ಕಾಂತಾರ ಕಾಡಲ್ಲಿ ಫಾರಿನರ್ಸ್ ಯಾಕೆ? – ಶೆಟ್ರೇ.. ಇದು ‘ಬೆರ್ಮೆ’ ದೈವದ ಕಥೆನಾ?
ಪಿನ್ to ಪಿನ್ ರೀ-ಕ್ರಿಯೇಟ್

ಕಾಂತಾರ ಕಾಂತಾರ.. ಮತ್ತೆ ಕಾಂತಾರ ಲೋಕಕ್ಕೆ ಹೋಗೋಕೆ ಜನ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಕಾಂತಾರ ಟ್ರೇಲರ್ ನೋಡಿದವರಿಗೆ ಕಥೆ ಏನು ಅಂತ ಅರ್ಥ ಆದ್ರೂ ಕೆಲ ಕನ್ಫೂಸ್ ಇದೆ.. ಕಾಂತಾರ ಚಾಪ್ಟರ್ 1 ಕಥೆಯಲ್ಲಿ ರಿಷಭ್ ಶೆಟ್ಟಿ ಪಾತ್ರ ಏನು? ದೈವನಾ? ದೇವರಾ? ಶಿವನಾ ಪರಶುರಾಮನಾ?.. ಕಾಡಲ್ಲಿ ಸಿಗೋ ಮಗು ರಿಷಭ್‌ಗೆ ಬೆರ್ಮೆ ಅಂತ ಯಾಕೆ ಕಾರೆಯುತ್ತಾರೆ? ಬೆರ್ಮೆ ಅಂದ್ರೆ ಏನು?ಬೆರ್ಮೆ ಹೇಗೆ ದೈವಗಳ ಅಧಿ ದೈವ ಆಗಿದ್ದು? ಕಾಂತಾರ ದಲ್ಲಿ ಗುಳಿಗ ಹಾಗೂ ಪಂರ್ಜುಲಿ ಪಾತ್ರ ಮಾಡಿದ್ದ ರಿಷಭ್ ಕಾಂತಾರ ಚಾಪ್ಪರ್ 1ನಲ್ಲಿ ಬೆರ್ಮೆ ಆಗಿ ಕಾಣಿಸಿಕೊಂಡಿದ್ದು ಯಾಕೆ? ಎಲ್ಲದ್ದಕ್ಕಿಂತ ಹೆಚ್ಚಾಗಿ ದೈವದ ಕಥೆಯಲ್ಲಿ ಫಾರಿನರ್ಸ್ ಯಾಕೆ ಕಾಣಿಸಿಕೊಂಡ್ರು? ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: ವರದಕ್ಷಿಣೆ ಕೊಟ್ಟಿಲ್ಲ ಎಂದು ವಿಷ ಸರ್ಪದ ಜೊತೆ ಸೊಸೆಯನ್ನು ಕೂಡಿ ಹಾಕಿದ ಅತ್ತೆ-ಮಾವ!
ಕಾಂತಾರ ಚಾಪ್ಪರ್ 1 ಶುರುವಾಗೋದು ಕಾಂತಾರದಲ್ಲಿ ಪಂಜುರ್ಲಿ ದೈವದ ವೇಷದಲ್ಲಿದ್ದ ರಿಷಭ್ ಶೆಟ್ಟಿ ಕಾಡಿನೊಳಗೆ ಹೋಗಿ ಕಾಣೆ ಯಾಗ್ತಾರೆ. ಇದ್ರ ಹಿಂದೆ ಓಡಿ ಬರೋ ಹುಡುಗ ಅಪ್ಪಯ್ಯ ಯಾಕೆ ಮಾಯವಾಗಿದ್ದು ಅನ್ನೋದ್ದನ್ನ ಕೇಳ್ತಾನೆ.. ಅಲ್ಲಿದ್ದ ಒಬ್ಬರು ಹೇಳ್ತಾರೆ ನಮ್ಮ ಹಿರಿಯರು ಇದಿದ್ದು ಇಲ್ಲೇ ,ಅದೊಂದು ದೊಡ್ಡ ದಂತೆ ಕಥೆ ಅಂತ ಹೇಳ್ತಾರೆ. ಅಲ್ಲಿಂದ ಕಥೆ ಶುರುವಾಗುತ್ತೆ. ಕಥೆ ಕೇಳುವ ಹುಡುಗ ಯಾರು ಅನ್ನೋ ಒಂದು ಡೌಟ್ ಇದೆ. ಇದು ಕಾಂತಾರದ ಶಿವಣ್ಣನ ಮಗ ಅಲ್ಲ ಅನ್ಸುತ್ತೆ..