ಕೆಣಕಿದ ಹ್ಯಾರಿಸ್ ನೀರಿಳಿಸಿದ ಅಭಿಷೇಕ್ – ಗನ್ ಫೈರ್ ಬಿಲ್ಡಪ್.. ಫರ್ಹಾನ್ ರೋಸ್ಟ್
ಕೊಹ್ಲಿ ಕೊಹ್ಲಿ ಕೂಗಿಗೆ ಪಾಕ್ ಶೇಕ್ ಶೇಕ್

ಭಾರತ ವರ್ಸಸ್ ಪಾಕಿಸ್ತಾನ ಮ್ಯಾಚ್ ಅಂದ್ಮೇಲೆ ಅಲ್ಲಿ ಸ್ಲೆಡ್ಜಿಂಗ್ ಇದ್ದೇ ಇರುತ್ತೆ. ಭಾನುವಾರದ ಪಂದ್ಯದಲ್ಲೂ ಸಾಕಷ್ಟು ಌಕ್ಷನ್ ಸೀನ್ಗಳು ಕಂಡ್ವು. ಆನ್ ಫೀಲ್ಡ್ನಲ್ಲಿ ಆಟಗಾರರ ನಡುವೆ ಅಟ್ಯಾಕ್ಗೆ ಕೌಂಟರ್ ಅಟ್ಯಾಕ್ ಒಂದ್ಕಡೆಯಾದ್ರೆ ಗ್ಯಾಲರಿಗಳಲ್ಲಿ ಫ್ಯಾನ್ಸ್ ರಿಯಾಕ್ಷನ್ಸ್ ಅಂತೂ ನೆಕ್ಸ್ಟ್ ಲೆವೆಲ್ನಲ್ಲಿತ್ತು. ಗನ್ ಸೆಲೆಬ್ರೇಷನ್, ಅಭಿಷೇಕ್ ಅಗ್ರೆಶನ್, ಅಭಿಮಾನಿಗಳ ಸೆಲೆಬ್ರೇಷನ್ ಹೀಗೆ ಒಂದಷ್ಟು ಘಟನೆಗಳು ಟ್ರೆಂಡಿಂಗ್ನಲ್ಲಿವೆ.
ಇದನ್ನೂ ಓದಿ : IND Vs PAK.. ಗೆದ್ದವ್ರೇ ಬಾಸ್ – ಸೂಪರ್ 4ನಲ್ಲೂ ಇಲ್ಲ ಶೇಕ್ ಹ್ಯಾಂಡ್
ಏಷ್ಯಾಕಪ್ನ ಸೂಪರ್ 4 ಮ್ಯಾಚ್ನಲ್ಲೂ ಬಲಿಷ್ಠ ಭಾರತದ ಎದುರು ಪಾಕಿಸ್ತಾನ ಮಕಾಡೆ ಮಲಗಿದೆ. ಭಾನುವಾರ ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕ್ ಪಡೆ ಫಸ್ಟ್ ಬ್ಯಾಟಿಂಗ್ ಮಾಡಿತ್ತು. ಈ ಟೈಮಲ್ಲಿ ನಾವು ಭಾರತವನ್ನ ಸೋಲಿಸೇ ಬಿಟ್ವಿ ಅನ್ನೋ ರೇಂಜ್ಗೆ ಬಿಲ್ಡಪ್ ತಗೊಂಡ್ರು. ಕೊನೆಗೆ ಭಾರತದ ಬ್ಯಾಟಿಂಗ್ ಶುರು ಆದ್ಮೇಲೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನೋ ಹಾಗೇ ಒದೆ ತಿಂದ್ರು. ಹೀಗಿದ್ರೂ ಈ ಮ್ಯಾಚ್ ಟೈಮಲ್ಲಿ ಆನ್ದಿ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ನಲ್ಲಿ ಕೆಲ ಕಿರಿಕ್ಗಳು ಆಗಿವೆ. ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಹೆಸರು ರಾರಾಜಿಸಿದೆ. ಕೆಣಕಲು ಬಂದ ಪಾಕ್ ಪ್ಲೇಯರ್ಗೆ ಅಭಿಷೇಕ್ ಅಲ್ಲೇ ಬಿಸಿ ಮುಟ್ಟಿಸಿದ್ದಾರೆ.
