ಸಿನಿ ಪ್ರೇಮಿಗಳಿಗೆ ಬಿಗ್‌ ಶಾಕ್‌ –  200ರೂ. ಸಿನಿಮಾ ಟಿಕೆಟ್‌ ದರ ನಿಗದಿ ಆದೇಶಕ್ಕೆ ಹೈಕೋರ್ಟ್ ತಡೆ!

ಸಿನಿ ಪ್ರೇಮಿಗಳಿಗೆ ಬಿಗ್‌ ಶಾಕ್‌ –  200ರೂ. ಸಿನಿಮಾ ಟಿಕೆಟ್‌ ದರ ನಿಗದಿ ಆದೇಶಕ್ಕೆ ಹೈಕೋರ್ಟ್ ತಡೆ!

ರಾಜ್ಯದ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಟಿಕೆಟ್ ದರಕ್ಕೆ ಕಡಿವಾಣವೇ ಇಲ್ಲದಂತೆ ಆಗಿತ್ತು. ಪರ ಭಾಷೆ ಸಿನಿಮಾಗಳಿಗೂ ಹೆಚ್ಚಿನ ದರ ವಿಧಿಸಲಾಗ್ತಿತ್ತು. ಇದ್ರಿಂದಾಗಿ ಸಿನಿಮಾ ಪ್ರೇಕ್ಷಕರು ತೊಂದರೆ ಅನುಭವಿಸಿದ್ರು. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಏಕರೂಪ ಸಿನಿಮಾ ಟಿಕೆಟ್‌ ದರ ಜಾರಿಗೆ ತಂದಿತ್ತು. ಆದ್ರೀಗ ಸರ್ಕಾರ ತಂದಿರುವ ನಿಯಮಗಳಿಗೆ ಹೈಕೋರ್ಟ್‌ ತಡೆ ನೀಡಿದೆ.

ಇದನ್ನೂ ಓದಿ: ಕೆಣಕಿದ ಹ್ಯಾರಿಸ್ ನೀರಿಳಿಸಿದ ಅಭಿಷೇಕ್ – ಗನ್ ಫೈರ್ ಬಿಲ್ಡಪ್.. ಫರ್ಹಾನ್ ರೋಸ್ಟ್

ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ ಸರ್ಕಾರ ಸಿನಿಮಾ ಟಿಕೆಟ್​ಗೆ  ಏಕದರ ನಿಯಮ ರೂಪಿಸಿತ್ತು. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ200 ರೂ ನಿಗದಿ ಮಾಡಿ ಸರ್ಕಾರದ ಆದೇಶ ನೀಡಿತ್ತು. ಈ ಮೂಲಕ ಪರಭಾಷ ಚಿತ್ರಗಳ ಲೂಟಿಯಿಂದ ಪ್ರೇಕ್ಷಕರ ಕಾಪಾಡಿದ ಸರ್ಕಾರ ಕೊನೆಗೂ ಕನ್ನಡ ಸಿನಿ ಪ್ರೇಕ್ಷಕರಿಗೆ ಗುಡ್​ನ್ಯೂಸ್ ಕೊಟ್ಟಿತ್ತು. ಈಗ ಅದಕ್ಕೆ ಹೈಕೋರ್ಟ್ ತಡೆ ನೀಡಿದೆ.

ಟಿಕೆಟ್‌ ದರ ನಿಗದಿ ಸಂಬಂಧ ಜಾರಿಗೆ ತಂದಿರುವ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ.ಕೆ. ಫಿಲ್ಮ್ಸ್‌ ತಕಾರರು ಅರ್ಜಿ ತ್ಯರ್ಥವಾಗುವವರೆಗೆ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು.ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಪೀಠ ಇಂದು ಮಧ್ಯಂತರ ತಡೆ ನೀಡಿ ಆದೇಶ ಪ್ರಕಟಿಸಿದೆ.

ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ದರ ನಿಗದಿ ಮಾಡಿದೆ. ಇದು ಕಾನೂನು ಬಾಹಿರ ಆದೇಶವಾಗಿದ್ದು, ನಾವು ಕೋಟ್ಯಂತರ ರೂ. ಹೂಡಿಕೆ ಮಾಡಿ ಸಿನಿಮಾ ನಿರ್ಮಾಣ ಮಾಡುತ್ತೇವೆ. ಕಡಿಮೆ ಸೀಟುಗಳಿಗೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಸಿನಿಮಾ ನಿರ್ಮಿಸಲು ಸಾಕಷ್ಟು ಶ್ರಮ, ಬಂಡವಾಳ ಬೇಕಾಗುತ್ತದೆ. ಚಿತ್ರ ನಿರ್ಮಾಣ, ಪ್ರದರ್ಶನದ ಬಗ್ಗೆ ಮಾಹಿತಿ ತಿಳಿಯದೇ ಈ ನಿರ್ಧಾರ ಕೈಗೊಂಡಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಚಿತ್ರವನ್ನು ವೀಕ್ಷಿಸಬೇಕೋ ಬೇಡವೋ ಎನ್ನುವುದು ಗ್ರಾಹಕನಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದು ಸಂಸ್ಥೆಗಳು ವಾದಿಸಿದ್ದವು.

Shwetha M