಳಿಕ ಎಲ್​ ಆಕಾರದಲ್ಲಿ ಕೈಬೆರಳುಗಳನ್ನ ತೋರಿಸಿ ಸಂಭ್ರಮಿಸಿದ್ರು. ಈ ರೀತಿಯ ಸೆಲೆಬ್ರೇಷನ್ ಯಾಕೆ ಅನ್ನೋ ಬಗ್ಗೆ ಅಭಿಷೇಕ್ ಹೇಳಿದ್ದಾರೆ. ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸೂರ್ಯಕುಮಾರ್ ಜೊತೆ ಮಾತನಾಡುತ್ತಾ ಈ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ನನ್ನ ಕುಟುಂಬಸ್ಥರು ಇದ್ದದ್ದು ತುಂಬಾನೇ ಸ್ಮರಣೀಯವಾಗಿದೆ. ಇದು ನನ್ನ ಪಾಲಿಗೆ ತುಂಬಾನೇ ವಿಶೇಷವಾದದ್ದು ಎಂದಿದ್ದಾರೆ. ಹಾಗೇ ಎಲ್ ಸ್ಟೈಲ್ ಸೆಲಬ್ರೇಷನ್ ರಹಸ್ಯವನ್ನೂ ರಿವೀಲ್ ಮಾಡಿದ್ದಾರೆ. ನಮ್ಮನ್ನು ಬೆಂಬಲಿಸಲು ಬರುವ ಎಲ್ಲಾ ಅಭಿಮಾನಿಗಳಿಗೆ, ಟೀಮ್ ಇಂಡಿಯಾಗೆ, ಐಪಿಎಲ್ ಅಭಿಮಾನಿಗಳಿಗೆ ಎಲ್ ಫಾರ್ ಲವ್ ಸೆಲೆಬ್ರೇಷನ್ ಡೆಡಿಕೇಟ್ ಮಾಡಿದ್ದಾರೆ. ಇನ್ನು ಅಭಿಷೇಕ್ ಪರ್ಫಾಮೆನ್ಸ್​​ಗೆ ಟೀಂ ಇಂಡಿಯಾ ಫ್ಯಾನ್ಸ್ ಅಷ್ಟೇ ಅಲ್ಲ ಪಾಕ್ ಗರ್ಲ್ಸ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯದ ವೇಳೆ ಪಾಕಿಸ್ತಾನ ತಂಡದ ಅಭಿಮಾನಿಯೊಬ್ಬಳು ಕೈಯಲ್ಲಿ ಹಾರ್ಟ್ ಶೇಪ್ ಸಿಂಬಲ್​ ಮೂಲಕ ಲವ್ ಪ್ರಪೋಸ್ ಮಾಡಿದ್ದಾಳೆ ಅನ್ನೋ ಫೋಟೋಗಳು ವೈರಲ್ ಆಗ್ತಿವೆ.

ಯುವಿ ಗರಡಿಯಲ್ಲಿ ಬೆಳೆದ ಅಭಿಷೇಕ್ ಈಗ ಟಿ-20ಐ ಕಿಂಗ್!