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಭಾರತ ಸೋಲಿಸಿದೆ. ಇದು ನಿಮ್ಗೆಲ್ಲಾ ಗೊತ್ತೇ ಇದೆ. ಸೋ ಇದೇ ಮ್ಯಾಚಲ್ಲಿ ಕೆಲ ಇಂಟ್ರೆಸ್ಟಿಂಗ್ ಇನ್ಸಿಡೆಂಟ್ಗಳೂ ನಡೆದಿವೆ. ಅದ್ರಲ್ಲೂ ಪಾಕಿಸ್ತಾನದ ಓಪನರ್ ಸಾಹಿಬ್ಜಾದಾ ಫರ್ಹಾನ್ ಅಂತೂ ಬ್ಯಾಟಿಂಗ್ ಟೈಮಲ್ಲಿ ಕಂಪ್ಲೀಟ್ ಜೋಶ್ನಲ್ಲಿದ್ರು. 34 ಎಸೆತಗಳಲ್ಲಿ 50 ರನ್ ಬಾರಿಸಿದ ಫರ್ಹಾನ್, ಪಂದ್ಯವನ್ನೇ ಗೆದ್ದ ರೀತಿಯಲ್ಲಿ ಓವರ್ ಬಿಲ್ಡಪ್ ಕೊಡ್ತಿದ್ರು. ಅದ್ರಲ್ಲೂ ಅಕ್ಸರ್ ಪಟೇಲ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕವನ್ನು ಪೂರೈಸಿದ ಫರ್ಹಾನ್, ತಮ್ಮ ಬ್ಯಾಟ್ನ್ನು ರೈಫಲ್ ಮಾದರಿಯಲ್ಲಿ ಹಿಡಿದು ಅದರಿಂದ ಫೈಯರ್ ಮಾಡಿದರು. ಫರ್ಹಾನ್ ಅವರ ಈ ಗನ್ ಫೈಯರ್ ಸೆಲೆಬ್ರೇಷನ್ಗೆ ಆಕ್ರೋಶ ವ್ಯಕ್ತವಾಗ್ತಿದೆ. ಇವ್ರೇನು ಜಿಹಾದಿಗಳಾ ಈ ರೀತಿ ಸೆಲೆಬ್ರೇಟ್ ಮಾಡೋಕೆ. ಅವ್ರ ದೇಶದಲ್ಲಿ ಏನ್ ಫೇಮಸ್ಸೋ ಅದನ್ನೇ ಮಾಡ್ತಾರೆ ಅಂತಾ ತರಾಟೆಗೆ ತೆಗೆದುಕೊಳ್ತಿದ್ದಾರೆ.
ಪಾಕಿಸ್ತಾನ ಏನೋ ಬ್ಯಾಟಿಂಗ್ನಲ್ಲಿ ಒಂದ್ ರೇಂಜ್ಗೆ ಪರ್ಫಾಮೆನ್ಸ್ ಕೊಟ್ರು ಒಪ್ಕೊಳ್ಳೋಣ. ಬಟ್ ಅಲ್ಲಿ ಭಾರತೀಯರು ಇನ್ನೂ ಬ್ಯಾಟಿಂಗ್ ಮಾಡ್ಬೇಕಿದೆ ಅನ್ನೋದನ್ನ ಮರೆತಿದ್ರು ಅನ್ಸುತ್ತೆ. ಹೀಗಾಗೇ ಆಲ್ರೆಡಿ ಗೆದ್ದೇ ಬಿಟ್ವಿ ಅನ್ನೋ ರೇಂಜ್ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ರು. ಆದ್ರೆ ಟೀಂ ಇಂಡಿಯಾ ಬ್ಯಾಟಿಂಗ್ ಶುರು ಮಾಡಿದ್ಮೇಲೆ ಅವ್ರ ಜೋಶ್ ಎಲ್ಲಾ ಝರ್ ಅಂತಾ ಇಳ್ಕೊಗಿತ್ತು. ಒಬ್ಬೊಬ್ರ ಮುಖನೂ ಹರಳೆಣ್ಣೆ ಕುಡ್ದಂಗ್ ಇತ್ತು. ಅದ್ರಲ್ಲೂ ಅಭಿಷೇಕ್ ಮತ್ತು ಗಿಲ್ ಕೊಡ್ತಿದ್ದ ಏಟುಗಳಿಗೆ ಬೌಲರ್ಗಳಂತೂ ಬೆವರಿಳಿಸ್ತಿದ್ರು. ಯಾವಾಗ ಅಭಿಷೇಕ್ ಮತ್ತು ಗಿಲ್ ಕಂಪ್ಲೀಟ್ ಡಾಮಿನೇಟ್ ಮಾಡ್ತಿದ್ರೋ ಅಲ್ಲಿಗೆ ಪಾಕಿಗಳಿಗೊಂದು ಕೆಟ್ಟ ಐಡಿಯಾ ಬಂದಿತ್ತು. ಅದುವೇ ಸ್ಲೆಡ್ಜಿಂಗ್. ಅಂದ್ರೆ ಅಭಿ ಮತ್ತು ಗಿಲ್ರನ್ನ ಹಿಂಗೇ ಬಿಟ್ರೆ ಇವ್ರಿಬ್ಬರೇ ಮ್ಯಾಚ್ ಮುಗಿಸ್ತಾರೆ ಅಂತಾ ಗೊತ್ತಾಗ್ತಿದ್ದಂತೆ ಪಾಕ್ ಬೌಲರ್ಗಳು ಟ್ರಿಗರ್ ಮಾಡೋಕೆ ಶುರು ಮಾಡಿದ್ರು. ಐದನೇ ಓವರ್ ಆರಂಭಕ್ಕೂ ಮುನ್ನವೇ ಅಭಿಷೇಕ್ ಶರ್ಮಾ ಮತ್ತು ಹ್ಯಾರಿಫ್ ರೌಫ್ ನಡುವೆ ಜಗಳವಾಗಿತ್ತು. ಅದೇ ಓವರ್ನ ಕೊನೆಯ ಎಸೆತದಲ್ಲಿ ಹ್ಯಾರಿಫ್ ರೌಫ್ ಎಸೆದ ಚೆಂಡನ್ನು ಶುಭ್ಮನ್ ಗಿಲ್ ಬೌಂಡರಿಗಟ್ಟಿದರು. ಇದ್ರಿಂದ ಪ್ರೆಸ್ಟ್ರೇಟ್ ಆದ ರೌಫ್ ಸಿಟ್ಟಿನಿಂದ ಯಾವುದೋ ಪದ ಬಳಸಿ ಜೋರಾಗಿ ಕೂಗಿದ್ದಾನೆ. ಇದ್ರಿಂದ ಸಿಟ್ಟಾದ ಅಭಿಷೇಕ್ ಶರ್ಮಾ ಆನ್ ದಿ ಸ್ಪಾಟಲ್ಲೇ ತಿರುಗೇಟು ನೀಡಿದ್ರು. ಇಬ್ಬರ ನಡುವೆ ವಾಗ್ವಾದ ತಾರಕಕ್ಕೇರಿದ್ದು ಈ ವೇಳೆ ಫೀಲ್ಡ್ ಅಂಪೈರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು.
ಯಾವಾಗ ಭಾರತೀಯರು ಬ್ಯಾಟಿಂಗ್ನಲ್ಲಿ ಸಿಕ್ಸ್, ಫೋರ್ ಚಚ್ಚೋಕೆ ಶುರುಮಾಡಿದ್ರೋ ಪಾಕಿಸ್ತಾನಿ ಪ್ಲೇಯರ್ಸ್ ಕಂಪ್ಲೀಟ್ ಪ್ರೆಶರ್ನಲ್ಲಿದ್ರು. ಕೀಳು ಮಟ್ಟದಲ್ಲಿ ಬಿಹೇವ್ ಮಾಡಿದ್ರು. ಅದರಲ್ಲೂ ಮಿತಿ ಮೀರಿ ವರ್ತಿಸಿದ ಬೌಲರ್ ಹ್ಯಾರಿಸ್ ರೌಫ್ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತದ ರಫೆಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಇದೇ ಸತ್ಯ ಅಂತಾ ನಂಬಿರೋ ರೌಫ್ 6 ಯುದ್ಧ ವಿಮಾನಗಳನ್ನ ಹೊಡೆದುರುಳಿಸಿರೋದಾಗಿ ವ್ಯಂಗ್ಯ ಮಾಡಿದ್ದಾನೆ.
