ರುಕ್ಮಿಣಿ ಬಾಯಲ್ಲಿ ಕಿಟ್ಟಿ ರಹಸ್ಯ.. ಕಡೆಗೂ ಒಂದಾದ ಚಾರು, ಚಾರಿ! – ಸೀರಿಯಲ್‌ ಎಂಡ್‌.. ಕ್ಲೈಮ್ಯಾಕ್ಸ್‌ ಇದೇ?

ರುಕ್ಮಿಣಿ ಬಾಯಲ್ಲಿ ಕಿಟ್ಟಿ ರಹಸ್ಯ.. ಕಡೆಗೂ ಒಂದಾದ ಚಾರು, ಚಾರಿ! – ಸೀರಿಯಲ್‌ ಎಂಡ್‌.. ಕ್ಲೈಮ್ಯಾಕ್ಸ್‌ ಇದೇ?

ಸತ್ತಿದ್ದು ರಾಮಾಚಾರಿ ಅಲ್ಲ ಕೃಷ್ಣ ಅನ್ನೋದು ಇಷ್ಟು ದಿನ ಗುಟ್ಟಾಗೇ ಇತ್ತು. ರಾಮಚಾರಿ ಕೃಷ್ಣನಂತೆ ಆಕ್ಟ್‌ ಮಾಡ್ತಾ ಕುತಂತ್ರಿಗಳ ಬಾಯಿಯಿಂದಲೇ ಬಿಡಲು ಹೊರಟಿದ್ದ.. ಚಾರು ಕೂಡ ಈ ಸತ್ಯವನ್ನ ಎಲ್ಲರಿದಂಲೂ ಮುಚ್ಚಿಟ್ಟಿದ್ಲು. ಇದೀಗ ಕೃಷ್ಣ ಸಾವಿನ ಸತ್ಯ ಎಲ್ಲರ ಮುಂದೆ ಬಯಲಾಗಿದೆ. ಚಾರು ಬಾಳಲ್ಲಿ ಆಟವಾಡಲು ಹೋಗಿ, ರುಕ್ಮಿಣಿ ತಾನು ತೋಡಿದ ಗುಂಡಿಯಲ್ಲೇ ಬಿದ್ದಿದ್ದಾಳೆ. ಇದೀಗ ರುಕ್ಮಿಣಿ ಬಾಯಿಯಿಂದ ಸತ್ಯ ಹೊರ ಬಂದಿದೆ. ಕೊಲೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾಳೆ. ಇದೀಗ ಕುತಂತ್ರಿಗಳ ಷಡ್ಯಂತರ ಎಲ್ಲರ ಮುಂದೆ ಬಯಲಾಗಿದೆ. ಇದೀಗ ರಾಮಾಚಾರಿ ಸೀರಿಯಲ್‌ ಅಂತ್ಯ ಕಾಣ್ತಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ರ‍್ಯಾಲಿಗೆ ಬಂದವರೆಲ್ಲ ವೋಟ್ ಹಾಕಲ್ಲ! – ದಳಪತಿ ವಿಜಯ್​ಗೆ ಟಾಂಗ್‌ ಕೊಟ್ಟ ಕಮಲ್ ಹಾಸನ್!

