ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಕೆಎಲ್ – ಗೋವಾ ಗಾರ್ಡಿಯನ್ಸ್‌ನ ಸಹ-ಮಾಲೀಕರಾದ ರಾಹುಲ್

ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಕೆಎಲ್  –  ಗೋವಾ ಗಾರ್ಡಿಯನ್ಸ್‌ನ ಸಹ-ಮಾಲೀಕರಾದ ರಾಹುಲ್

ಅಕ್ಟೋಬರ್ 2 ರಿಂದ 26 ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ಪ್ರೈಮ್ ವಾಲಿಬಾಲ್ಲೀ ಗ್‌ನ ನಾಲ್ಕನೇ ಸೀಸನ್‌ಗೂ ಮುನ್ನ ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ಗೋ ವಾ ಗಾರ್ಡಿಯನ್ಸ್   ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದಾರೆ. ಈ ಕುರಿತು ಮಾತನಾಡಿರುವ ರಾಹುಲ್, ‘ಇದು ನನಗೆ ಸಂತಸದ ಕ್ಷಣವೆಂದು ಭಾವಿಸುತ್ತೇನೆ, ಪಿವಿಎಲ್ ಭಾರತೀಯ ಕ್ರೀಡೆಗೆ ಮಹತ್ವದ ತಿರುವು ಇದ್ದಂತೆ. ಈ ಮೂಲಕ ವಾಲಿಬಾಲ್‌ ಅನ್ನು ಅತಿ ಹೆಚ್ಚು ಜನರು ಪ್ರೀತಿಸುವಂತೆ ಮಾಡಬಹುದು‘ ಎಂದರು. ‘ವಾಲಿಬಾಲ್ ನನ್ನ ನೆಚ್ಚಿನ ಕ್ರೀಡೆಗಳಲ್ಲಿ ಒಂದು. ಭಾರತದಲ್ಲಿ ಈ ಕ್ರೀಡೆಯನ್ನು ಮತ್ತಷ್ಟು ಬೆಳೆಸಲು ನನ್ನ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ‘ ಎಂದು ತಿಳಿಸಿದರು.

ಗೋವಾ ಗಾರ್ಡಿಯನ್ಸ್‌ನ ತಂಡದ ಪ್ರಧಾನ ಮಾಲೀಕ ಮತ್ತು ನೆಟೆನ್ರಿಚ್‌ನ ಸಂಸ್ಥಾಪಕ ರಾಜು ಚೇಕುರಿ ಮಾತನಾಡಿ, ‘ಕೆಎಲ್ ರಾಹುಲ್ ಅವರು ನಮ್ಮ ಮಾಲೀಕತ್ವದ ಗ್ರೂಪ್‌ಗೆ ಸೇರಿರುವುದು ಸಂತೋಷವಾಗಿದೆ. ವಾಲಿಬಾಲ್ ಆಟದ ಕುರಿತು ಅವರಿಗಿರುವ ಉತ್ಸಾಹ ಮತ್ತು ಅದರ ಸಾಮರ್ಥ್ಯದ ಮೇಲಿನ ನಂಬಿಕೆ ಅಭಿಮಾನಿಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಲಿದೆ. ಮಾತ್ರವಲ್ಲ, ಕ್ರೀಡಾಪಟುಗಳಿಗೆ ಅಧಿಕಾರ ನೀಡುವ ಫ್ರಾಂಚೈಸಿ ನಿರ್ಮಿಸಲು ನಮಗೆ ಸಹಕಾರಿಯಾಗಿದೆ‘ ಎಂದು ಹೇಳಿದರು.

ರಾಹುಲ್‌ ಸದ್ಯ ಮುಂದಿನ ತಿಂಗಳು ನಡೆಯಲಿರುವ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಗೆ ಸಿದ್ಧತೆ ನಡೆಸುತ್ತಿದ್ದಾರೆ. ರಿಷಭ್‌ ಪಂತ್‌ ಗಾಯಗೊಂಡು ಚೇತರಿಕೆಯಲ್ಲಿರುವ ಕಾರಣ ಅವರು ಈ ಸರಣಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಉಪನಾಯಕ ಜವಾಬ್ದಾರಿ ರಾಹುಲ್‌ ಹೆಗಲೇರುವ ಸಾಧ್ಯತೆಯೂ ಇದೆ.

Kishor KV