ಇನ್ನು ನಿಮ್ಗೆಲ್ಲಾ ಗೊತ್ತಿರೋ ಹಾಗೇ ಅಭಿಷೇಕ್ ಶರ್ಮಾ ಟೀಂ ಇಂಡಿಯಾದ ಸೂಪರ್ ಸ್ಟಾರ್ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿರೋ ಹುಡುಗ. 2011ರ ವಿಶ್ವಕಪ್‌ನ ಹೀರೋ ಯುವರಾಜ್ ಸೀಂಗ್ ಅಭಿಷೇಕ್ ಶರ್ಮಾಗೆ ತರಬೇತಿ ನೀಡಿದ್ದಾರೆ. ಇದೀಗ ಎಷ್ಯಾಕಪ್​ನಲ್ಲಿ ಗುರುವಿನ ದಾಖಲೆಯನ್ನೇ ಅಭಿ ಬ್ರೇಕ್ ಮಾಡಿದ್ದಾರೆ. ಸೂಪರ್‌ 4 ಹಂತದ ಪಂದ್ಯದಲ್ಲಿ ಪಾಕ್‌ ವಿರುದ್ಧ ಅಭಿಷೇಕ್‌ ಶರ್ಮಾ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಪಾಕ್ ವಿರುದ್ಧ ಅತೀ ವೇಗದ ಅರ್ಧಶತಕದ ದಾಖಲೆ ಬರೆದಿದ್ದಾರೆ. 2012 ರ ಪಾಕಿಸ್ತಾನ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಈಗ ಈ ದಾಖಲೆ ಅಭಿಷೇಕ್ ಶರ್ಮಾ ಹೆಸರಿನಲ್ಲಿದೆ. ಹೀಗೆ ಟಿ-20ಐ ಫಾರ್ಮೆಟ್​ನಲ್ಲಿ ಪಂದ್ಯದಿಂದ ಪಂದ್ಯಕ್ಕೆ ರೈಸಿಂಗ್ ಸ್ಟಾರ್ ಆಗ್ತಿರೋ ಅಭಿಷೇಕ್ ಭಾರತಕ್ಕೆ ಭರ್ಜರಿ ಓಪನಿಂಗ್ ನೀಡ್ತಿದ್ದಾರೆ. ಪ್ರಸ್ತುತ ಏಷ್ಯಾಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿರೋ ಬ್ಯಾಟರ್​ಗಳ ಪೈಕಿ ಅಭಿಷೇಕ್ ಶರ್ಮಾ ನಂಬರ್ 1 ಪ್ಲೇಸ್​ನಲ್ಲಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಓಪನರ್ ಆಗಿ ಬ್ಯಾಟ್ ಬೀಸಿರೋ ಅಭಿ 173 ರನ್​ಗಳನ್ನ ಕಲೆ ಹಾಕಿದ್ದಾರೆ. ಅದೂ ಕೂಡ 208.83 ಸ್ಟ್ರೈಕ್​ರೇಟ್​ನಲ್ಲಿ. 100 ರನ್​ಗಳಿಗಿಂತ ಜಾಸ್ತಿ ಸ್ಕೋರ್ ಮಾಡಿರೋ ಯಾವುದೇ ತಂಡದ ಬ್ಯಾಟರ್ ಕೂಡ 150+ ಸ್ಟ್ರೈಕ್​ರೇಟ್​ನಲ್ಲೂ ಬ್ಯಾಟ್ ಬೀಸಿಲ್ಲ. ಇನ್ನು ಅಭಿಷೇಕ್ ಪಾಕಿಸ್ತಾನ ವಿರುದ್ಧ 74 ರನ್ ಕಲೆ ಹಾಕಿರೋದೇ ಹೈಯೆಸ್ಟ್ ಸ್ಕೋರ್. ಇನ್ನು ಟಾಪ್ ಸ್ಕೋರರ್ ಲಿಸ್ಟ್​ನಲ್ಲಿ ಶ್ರೀಲಂಕಾ ಪ್ಲೇಯರ್ ಪತುಮ್ ನಿಸ್ಸಾಂಕಾ ಸೆಕೆಂಡ್ ಪ್ಲೇಸ್​ನಲ್ಲಿದ್ದು 4 ಇನ್ನಿಂಗ್ಸ್ ಗಳಿಂದ 146 ರನ್ ಸ್ಕೋರ್ ಮಾಡಿದ್ದಾರೆ. ನಿಸ್ಸಾಂಕಾ ಸ್ಟ್ರೈಕ್ ರೇಟ್ 148+ ಇದೆ. ಇನ್ನು ಭಾರತದ ಪರ ಅಭಿಷೇಕ್ ಬಿಟ್ರೆ ಮತ್ಯಾರೂ 100ರ ಗಡಿಯನ್ನೂ ದಾಟಿಲ್ಲ.

ಟೀಂ ಇಂಡಿಯಾ ಪಾಲಿಗೆ ಅಭಿಷೇಕ್ ಶರ್ಮಾ ಟ್ರೆಷರ್ ಇದ್ದಂತೆ. ಟಿ20ಐ ಪಾರ್ಮೆಟ್​ನಲ್ಲಿ ಅವ್ರ ಬ್ಯಾಟಿಂಗ್ ಖದರ್​ಗೆ ಲೆಜೆಂಡರಿ ಕ್ರಿಕೆಟಿಗರೇ ಕ್ಲೀನ್ ಬೌಲ್ಡ್ ಆಗಿದ್ದಾರೆ. ಅವ್ರ ಅಗ್ರೆಶನ್, ಬ್ಯಾಟಿಂಗ್ ಸ್ಟೈಲ್ ನೋಡಿ ಭವಿಷ್ಯದ ವಿರಾಟ್ ಕೊಹ್ಲಿ ಅಂತೆಲ್ಲಾ ಹೇಳ್ತಿದ್ದಾರೆ.

Shantha Kumari