ಪಾಕಿಸ್ತಾನಕ್ಕೆ ಸೂರ್ಯ ಗ್ರಹಣ – ಫೈನಲ್ ನಲ್ಲಿ ಮತ್ತೆ IND Vs PAK?
4 ಟೀಂ.. 4 ಮ್ಯಾಚ್.. ಹೇಗಿದೆ ಗೇಮ್?

ಏಷ್ಯಾಕಪ್ ಈಗ ಆಲ್ಮೋಸ್ಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬರ್ತಿದೆ. ಇಷ್ಟೂ ದಿನದ ಪಂದ್ಯಗಳಲ್ಲಿ ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಪಂದ್ಯವೇ ಹೈವೋಲ್ಟೇಜ್ ಮ್ಯಾಚ್. ಲೀಗ್ ಹಂತದಲ್ಲೂ ಶೇಕ್ ಹ್ಯಾಂಡ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಸೂಪರ್ 4 ಹಂತದ ಮ್ಯಾಚಲ್ಲೂ ಫೀಲ್ಡ್ನಲ್ಲೇ ಕಿರಿಕ್ಗಳು ಆಗಿದ್ವು. ಆದ್ರೆ ಈ ಫೈಟ್ ಇಷ್ಟಕ್ಕೆ ಮುಗೀತಾ ಅಂದ್ರೆ ಇಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ಮತ್ತೆ ಮುಖಾಮುಖಿಯಾಗೋ ಚಾನ್ಸಸ್ ಇದೆ. ಅದೂ ಕೂಡ ಫೈನಲ್ನಲ್ಲಿ. ಟ್ರೋಫಿ ಮೇಲೆ ಕಣ್ಣಿಟ್ಟಿರೋ ಪಾಕಿಸ್ತಾನಕ್ಕೆ ಸೂರ್ಯಗ್ರಹಣ ಶಾಪವಾಗಿ ಕಾಡ್ತಿದೆ.
ಇದನ್ನೂ ಓದಿ : ಇಂದಿನಿಂದ ಹೊಸ GST ಸ್ಲ್ಯಾಬ್ ಜಾರಿ – ಯಾವ ವಸ್ತುಗಳಿಗೆ ಬೆಲೆ ಕಮ್ಮಿ? ಯಾವ ಬೆಲೆ ಹೆಚ್ಚು?
17ನೇ ಸೀಸನ್ ಏಷ್ಯಾಕಪ್ ಟ್ರೋಫಿ ಮೆಲೆ ಕಣ್ಣಿಟ್ಟಿರೋ ಪಾಕಿಸ್ತಾನಕ್ಕೆ ಅಕ್ಷರಶಃ ಸೂರ್ಯಗ್ರಹಣ. ಭಾರತದ ವಿರುದ್ಧ ಸತತ ಎರಡು ಪಂದ್ಯಗಳನ್ನ ಸೋತಿರೋ ಪಾಕಿಸ್ತಾನ ಈಗ ಡು ಆರ್ ಡೈ ಸ್ಟೇಜ್ನಲ್ಲಿದೆ. ಟೀಂ ಇಂಡಿಯಾ ವಿರುದ್ಧದ ಪಂದ್ಯಗಳಲ್ಲಿ ಸೂರ್ಯಕುಮಾರ್ ನಾಯಕತ್ವದ ಟೀಂ ನೀರು ಕುಡಿಸಿದೆ. ಈಗ ಜಯಸೂರ್ಯ ಗರಡಿಯ ಹುಡುಗ್ರು ಟೂರ್ನಿಯಿಂದಲೇ ಹೊರಗಟ್ಟೋಕೆ ರೆಡಿಯಾಗಿದ್ದಾರೆ. ಆದ್ರೆ ಈ ಸೂರ್ಯಗ್ರಹಣವನ್ನ ಬಿಡಿಸ್ಕೊಂಡು ಪಾಕಿಸ್ತಾನ ಮತ್ತೆ ಫೈನಲ್ಗೆ ಬರೋ ಚಾನ್ಸಸ್ ಕೂಡ ಇದೆ. ಮತ್ತೊಮ್ಮೆ ಭಾರತಕ್ಕೆ ಎದುರಾಳಿಯಾಗೋ ಅವಕಾಶವೂ ಇದೆ.
ಲಂಕಾ ವಿರುದ್ಧ ಪಾಕ್ ಫೈಟ್.. ಗೆದ್ರಷ್ಟೇ ಫೈನಲ್ ರೇಸ್ ಜೀವಂತ!
ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತದ ಪಂದ್ಯಗಳು ನಡೀತಿದ್ದು 2 ಪಂದ್ಯಗಳು ಮುಗಿದಿವೆ. ಮೂರನೇ ಪಂದ್ಯವು ಸೆಪ್ಟೆಂಬರ್ 23 ರಂದು ಅಂದ್ರೆ ಇವತ್ತು ಅಬುಧಾಬಿಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಸೂಪರ್ 4 ನಲ್ಲಿ ತಲಾ ಒಂದೊಂದು ಪಂದ್ಯವನ್ನ ಸೋತಿವೆ. ಹೀಗಾಗಿ ಇವತ್ತಿನ ಮ್ಯಾಚ್ ಇಬ್ಬರಿಗೂ ಕೂಡ ಮಾಡು ಇಲ್ಲವೇ ಮಡಿ ಎನ್ನುವಂತಿದೆ. ಗೆದ್ದ ತಂಡ ಫೈನಲ್ ರೇಸ್ನಲ್ಲಿ ಉಳಿದ್ರೆ ಸೋತ ತಂಡ ಟೂರ್ನಿಯಿಂದಲೇ ಹೊರ ಬೀಳಲಿದೆ. ಅಂದ್ರೆ ನಾವಿಲ್ಲಿ ಭಾರತದ ಸ್ಟಾಟ್ಸ್ ಹೇಳ್ತಿಲ್ಲ. ಯಾಕಂದ್ರೆ ಭಾರತ ಈ ಸಲವೂ ಅಜೇಯವಾಗಿ ಫೈನಲ್ಗೆ ಲಗ್ಗೆ ಇಡೋ ಎಲ್ಲಾ ಪಾಸಿಬಿಲಿಟೀಸ್ ಇದೆ. ಸೋ ಫೈನಲ್ಗೇರೋ ಇನ್ನೊಂದು ತಂಡ ಯಾವುದು ಅನ್ನೋದೇ ಈಗಿರೋ ಪ್ರಶ್ನೆ. ಸದ್ಯದ ಸಿನಾರಿಯೋ ನೋಡಿದ್ರೆ ಮೂರು ತಂಡಗಳಿಗೂ ಅವಕಾಶ ಇದೆ.
ಪಾಕ್, ಲಂಕಾ & ಬಾಂಗ್ಲಾ.. ಮೂರೂ ತಂಡಗಳಿಗೂ ಫೈನಲ್ ಚಾನ್ಸ್!
ಸೆಪ್ಟೆಂಬರ್ 21 ರಂದು ನಡೆದ ಭಾರತ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಹಾಗಂತ ಫೈನಲ್ ಕನಸು ಇನ್ನೂ ಭಗ್ನವಾಗಿಲ್ಲ. ಇವತ್ತು ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕು. ಭಾರತದ ವಿರುದ್ಧ ಹೀನಾಯವಾಗಿ ಸೋತಿರೋದ್ರಿಂದ ಲಂಕಾ ವಿರುದ್ಧ ಬಿಗ್ ಮಾರ್ಜಿನ್ ವಿಕ್ಟರಿ ಬೇಕಾಗುತ್ತೆ. ಅದಾದ ಬಳಿಕ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಗೆದ್ರೆ ಫೈನಲ್ ಗೇರುವ ಚಾನ್ಸಸ್ ಇದೆ. ಮತ್ತೊಂದೆಡೆ ಟೀಮ್ ಇಂಡಿಯಾದ ಮುಂದಿನ ಎದುರಾಳಿಗಳು ಬಾಂಗ್ಲಾದೇಶ್ ಮತ್ತು ಶ್ರೀಲಂಕಾ. ಬಾಂಗ್ಲಾದೇಶ್ ತಂಡವು ಭಾರತ ಹಾಗೂ ಪಾಕಿಸ್ತಾನ್ ವಿರುದ್ಧ ಸೋತರೆ 2 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಉಳಿಯಲಿದೆ. ಲಂಕಾ ಪಡೆ ಈಗಾಗಲೇ ಒಂದು ಪಂದ್ಯ ಸೋತಿರೋದ್ರಿಂದ ಪಾಕ್ ವಿರುದ್ಧ ಗೆದ್ದು ಭಾರತದ ವಿರುದ್ಧ ಸೋತರೂ ಫೈನಲ್ ರೇಸ್ನಲ್ಲಿರುತ್ತೆ. ಹೀಗಾಗ್ಬೇಕು ಅಂದ್ರೆ ಬಾಂಗ್ಲಾ ತನ್ನ ಮುಂದಿನ ಎರಡೂ ಪಂದ್ಯಗಳನ್ನ ಸೋಲಬೇಕಾಗುತ್ತೆ. ಪಾಕಿಸ್ತಾನ್ ತಂಡವು ಬಾಂಗ್ಲಾದೇಶ್ ಹಾಗೂ ಶ್ರೀಲಂಕಾ ವಿರುದ್ಧ ಜಯ ಸಾಧಿಸುವುದರೊಂದಿಗೆ ಒಟ್ಟು 4 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಫೈನಲ್ಗೆ ಪ್ರವೇಶಿಸಬಹುದು. ಅದೂ ಅಲ್ದೇ ಏಷ್ಯಾಕಪ್ ಟೂರ್ನಿ ರೌಂಡ್ ರಾಬಿನ್ ಫಾರ್ಮ್ಯಾಟ್ನಲ್ಲಿ ನಡೆಯೋದ್ರಿಂದ ಯಾವುದೇ ಸೆಮಿಫೈನಲ್ ಪಂದ್ಯ ಇರುವುದಿಲ್ಲ. ಬದಲಾಗಿ ಸೂಪರ್-4 ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ.
ಸೂರ್ಯಗ್ರಹಣ ಬಿಡಿಸಿಕೊಳ್ಳುತ್ತಾ ಪಾಕಿಸ್ತಾನ?
ಪ್ರಸ್ತುತ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಕಾಡ್ತಿರೋದೇ ಸೂರ್ಯಗ್ರಹಣ. ಆಲ್ರೆಡಿ ಭಾರತದ ವಿರುದ್ಧ ಪಾಕ್ ಎರಡು ಪಂದ್ಯಗಳನ್ನ ಸೋತಿದೆ. ಅಂದ್ರೆ ಸೂರ್ಯಕುಮಾರ್ ನಾಯಕತ್ವದ ಆಟಗಾರರು ಪಾಕ್ಗೆ ಸರಿಯಾಗೇ ಬೆಂಡೆತ್ತಿದ್ದಾರೆ. ಈಗ ಲಂಕಾದಲ್ಲೂ ಸೂರ್ಯನದ್ದೇ ಕಾಟ. ಲಂಕಾ ತಂಡದ ದ್ರೋಣಾಚಾರ್ಯ ಆಗಿರೋ ಜಯಸೂರ್ಯ ಪಾಕಿಸ್ತಾನವನ್ನ ಮನೆಗೆ ಕಳಿಸೋಕೆ ಸರ್ವತಂತ್ರಗಳನ್ನೂ ರೆಡಿ ಮಾಡಿದ್ದಾರೆ. ಏಷ್ಯಾಕಪ್ನ ಇತಿಹಾಸದಲ್ಲೇ ಹೈಯೆಸ್ಟ್ ಫೈನಲ್ ಪ್ರವೇಶ ಪಡೆದಿರೋ ತಂಡ ಶ್ರೀಲಂಕಾ. ಕಪ್ ಗೆದ್ದಿರೋದು ಭಾರತವೇ ಆಗಿದ್ರೂ 16 ಆವೃತ್ತಿಗಳಲ್ಲಿ 13 ಸಲ ಲಂಕಾ ಫೈನಲ್ ಪ್ರವೇಶಿಸಿದೆ. ಈ ಪೈಕಿ 6ರಲ್ಲಿ ಗೆದ್ದು 7ಸಲ ರನ್ನರ್ ಅಪ್ ಆಗಿದೆ. ಇನ್ನು ಭಾರತ 8 ಸಲ ಟೈಟಲ್ ಗೆದ್ದು 3 ಸಲ ರನ್ನರ್ ಅಪ್ ಆಗಿದೆ. ಅಂದ್ರೆ 11 ಸಲ ಫೈನಲ್ ಪ್ರವೇಶಿಸಿದೆ. ಈ ಸಲ ಕೂಡ ಭಾರತದ ಜೊತೆಗೆ ಲಂಕಾವೇ ಫೈನಲ್ಗೆ ಬರೋದು ಅಂತಾ ಪ್ರೆಡಿಕ್ಟ್ ಮಾಡಲಾಗಿತ್ತು. ಲೀಗ್ ಹಂತದಲ್ಲಿ ಅಜೇಯವಾಗಿ ಗೆದ್ದವ್ರು ಸೂಪರ್ 4ನಲ್ಲಿ ಬಾಂಗ್ಲಾ ವಿರುದ್ಧ ಹೇಗೆ ಸೋತ್ರು ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಬಟ್ ಇವತ್ತಿನ ಪಾಕ್ ವಿರುದ್ಧದ ಮ್ಯಾಚಲ್ಲಿ ಬಿಗ್ ಮಾರ್ಜಿನ್ನಲ್ಲಿ ಗೆದ್ದು ಕಮ್ ಬ್ಯಾಕ್ ಮಾಡೋಕೆ ಜಯಸೂರ್ಯ ಎಲ್ಲಾ ತಂತ್ರಗಳನ್ನ ಮಾಡಿದ್ದಾರೆ. ತಾನು ಕೋಚ್ ಆಗಿರುವಾಗಲೇ ಲಂಕಾದ ಗತವೈಭವ ಬರ್ಬೇಕು ಅಂತಾ ಪಣ ತೊಟ್ಟಿದ್ದಾರೆ. ಯಾಕಂದ್ರೆ ಈ ಮ್ಯಾಚಲ್ಲಿ ಗೆದ್ರಷ್ಟೇ ಅವ್ರು ಫೈನಲ್ ರೇಸ್ನಲ್ಲಿ ಉಳೀತಾರೆ. ಪಾಕಿಸ್ತಾನ ವಿರುದ್ಧ ಗೆಲ್ಲೋಕೆ ಫಿಫ್ಟಿ ಫಿಫ್ಟಿ ಪರ್ಸೆಂಟ್ ಚಾನ್ಸಸ್ ಇದೆ. ಬಟ್ ನೆಕ್ಸ್ಟ್ ಮ್ಯಾಚ್ ಇರೋದು ಭಾರತದ ವಿರುದ್ಧ. ಅಲ್ಲಿ ಭಾರತ 80 ಪರ್ಸೆಂಟ್ ವಿನ್ನಿಂಗ್ ಪಾಸಿಬಿಲಿಟೀಸ್ ಇದ್ರೆ ಲಂಕಾಗೆ 20 ಪರ್ಸೆಂಟ್ ಅಷ್ಟೇ ಇದೆ. ಸೋ ಪಾಕ್ ವಿರುದ್ಧದ ಪಂದ್ಯವನ್ನ ಗೆಲ್ಲೋದಷ್ಟೇ ಲಂಕಾಗಿರೋ ಏಕೈಕ ದಾರಿ.
ಏಷ್ಯಾಕಪ್ಗೆ ಫೈನಲ್ಗೆ ಭಾರತ ಕಾಲಿಡೋದು ಪಕ್ಕಾ. ಬಟ್ ಅಜೇಯವಾಗಿ ಎಂಟ್ರಿ ಕೊಡೋದಷ್ಟೇ ಈಗಿರೋ ಚಾಲೆಂಜ್. ಅದನ್ನ ಬಿಟ್ರೆ ಎದುರಾಳಿ ಯಾರು ಅನ್ನೋ ಪ್ರಶ್ನೆಗೆ ಕೊನೇ ಪಂದ್ಯದವರೆಗೂ ಕಾಯ್ಲೇಬೇಕಾಗುತ್ತೆ. ಸದ್ಯಕ್ಕೆ ಮೂರೂ ತಂಡಗಳಿಗೂ ಚಾನ್ಸಸ್ ಇದೆ.

ನೋಡಿರಿ

