20 ಬಾಯ್‌ಫ್ರೆಂಡ್ಸ್ ಬಳಿ ಐಫೋನ್ ಕೇಳಿದ ಯುವತಿ! – ಕೈಗೆ ಫೋನ್ ಸಿಗ್ತಿದ್ದಂತೆ ಆಕೆ ಮಾಡಿದ್ದೇನು ಗೊತ್ತಾ?

ಈಗೀಗ ಪ್ರೀತಿ, ಸ್ನೇಹಕ್ಕೆ ಬೆಲೆಯೇ ಇಲ್ಲ ಅನ್ನೋತರ ಆಗಿದೆ. ಮೋಸ ಹೋಗುವವರು ಇದ್ರೆ ಯಾಮಾರಿಸುವವರೂ ಕಾಯ್ತಾ ಇರ್ತಾರೆ. ಇದೀಗ ಇಲ್ಲೊಬ್ಬಳು ಯುವತಿ ಐಫೋನ್ ಬೇಕು ಅಂತ 20 ಮಂದಿ ಬಾಯ್‌ಫ್ರೆಂಡ್ಸ್ ಜೊತೆ ಕೇಳಿದ್ದಾಳೆ. ಆಕೆಯ ಮಾತನ್ನ ನಂಬಿ ಬಾಯ್‌ಫ್ರೆಂಡ್ಸ್ ಕೂಡ ಗಿಫ್ಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: ನೇಪಾಳ ಬೆಂಕಿ ಆರುವ ಮುನ್ನವೇ ಪೆರು, ಫಿಲಿಪೈನ್ಸ್ ನಲ್ಲೂ ಹೋರಾಟ – Gen-Z ಗಳ ಕಿಚ್ಚು ಹೊಸ ಅಲೆ ಎಬ್ಬಿಸಿತಾ?
ವಿಚಿತ್ರ ಘಟನೆ ನಡೆದಿದ್ದು ಎಲ್ಲಿ?
ಈ ವಿಚಿತ್ರ ಘಟನೆ ನಡೆದಿದ್ದು ಚೀನಾದಲ್ಲಿ. ಯುವತಿಯೊಬ್ಬಳು ಒಂದಲ್ಲ.. ಎರಡಲ್ಲ.. ಬರೋಬ್ಬರಿ 20 ಮಂದಿ ಬಾಯ್‌ಫ್ರೆಂಡ್ಸ್ ಜೊತೆ ಐಫೋನ್ ಕೇಳಿದ್ದಾಳೆ. ಆಕೆಯ ಕೇಳ್ತಿದ್ದಂತೆ 7 ಮಂದಿ ಐಫೋನ್ ಕೊಡಿಸಿದ್ದಾರೆ. ಐಫೋನ್ ಕೈಗೆ ಬರ್ತಿದ್ದಂತೆ ಆಕೆ ಮಾಡಿದ ಕೆಲಸ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ಐಫೋನ್ ಮಾಡಿ ಮನೆ ಕಟ್ಟಿಸಿದ ಯುವತಿ!
ಹೌದು, ಯುವತಿಯು ತನ್ನ 20 ಗೆಳೆಯರ ಬಳಿ ಹೊಸ ಐಫೋನ್ 7 ಫೋನ್‌ಗಳನ್ನು ಖರೀದಿಸಲು ಕೇಳಿಕೊಂಡಳಂತೆ. ಐಫೋನ್ 7 ಸಂಗ್ರಹಿಸಿದ ನಂತರ, ಅವಳು ಎಲ್ಲಾ ಫೋನ್‌ಗಳನ್ನು ಮೊಬೈಲ್ ಮರುಬಳಕೆ ಕಂಪನಿಯಾದ ಹುಯಿ ಶೌ ಬಾವೊಗೆ ಮಾರಾಟ ಮಾಡಿ 120,000 ಚೀನೀ ಯುವಾನ್ (ಸುಮಾರು 14 ಲಕ್ಷ ರೂ.) ಗಳಿಸಿದಳು. ಈ ಹಣವನ್ನು ಅವಳು ತನ್ನ ಮನೆಗೆ ಡೌನ್ ಪೇಮೆಂಟ್ ಆಗಿ ಬಳಸಿದ್ದಾಳೆ.