ಕಾಂತಾರ ಚಾಪ್ಪರ್ 1ನಲ್ಲಿ ತೋರಿಸೋ ಹುಡುಗ ಶಿ ಶಿವಣ್ಣನೇ.. ಯಾಕಂದ್ರೆ ಶಿವಣ್ಣ ಮಾಯ ಆಗ್ತಾ ಶಿವಣ್ಣನಿಗೆ ಮಗು ಆಗಿರಲ್ಲ.. ಆದ್ರೆ ಶಿವಣ್ಣನ ಅಪ್ಪ ದೈವವಾಗಿ ಮಾಯಾ ಆಗ್ತಾ ಆ ದೈವದ ಹಿಂದೆ ಕಾಡಿಗೆ ಶಿವಣ್ಣ ಕೂಡ ಓಡಿ ಹೋಗ್ತಾನೆ. ಅಲ್ಲಿಗೆ ಶಿವಣ್ಣನೇ ಕೇಳೋದು ಅನ್ಸುತ್ತೆ.. ಅಪ್ಪಯ್ಯ ಇಲ್ಲಿ ಮಾಯ ಆಗಿದ್ದು ಯಾಕೆ ಅನ್ನೋದು.. ಅಲ್ಲದೇ ಕಾಂತಾರದಲ್ಲಿ ಶಿವಣ್ಣ ಆಗಿದ್ದ ಹುಡುಗನನ್ನ ಇಲ್ಲಿ ತೋರಿಸಿ ಕಾಂತಾರ ಕಥೆಗೆ ಕಂಟಿನ್ಯೂಟಿ ಕೊಟ್ಟಿದ್ದಾರೆ.
ಇನ್ನು 3 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ‘ಕಾಂತಾರ’ ಚಿತ್ರದಲ್ಲಿ ತುಳುನಾಡಿನ ದೈವಗಳು, ಅಲ್ಲಿನ ಸಂಸ್ಕೃತಿಯನ್ನು ರಿಷಬ್ ತೆರೆ ಮೇಲೆ ತಂದಿದ್ದರು. ಅದರಲ್ಲಿ ಪಂಜುರ್ಲಿ ದೈವಗಳ ವಿಚಾರಗಳನ್ನು ತಿಳಿಸಿದ್ದರು. ಗೂಳಿಗನ ಆರ್ಭಟ ಕೂಡ ತೋರಿಸಿದ್ರು. ಇದೀಗ ಪ್ರೀಕ್ವೆಲ್‌ನಲ್ಲಿ ಅವರು ಆದಿ ದೈವ ಬೆರ್ಮೆಯ ಇತಿಹಾಸವನ್ನು ಹೇಳಹೊರಟಿದ್ದಾರೆ. ಅಂದ್ರೆ ಪಂರ್ಜುಲಿ ಗೂಳಿಗ ದೈವಗಳ ಅಧಿ ದೈವ ಆಗಿರೋ ಬೆರ್ಮೆ ದೈವದ ಕಥೆ ಇದಾಗಿದೆ. ನಿಮ್ಗ ಗೊತ್ತಿರಲಿ ದೈವ ಅಂದ್ರೆ ದೇವರಲ್ಲ.. ಮನುಷ್ಯರೇ ದೈವ ಆಗೋದು.. ಮನುಷ್ಯರಾಗಿದ್ದಾಗ ವೀರ ಕೆಲಸ ಮಾಡಿ ಅಕಾಲ ಮರಣಕ್ಕೆ ತುತ್ತಾಗಿ ಅನಂತರ ಭೂತಗಳಾಗಿ ದೈವತ್ವ ಹೊಂದಿ ಆರಾಧನೆಗೊಳ್ಳುತ್ತವೆ. ಈಗ ನಾವು ಕಾರವಾಳಿಯಲ್ಲಿ ಆರಾಧನೆ ಮಾಡೋ ಎಲ್ಲಾ ದೈವಗಳು ಹೀಗೆ ಹುಟ್ಟಿಕೊಂಡಿರೋದು.. ಕೊರಗಜ್ಜ ಕೂಡ ..ಮನುಷ್ಯರಾಗಿದ್ರು ಆಮೇಲೆ ದೈವ ರೂಪ ತಾಳ್ತಾರೆ. ಹಾಗೇ ಕಾಂತಾರ ಚಾಪ್ಪರ್ 1 ನಲ್ಲಿ ತೋರಿಸೋಕೆ ಹೊರಟ್ಟಿದ್ದು ಬೆರ್ಮೆ ದೈವದ ಕಥೆ..
ತುಳುನಾಡಿನಲ್ಲಿ ಬೆರ್ಮೆ ಎಂಬ ದೈವ ಬ್ರಹ್ಮನ ಪ್ರತಿರೂಪವೇ ಆಗಿದೆ. ಇವನಿಗೆ ನಾಲ್ಕು ಮುಖ ಮತ್ತು ನಾಲ್ಕು ಕೈಗಳು, ಕೈಗಳಲ್ಲಿ ಖಡ್ಗ, ಡಮರು ಕಪಾಲ ಮತ್ತು ಕಠಾರಿ ಮೊದಲಾದ ಆಯುಧಗಳಿವೆ. ಇಲ್ಲಿ ರಿಷಭ್ ಶೆಟ್ಟಿ ಕೂಡ ಹಿಡಿದಿರೋದು ಡಮರು.. ಜನ ಇಲ್ಲಿ ತಪ್ಪು ತಿಳಿದುಕೊಂಡಿದ್ರು ಕಾಂತಾರ ಚಾಪ್ಪರ್ 1ನಲ್ಲಿ ರಿಷಭ್ ಪರಶುರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಅಂತ. ಬಟ್ ಟ್ರೇಲರ್‌ನಲ್ಲಿ ಹಾಗೇ ತೋರಿಸಿಲ್ಲ.. ಟ್ರೇಲರ್‌ನಲ್ಲಿ ಒಂದು ಡೈಲಾಗ್ ಬರುತ್ತೆ.. ಯಾವಾಗೆಲ್ಲಾ ಮನುಷ್ಯ ಅಧರ್ಮದ ಕಡೆ ಸಾಗುತ್ತಾನೆ ಆಗ ಧರ್ಮಗಳನ್ನ ಕಾಪಾಡುವುದ್ದಕ್ಕೆ ಈಶ್ವರ ದೇವರು ಗಣಗಳನ್ನ ಕಳುಹಿಸುತ್ತಾನೆ ಅನ್ನೋದು. ಆ ಗಣಗಳು ನೆಲಸಿದ್ದು ಈ ಪುಣ್ಯ ಮಣ್ಣಿನಲ್ಲಿ ಅನ್ನೋದ್ದನ್ನ ಹೇಳಿ.. ಕಾಡಿನಲ್ಲಿ ಮಗು ಸಿಗುವುದ್ದನ್ನ ತೋರಿಸಿದ್ದಾರೆ. ಅದ್ದನ್ನ ಕಾಯುವುದ್ದಕ್ಕೆ ಹುಲಿ ಕೂಡ ಇರುತ್ತೆ.. ನಂತ್ರ ಆ ಮಗು ಕಾಡಿನಲ್ಲಿ ವಾಸ ಇರೋ ಬುಡಕಟ್ಟು ಜನರ ಕೈಗೆ ಸಿಕ್ಕಾಗ. ಅದ್ದನ್ನ ಎತ್ತಿಕೊಳ್ಳುವ ತಾಯಿಯೊಬ್ಬಳು ಆ ಮಗುವಿಗೆ ಬೆರ್ಮೆ ಅಂತ ಹೆಸರನ್ನ ಇಡುತ್ತಾರೆ.. ಬೆರ್ಮೆರ್ ಅರ್ಥವಾ ಬೆರ್ಮೆ ಅಂದ್ರೆ ತುಳುನಾಡಿನ ಆದಿ ದೈವ, ಪ್ರಮುಖ ದೈವ. ತುಳುನಾಡಿನ ಸೃಷ್ಟಿಕರ್ತ ಮತ್ತು ಎಲ್ಲ ದೈವಗಳ ಅಧಿನಾಯಕನೆಂದು ನಂಬಲಾಗುತ್ತದೆ. ಎಲ್ಲಾ ದೈವಗಳ ಅದಿ ನಾಯಕ ಅಂತಾನೇ ಬೆರ್ಮೆ ದೈವವನ್ನ ಕರೆಯುತ್ತಾರೆ.. ಅದೇ ಕಥೆಯಲ್ಲಿ ಶೆಟ್ರು ಹೇಳುವುದ್ದಕ್ಕೆ ಹೊರಟ್ಟಿದ್ದು.. ಬೆರ್ಮೆ ದೈವರ ವಿಗ್ರಗಳನ್ನ ನೋಡಿದ್ರೆ ಅವರು ಕುದುರೆ ಮೇಲೆ ಕುತ್ತಿರುವುದು ಕಾಣುತ್ತೆ. ಅಂದ್ರೆ ಇಲ್ಲಿ ನೀಟಾಗಿ ಗೊತ್ತಾಗುತ್ತೆ ರಿಷಭ್ ಶೆಟ್ರು ಹೇಳುವುದ್ದಕ್ಕೆ ಹೊರಟ್ಟಿದ್ದು ಬೆರ್ಮೆ ದೈವರ ಕಥೆ.. ಅವರು ಹೇಗೆ ಭೂಮಿಗೆ ಬಂದ್ರು.. ಹೇಗೆ ದುಷ್ಟರನನ್ನ ಕೆಟ್ಟ ರಾಜನನ್ನ ಉಗ್ರ ರೂಪ ತಾಳಿ ಸಂಹಾರ ಮಾಡಿ ನೆಲೆ ನಿಂತ್ರು.. ಹಾಗೇ ಪಂಜರ್ಲಿ ಗುಳಿಗ ದೇವರು ಸೇರಿದಂತೆ ಕರಾವಳಿ ದೈವಗಳಿಗೆ ಬೆರ್ಮೆ ದೇವರು ಹೇಗೆ ಅಧಿ ದೇವತೆ ಆದ್ರು.. ಬೇಸರ ಆಗಿದ್ದಕ್ಕೆ ಆ ಜಾಗಕ್ಕೆ ಪಂರ್ಜುಲಿ ವೇಷ ಧರಿಸಿದ್ದ ಶಿವಣ್ಣನ ಅಪ್ಪ ಮತ್ತು ಶಿವಣ್ಣ ಹೋಗಿ ಮಾಯ ಆದ್ರೂ ಅನ್ನೋದು ಕಾಂತಾರ ಚಾಪ್ಪರ್ 1 ಕಥೆ ಅನ್ನೋದು ನನ್ನ ಕಲ್ಪನೆ..
ತುಳುನಾಡನ್ನು ಬೆರ್ಮೆ ಸೃಷ್ಟಿಸಿದ್ದಾ? ಪರುಶುರಾಮ ಸೃಷ್ಟಿಸಿದ್ದಾ? ಎನ್ನುವ ಚರ್ಚೆ ಕೂಡ ಇದೆ. ಬೆರ್ಮೆರಾಧನೆ ತುಳುನಾಡಿನ ಮೂಲ ಧರ್ಮದ ಒಂದು ಭಾಗ. ನಾಗರಾಧನೆ ಮತ್ತು ದೈವಾರಾಧನೆಯೊಂದಿಗೆ ಬೆರ್ಮೆರನ್ನು ಅಲ್ಲಿ ಪೂಜಿಸಲಾಗುತ್ತದೆ. ಇದೇ ಕಾರಣಕ್ಕೆ ‘ಕಾಂತಾರ- 1’ ಸಿನಿಮಾ ಕತೆ ಬಗ್ಗೆ ಬಹಳ ಕುತೂಹಲ ಮೂಡುತ್ತದೆ. ಬೆರ್ಮೆ ದೇವರ ಬಗ್ಗೆ ಸಾಕಷ್ಟು ಕಥೆ ಇದೆ..ಒಬ್ಬೊಬ್ಬರು ಒಂದೊಂದು ಕಥೆ ಹೇಳ್ತಾರೆ.. ಹೀಗಿಯೇ ರಿಷಭ್ ಶೆಟ್ರು ಕಾಂತಾರ ಇದೊಂದು ದಂತಕಥೆ ಅಂತ ಹೇಳಿದ್ದು. ದಂತ ಕಥೆ ಅಂದ್ರೆ ಹಾಗೇ ಅಲ್ವಾ ಜನರಿಂದ ಜನರಿಗೆ, ತೆಲ ತಲೆತಲಾಂತರರಿಂದ ಹರಡಿ ಬಂದಿರೋ ಕಥೆಗೆ ದಂತೆಕಥೆ ಅಂತಾರೆ.. ಈ ಕಥೆಯ ಒಂದು ಎಳೆಯನ್ನ ಇಟ್ಟುಕೊಂಡು ಕಾಂತಾರ ಚಾಪ್ಪರ್ 1 ಮಾಡಿದ್ದಾರೆ ಅನ್ಸುತ್ತೆ..
