ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌! – ಬೇಬಿ ಬಂಪ್‌ ಫೋಟೋ ರಿವೀಲ್‌ ಮಾಡಿದ ಸ್ಟಾರ್‌ ದಂಪತಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ ಕೈಫ್‌! – ಬೇಬಿ ಬಂಪ್‌ ಫೋಟೋ ರಿವೀಲ್‌ ಮಾಡಿದ ಸ್ಟಾರ್‌ ದಂಪತಿ

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಬಾಲಿವುಡ್‌ ನ ಸ್ಟಾರ್‌ ಜೋಡಿ. ಮದ್ವೆ ಆಗಿ ನಾಲ್ಕು ವರ್ಷ ಆಯ್ತು.. ಗುಡ್‌ನ್ಯೂಸ್‌ ಇಲ್ವಾ ಅನ್ನೋ ಪ್ರಶ್ನೆ ಈ ದಂಪತಿಗೆ ಎದುರಾಗ್ತಿತ್ತು. ಇದೀಗ ಈ ಸ್ಟಾರ್‌ ಜೋಡಿ ಕಡೆಗೂ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಕತ್ರಿನಾ ಬೇಬಿ ಬಂಪ್‌ ಫೋಟೋ ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ: ಸಿನಿ ಪ್ರೇಮಿಗಳಿಗೆ ಬಿಗ್‌ ಶಾಕ್‌ –  200ರೂ. ಸಿನಿಮಾ ಟಿಕೆಟ್‌ ದರ ನಿಗದಿ ಆದೇಶಕ್ಕೆ ಹೈಕೋರ್ಟ್ ತಡೆ!

ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್  ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡ್ತಿತ್ತು.  ಆದ್ರೆ ಈ ಬಗ್ಗೆ ಸ್ಟಾರ್‌ ದಂಪತಿ ಯಾವುದೇ ಅಪ್‌ಡೇಟ್‌ ನೀಡಿರಲಿಲ್ಲ. ಇದೀಗ ಕತ್ರಿನಾ, ವಿಕ್ಕಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಪ್ರೆಗ್ನೆಸ್ಸಿ ಕುರಿತು ಈ ಜೋಡಿ ಇನ್ಸ್ಟಾಗ್ರಾಂನಲ್ಲಿ ಅಧಿಕೃತ ಘೋಷಣೆ ಮಾಡಿದೆ. ಕತ್ರಿನಾ ಬೇಬಿ ಬಂಪ್‌ ಫೋಟೋ ರಿವೀಲ್‌ ಮಾಡಿದ್ದಾರೆ. ಕತ್ರಿನಾ ಅವರ ಬೇಬಿ ಬಂಬ್‌ ಮೇಲೆ ವಿಕ್ಕಿ ಕೈ ಇಟ್ಟುಕೊಂಡು ಫೋಟೋ ತೆಗೆಸಿದ್ದಾರೆ. ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷದಿಂದ ಆಚರಿಸಲು ಸಿದ್ಧರಾಗಿದ್ದೇವೆಂದು ಅವರು ಬರೆದುಕೊಂಡಿದ್ದಾರೆ. ಕತ್ರಿನಾ  ಅಕ್ಟೋಬರ್-ನವೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು  ಎಂದು ಅವರ ಆಪ್ತ ಬಳಗ ಹೇಳಿದೆ.

ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ 2021 ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದ ಸುಂದರವಾದ ಸ್ಥಳದಲ್ಲಿ ವಿವಾಹವಾಗಿದ್ದರು. ಅದಾದ ಬಳಿಕ ಇಬ್ಬರು ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸಂತಾನ ಪೂಜೆ ಮಾಡಿದ್ದರು. ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದರು. ಇದಾದ ಬಳಿಕ ಕತ್ರಿನಾ ಸಿಹಿ ಸುದ್ದಿ ನೀಡಿದ್ದಾರೆ.

Shwetha M