ವರದಕ್ಷಿಣೆ ಕೊಟ್ಟಿಲ್ಲ ಎಂದು ವಿಷ ಸರ್ಪದ ಜೊತೆ ಸೊಸೆಯನ್ನು ಕೂಡಿ ಹಾಕಿದ ಅತ್ತೆ-ಮಾವ!

ವರದಕ್ಷಿಣೆ ಕೊಟ್ಟಿಲ್ಲ ಎಂದು ವಿಷ ಸರ್ಪದ ಜೊತೆ ಸೊಸೆಯನ್ನು ಕೂಡಿ ಹಾಕಿದ ಅತ್ತೆ-ಮಾವ!

ಕೈಯಲ್ಲಿ ಒಳ್ಳೆ ಕೆಲಸ ಇದೆ.. ಕೈ ತುಂಬಾ ಸಂಬಳ ಬರ್ತಿದೆ ಅನ್ನೋ ಯುವಕರಿಗೂ ಈಗ ಮದುವೆಯಾಗಲು ಹೆಣ್ಣು ಸಿಗ್ತಾ ಇಲ್ಲ ಅನ್ನೋದು ದೊಡ್ಡ ತಲೆನೋವಾಗಿದೆ. ಆದ್ರೂ ಈ ವರದಕ್ಷಿಣೆ ಪಿಡುಗು ನಿಲ್ತಿಲ್ಲ. ಮನೆಗೆ ಸೊಸೆ ಕಾಲಿಡ್ತಿದ್ದಂತೆ ವರದಕ್ಷಿಣೆ ಕಿರುಕುಳ ಕೊಡಲು ಶುರುಮಾಡ್ತಾರೆ. ಇದೀಗ ಇಲ್ಲೊಂದು ಕಡೆ ಇಂತಹದ್ದೇ ಘಟನೆ ನಡೆದಿದೆ. ಸೊಸೆ ತವರುಮನೆಯಿಂದ ವರದಕ್ಷಿಣೆ ತಂದಿಲ್ಲ ಎಂದು ಆಕೆಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ಕೋಣೆಯಲ್ಲಿ ಕೂಡಿ ಹಾಕಿ, ವಿಷಕಾರಿ ಹಾವನ್ನ ಬಿಟ್ಟಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆ ನಿರ್ಮಿಸಲು ಕೋಟಿ ಕೋಟಿ ಖರ್ಚು! – ಶೋ ಮುಗಿದ ಮೇಲೆ ಮನೆ ವಸ್ತು ಏನಾಗುತ್ತೆ?

ಏನಿದು ಘಟನೆ? 

ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಹಿಳೆಯು 2021 ರಲ್ಲಿ ವಿವಾಹವಾದರು. ಆರಂಭದಲ್ಲಿ, ಕೋಣೆಯ ನವೀಕರಣಕ್ಕಾಗಿ 1.5 ಲಕ್ಷ ರೂ. ಕೇಳಿದಾಗ, ಮಹಿಳೆಯ ಪೋಷಕರು ಹಣವನ್ನು ನೀಡಿದರು. ಆದರೆ ನಂತರ ಅವರು ಹೆಚ್ಚಿನ ಹಣವನ್ನು ಕೇಳಲು ಪ್ರಾರಂಭಿಸಿದ್ದಾರೆ.  ಆಕೆಯ ಪತಿ ಮತ್ತು ಅತ್ತೆ-ಮಾವ 5 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಈಡೇರದಿದ್ದಾಗ ಹಲವು ಬಾರಿ ಆಕೆಯ ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ಇದೀಗ ಮತ್ತೆ ಹಣಕ್ಕೆ ಅತ್ತೆ, ಮಾವ ಡಿಮ್ಯಾಂಡ್‌ ಮಾಡಿದ್ದು, ಆಕೆಯ ಪೋಷಕರು ಕೊಡದಿದ್ದಾಗ, ಅತ್ತೆ-ಮಾವ ಇಬ್ಬರೂ ಸೇರಿ ಮಹಿಳೆಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾರೆ.

ಸೊಸೆ ಕೊಲ್ಲಲು ವಿಷಕಾರಿ ಹಾವು ಬಿಟ್ಟ ಅತ್ತೆ, ಮಾವ!

ಮಹಿಳೆಗೆ ಎಷ್ಟು ಕಿರುಕುಳ ನೀಡಿದ್ರು, ಆಕೆಯ ಪೋಷಕರು ಹಣ ಕೊಟ್ಟಿಲ್ಲ. ಇದ್ರಿಂದ ಸಿಟ್ಟಾದ ಅತ್ತೆ, ಮಾವ, ಕೋಣೆಯೊಂದ್ರಲ್ಲಿ ಹಾವನ್ನು ಬಿಟ್ಟು, ಅದೇ ಕೋಣೆಯಲ್ಲಿ ಸೊಸೆಯನ್ನ ಕೂಡಿ ಹಾಕಿದ್ದಾರೆ. ಈ ವೇಳೆ ವಿಷಪೂರಿತ ಸರ್ಪವು ಮಹಿಳೆಗೆ ಕಚ್ಚಿದ್ದು, ಕೂಡಲೇ ಮಹಿಳೆಯು ತನ್ನ ಅಕ್ಕನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕಾಗಿಮಿಸಿದ ಅವರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದುಬಂದಿದೆ.

ಅತ್ತೆ ಮಾವನ ಮೇಲೆ ಆರೋಪ ಮಾಡಿದ ಮಹಿಳೆ!

ಅತ್ತೆ ಮಾವ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ವರದಕ್ಷಿಣೆ ನೀಡಿಲ್ಲ ಎಂದು ರೂಮ್‌ ನೊಳಗೆ ಹಾವು ಬಿಟ್ಟು ಕೂಡಿ ಹಾಕಿದ್ದಾರೆ.  ಹಾವು ಕಚ್ಚಿದೆ ಎಂದು ಅತ್ತೆ-ಮಾವಂದಿರಿಗೆ ತಿಳಿಸಿದೆ. ಆದರೆ, ಹಲವಾರು ಬಾರಿ ಮನವಿ ಮಾಡಿದರೂ ಅವರು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ಮಹಿಳೆ ನೋವಿನಿಂದ ಅಳುತ್ತಿದ್ದರೆ, ಆಕೆಯ ಅತ್ತೆ-ಮಾವ ಹೊರಗೆ ನಿಂತು ನಗುತ್ತಿದ್ದರು ಎಂದು ಆಕೆಯ ಸಹೋದರಿ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Shwetha M