ಪಾಕ್‌ಗೆ ಮುಖಭಂಗ – ಆಪರೇಷನ್‌ ಸಿಂಧೂರ ಟೈಂನಲ್ಲಿ ಪಾಕ್ ಕ್ಷಿಪಣಿ ಫೇಲ್ಯೂರ್

ಪಾಕ್‌ಗೆ ಮುಖಭಂಗ – ಆಪರೇಷನ್‌ ಸಿಂಧೂರ ಟೈಂನಲ್ಲಿ ಪಾಕ್ ಕ್ಷಿಪಣಿ ಫೇಲ್ಯೂರ್

ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಭಾರತ ಕೊಟ್ಟಿರುವ ಏಟಿನಿಂದ ಪಾಕಿಸ್ತಾನ ಇನ್ನೂ ಸುಧಾರಿಸಿಕೊಂಡಿಲ್ಲ. ಆದ್ರೂ  ಯುದ್ಧವನ್ನು ತಾನೇ ಗೆದ್ದಿದ್ದಾಗಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಆದ್ರೆ ಭಾರತದೊಂದಿಗಿನ ಸಾಮರಿಕ ಸಂಘರ್ಷದಲ್ಲಿ ಪಾಕಿಸ್ತಾನ ವಿಫಲವಾಗಿರುವುದಕ್ಕೆ, ಸಾಲು ಸಾಲು ಸಾಕ್ಷಿ ಸಿಗುತ್ತಿವೆ. ಅದೇ ರೀತಿ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಪಾಕಿಸ್ತಾನ ಉಡಾವಣೆ ಮಾಡಿದ್ದ ಕ್ಷಿಪಣಿಯೊಂದು, ಶ್ರೀನಗರದ ದಾಲ್‌ ಸರೋವರದ ಬಳಿ ದೊರೆತಿದೆ.

ಹೌದು, ದಾಲ್‌ ಸರೋವರದ ಬಳಿ ಪಾಕಿಸ್ತಾನದ ಕ್ಷಿಪನಿಯ ಅವಶೇಷವೊಂದು ಪತ್ತೆಯಾಗಿದ್ದು, ಇದನ್ನು ನೆರೆ ರಾಷ್ಟ್ರವು ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ಉಡಾವಣೆ ಮಾಡಿತ್ತು ಎಂಬುದು ತಿಳಿದುಬಂದಿದೆ. ಆದರೆ ಈ ಕ್ಷಿಪಣಿ ತನ್ನ ಗುರಿ ತಲುಪುವುದರಲ್ಲಿ ವಿಫಲವಾಗಿದ್ದು, ಸ್ಪೋಟಗೊಳ್ಳದೇ ದಾಲ್‌ ಸರೋವರದ ಬಳಿ ಬಿದ್ದಿದೆ. ದಾಲ್‌ ಸರೋವರದ ನಿಯಮಿತ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ವೇಳೆ,  (ಸೆ.21-ಭಾನುವಾರ) ಈ ಸ್ಪೋಟಗೊಳ್ಳದ ಕ್ಷಿಪಣಿ ಪತ್ತೆಯಾಗಿದೆ. ಕೂಡಲೇ ಸ್ವಚ್ಛತಾ ಸಿಬ್ಬಂದಿ ಈ ವಿಷಯವನ್ನು ಭಧ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಆ ಬಳಿಕ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಪಡೆಗಳ ಸಿಬ್ಬಂದಿ, ಕ್ಷಿಪಣಿಯನ್ನು ನಿಷ್ಕ್ರೀಯಗೊಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಕ್ಷಿಪಣಿಯ ಘಟಕಗಳನ್ನು ನಿಷ್ಕ್ರಿಯಗೊಳಿಸಿ ಬೇರೆ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಈ ಕ್ಷಿಪಣಿಯ ಒಂದು ಘಟಕವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದೆ  ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಈ ಕ್ಷಿಪಣಿ ಸ್ಪೋಟಗೊಂಡಿದ್ದರೆ, ಪ್ರವಾಸಿಗರಿಂದ ಸದಾಕಾಲ ತುಂಬಿ ತುಳುಕುವ ದಾಲ್‌ ಸರೋವರದಲ್ಲಿ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

Kishor KV