ಯುವತಿ ಮುಖವಾಡ ಬಯಲಾಗಿದ್ದು ಹೇಗೆ?
ಪ್ರೌಡ್ ಕಿಯೋಬಾ ಎಂಬ ವ್ಲಾಗರ್ ಟಿಯಾನ್ ಯಾ ಯಿ ಡು ವೇದಿಕೆಯಲ್ಲಿ ಈ ಕಥೆಯನ್ನು ಹಂಚಿಕೊಂಡರು. ಅವರ ಸಹೋದ್ಯೋಗಿಯ ಬುದ್ಧಿವಂತ ಯೋಜನೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದರು. ಕ್ಸಿಯೋಲಿ ತನ್ನ ಹೊಸ ಮನೆಯನ್ನು ಸ್ನೇಹಿತರಿಗೆ ತೋರಿಸಿದಾಗ, ಅವರು ಡೌನ್ ಪೇಮೆಂಟ್‌ಗೆ ಹಣವನ್ನು ಹೇಗೆ ಸಂಗ್ರಹಿಸಿದರು ಎಂಬುದರ ಬಗ್ಗೆ ಗೊಂದಲಕ್ಕೊಳಗಾಗಿದ್ದರು. ಕಚೇರಿಯಲ್ಲಿ ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿದ್ದರು ಮತ್ತು ಆಕೆ ರೂಪಿಸಿದ ಯೋಜನೆಯಿಂದ ಎಲ್ಲರೂ ಅಚ್ಚರಿಗೊಂಡರು. ವ್ಲಾಗರ್ ಪ್ರಕಾರ, ಕ್ಸಿಯೋಲಿಯು ಶ್ರೀಮಂತ ಕುಟುಂಬದಿಂದ ಬಂದವಳಲ್ಲ. ಅವಳ ತಾಯಿ ಗೃಹಿಣಿಯಾಗಿದ್ದು, ತಂದೆ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮನೆಯಲ್ಲೇ ಈಕೆಯೇ ಹಿರಿಯ ಪುತ್ರಿಯಾಗಿದ್ದು, ದುಡಿಯುವ ಅನಿವಾರ್ಯತೆ ಆಕೆಗಿತ್ತು. ಅಲ್ಲದೆ ಹೆತ್ತವರಿಗೆ ವಯಸ್ಸಾಗುತ್ತಿರುವುದರಿಂದ ಮನೆ ಖರೀದಿ ಮಾಡುವ ಹಠ ಆಕೆಯಲ್ಲಿತ್ತು. ಹೀಗಾಗಿ ಸ್ವಂತ ಮನೆಗಾಗಿ ಆಕೆ ಈ ರೀತಿ ವಿಶಿಷ್ಟ ವಿಧಾನವನ್ನು ಬಳಸಿಕೊಂಡಳು.
ಕ್ಸಿಯೋಲಿಯವರ ಕಥೆ ಹುಯಿ ಶೌ ಬಾವೊಗೆ ಇದು ಮಾರ್ಕೆಟಿಂಗ್ ಸ್ಟಂಟ್ ಆಗಿರಬಹುದು ಎಂಬ ಊಹಾಪೋಹವಿತ್ತು. ಬಿಬಿಸಿ ಕಂಪನಿಯನ್ನು ಸಂಪರ್ಕಿಸಿದಾಗ, ವಕ್ತಾರರು ಅವರು ನಿಜವಾಗಿಯೂ ಒಬ್ಬ ಕ್ಲೈಂಟ್‌ನಿಂದ 20 ಐಫೋನ್‌ಗಳನ್ನು ಖರೀದಿಸಿದ್ದಾರೆ ಮತ್ತು ಪ್ರತಿ ಫೋನ್‌ಗೆ 6000 ಚೈನೀಸ್ ಯುವಾನ್ (ಸುಮಾರು 74,000 ರೂ.) ಪಾವತಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.

ನೋಡಿರಿ