ಪಿನ್ to ಪಿನ್ ರೀ-ಕ್ರಿಯೇಟ್
ಇಲ್ಲಿ ಸಾಕಷ್ಟು ಜನಕ್ಕೆ ಟ್ರೇಲರ್ ಬಂದ ಮೇಲೆ ಒಂದು ಡೌಟ್ ಇದೆ. ಕಾಂತಾರ ಚಾಪ್ಪರ್ 1ನಲ್ಲಿ ರಿಷಭ್ ಶೆಟ್ರು ಯಾರೆ ಫಾರಿನ್ ಅವರನ್ನ ತೋರಿಸಿದ್ದಾರೆ. ಅವರಿಗೇ ದೈವದ ಸಿನಿಮಾದಲ್ಲಿ ಏನ್ ಕೆಲಸ ಅನ್ನೋದು.. ಬಟ್ ಶೆಟ್ರು ಪಿನ್ ಟು ಪಿನ್ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಟ್ರೇಲರ್‌ನಲ್ಲಿ ರಾಣಿ ಕನಕವತಿ ಜೊತೆಗೆ ರಿಷಬ್ ಶೆಟ್ಟಿ ಸುತ್ತಾಡೋ ದೃಶ್ಯಗಳೂ ಇವೆ. ಮಾರುಕಟ್ಟೆಯಲ್ಲಿ ಓಡಾಡೋ ಈ ಜೋಡಿ ದೃಶ್ಯಗಳು ಇಂಟ್ರಸ್ಟಿಂಗ್ ಅನಿಸುತ್ತವೆ. ರಿಷಬ್ ಶೆಟ್ರು ಮತ್ತು ಕನಕವತಿ ಓಡಾಡೋ ದೃಶ್ಯಗಳ ಬ್ಯಾಕ್‌ಗ್ರೌಂಡ್‌ನಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ. ಇವರು ಯಾಕ್ ಬಂದ್ರು ಅಂತ ಅನಿಸಬಹುದು.. ಆ ಕಾಲದಲ್ಲಿ ಭಾರತಕ್ಕೆ ವಿದೇಶಿಯರು ಬರ್ತಿದ್ದರು ಅನ್ನೋದನ್ನ ಇಲ್ಲಿ ತೋರಿಸಲಾಗಿದೆ. ನೋಡಿ ಈ ಫೋಟೋ ನೋಡಿದ್ರೆ ನಿಮ್ಗೆ ಗೊತ್ತಾಗುತ್ತೆ.. ಇವರೆಲ್ಲಾ ನಮ್ಮ ನೆರೆಯ ದೇಶದವರು ಚೀನಾದವರು. ಇವರು ತಾವು ತಯಾರಿಸಿದ ಪಿಂಗಾಣಿ ವಸ್ತುಗಳನ್ನ ಕೊಟ್ಟು, ಕಾಂತಾರ ಜನರಿಂದ ಅವರು ಕಾಡಿನಲ್ಲಿ ಬೆಳೆದ ಸಾಂಬಾರು ಪದಾರ್ಥಗಳನ್ನ ತೆಗೆದುಕೊಂಡು ಹೋಗುತ್ತಿದ್ದರು.. ಅವರು ಇಲ್ಲಿಗೆ ಬಂದು ಇಲ್ಲಿನ ಜನಕ್ಕೆ ಅವರ ಆಹಾರವನ್ನ ತಯಾರಿಸಿಕೊಡುತ್ತಿದ್ದರು.. ಅದ್ದನ್ನ ಕಾಂತಾರ ಚಾಪ್ಪರ್ 1ನಲ್ಲಿ ರೀ ಕ್ರಿಯೇಟ್ ಮಾಡಿದ್ದಾರೆ ಶೆಟ್ರು.

ನೋಡಿರಿ