ಹೀಗೆ ರೌಫ್ ವರ್ತನೆ ಅತಿರೇಕವಾಗ್ತಿದ್ದಂತೆ ಟೀಂ ಇಂಡಿಯಾ ಫ್ಯಾನ್ಸ್ ಗ್ಯಾಲರಿಯಲ್ಲಿ ಕೊಹ್ಲಿ ಕೊಹ್ಲಿ ಅಂತಾ ಜೋರಾಗಿ ಕೂಗಿದ್ದಾರೆ. ಇದ್ರಿಂದ ಶೇಪ್ ಔಟ್ ಆದ ರೌಫ್ ಕಿವಿಯನ್ನ ಬಡಿದುಕೊಳ್ಳುತ್ತಾ ಇನ್ನೂ ಜೋರಾಗಿ ಕೂಗುವಂತೆ ಅಣಕ ಮಾಡಿದ್ದಾನೆ. ಯಾಕಂದ್ರೆ ಇದನ್ನ ಬಿಟ್ರೆ ಅವರಿಂದ ಮತ್ತೇನು ಆಗಲ್ಲ ಮ್ಯಾಚ್ ಆಲ್ರೆಡಿ ಕೈಬಿಟ್ಟೋಗಿದೆ ಅನ್ನೋದು ಆತನಿಗೆ ಅರ್ಥವಾಗಿತ್ತು.
ಇಷ್ಟೆಲ್ಲಾ ಬಿಲ್ಡಪ್ ಕೊಟ್ರೂ ಪಾಕಿಸ್ತಾನ ಟೀಂನವ್ರು ಮ್ಯಾಚ್ ಗೆಲ್ಲೋಕೆ ಸಾಧ್ಯವಾಗ್ಲಿಲ್ಲ. ಲೀಗ್ ಹಂತದ ಸೋಲು, ಸೂಪರ್ 4ನಲ್ಲೂ ಸೋಲು. ಕೊನೆಗೆ ಶೇಕ್ ಹ್ಯಾಂಡ್ ಕೂಡ ಕೊಡ್ಲಿಲ್ಲ. ಹೀಗೆ ಹೆಜ್ಜೆ ಹೆಜ್ಜೆಗೂ ಶೇಕ್ ಆದ ಪಾಕಿಸ್ತಾನಕ್ಕೆ ಭಾರತೀಯ ಅಭಿಮಾನಿಗಳು ಮತ್ತೊಂದು ಶಾಕ್ ನೀಡಿದ್ರು. ಪಾಕಿಸ್ತಾನ ಸೋಲುತ್ತಾ ಇದ್ದಂತೆ ಬೈ ಬೈ ಪಾಕಿಸ್ತಾನ ಅಂತಾ ಅಲ್ಲೇ ಟಾಂಟ್ ಕೊಟ್ಟಿದ್ದಾರೆ.
ಇನ್ನು ಬ್ಯಾಟಿಂಗ್ನಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆಫ್ಟರ್ ಮ್ಯಾಚ್ ನಲ್ಲೂ ತಿರುಗೇಟು ನೀಡಿದ್ದಾರೆ. ಪಂದ್ಯದ ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಯು ಟಾಕ್.. ವಿ ವಿನ್ ಅಂತಾ ಆಭಿಷೇಕ್ ಶರ್ಮಾ ಕ್ಯಾಪ್ಟನ್ ಕೊಟ್ಟಿದ್ರೆ ಗೇಮ್ ಸ್ಪೀಕ್ಸ್ ನಾಟ್ ವರ್ಡ್ಸ್ ಅಂತಾ ಶುಭ್ಮನ್ ಗಿಲ್ ಬರ್ಕೊಂಡಿದ್ದಾರೆ.

ನೋಡಿರಿ