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರೋ ರಾಮಾಚಾರಿ ಸೀರಿಯಲ್ ಸ್ಟೋರಿ ಈಗ ರೋಚಕ ಘಟ್ಟ ತಲುಪಿದೆ. ರಾಮಾಚಾರಿಯನ್ನ ಕೊಲ್ಬೇಕು ಎಂದು ಒಂದ್ಕಡೆ ಮಾನ್ಯತಾ ಪ್ಲ್ಯಾನ್‌ ಮಾಡಿದ್ರೆ, ಮತ್ತೊಂದ್ಕಡೆ ರುಕ್ಮಿಣಿ ತನ್ನ ತಂದೆ ತಾಯಿ ಸಾವಿಗೆ ನ್ಯಾಯ ಸಿಗ್ಬೇಕು ಅಂತಾ ಚಾರು ಜೀವನ ಹಾಳು ಮಾಡಲು ಮುಂದಾಗಿದ್ಲು.   ಚಾರುಲತಾಳನ್ನ ವಿಧವೆಯಾಗಿ ಮಾಡಬೇಕು ಅಂತ ರುಕ್ಮಿಣಿ ಪಣ ತೊಟ್ಟಳು. ಮಾನ್ಯತಾ ಹಾಗೂ ನವದೀಪ್ ಜೊತೆ ಸೇರಿ ರಾಮಾಚಾರಿಯನ್ನ ಕೊಲ್ಲಲು ರುಕ್ಮಿಣಿ ಸಂಚು ರೂಪಿಸಿದಳು. ಆದರೆ ಕುತಂತ್ರಿಗಳ ಸಂಚಿಗೆ ಬಲಿಯಾಗಿದ್ದು ಕೃಷ್ಣ. ರಾಮಾಚಾರಿ ಹಾಗೂ ಕೃಷ್ಣ ಅವಳಿ ಜವಳಿ. ಹೀಗಾಗಿ ಕೊಲೆ ಮಾಡುವಾಗ ಕುತಂತ್ರಿಗಳಿಗೆ ಇಲ್ಲಿರೋದು ಕೃಷ್ಣ ಅನ್ನೋದು ಗೊತ್ತಾಗಿಲ್ಲ. ರುಕ್ಮಿಣಿ ಚಾರು ಮೇಲೆ ಸೇಡು ತೀರಿಸಿಕೊಳ್ಳೋ ಭರದಲ್ಲಿ ಕೃಷ್ಣಗೆ ಚಾಕು ಚುಚ್ಚಿದ್ದಳು. ಇದ್ರಂದಾಗಿ ಕೃಷ್ಣ ಪ್ರಾಣ ಕಳ್ಕೊಂಡಿದ್ದ. ಈ ವಿಚಾರ ಗೊತ್ತಿಲ್ಲದೆ ರಾಮಾಚಾರಿಯನ್ನ ಸಾಯಿಸಿದ್ದೇವೆ ಅಂತ ರುಕ್ಮಿಣಿ, ಮಾನ್ಯತಾ ನವದೀಪ್‌ ಖುಷಿಪಟ್ಟಿದ್ರು. ಎಲ್ಲರೂ ಸೇರಿ ಗೆದ್ದು ಬಿಟ್ಟೆವು ಎಂದು ಸಂಭ್ರಮಿಸಿದ್ರು. ಆದ್ರೀಗ ಸತ್ಯ ಎಲ್ಲರ ಮುಂದೆ ರಿವೀಲ್‌ ಆಗಿದೆ. ಸತ್ತಿದ್ದು ರಾಮಾಚಾರಿ ಅಲ್ಲ ಕೃಷ್ಣ ಅನ್ನೋದು ಎಲ್ಲರ ಮುಂದೆ ರಿವೀಲ್‌ ಆಗಿದೆ.  ಇದೀಗ ಘೋರ ಸತ್ಯ ರುಕ್ಮಿಣಿ ಕಿವಿಗೆ ಬರಸಿಡಿಲಿನಂತೆ ಬಡಿದಿದೆ.

ಕಲರ್ಸ್‌ ಕನ್ನಡದಲ್ಲಿ ಸದ್ಯ ಸೀರಿಯಲ್‌ ಗಳ ಮಹಾ ಸಂಚಿಕೆ ನಡೆಯುತ್ತಿದೆ. ರಾಮಾಚಾರಿ – ಯಜಮಾನ  ಧಾರಾವಾಹಿ ಮಹಾ ಸಂಚಿಕೆ ಸದ್ಯ ನಡೆಯುತ್ತಿದೆ. ಯಜಮಾನ ಸೀರಿಯಲ್‌ ನಲ್ಲಿ ರಾಘು ಹೆಂಡ್ತಿಯಾಗಿ ಆ ಮನೆಯಲ್ಲೇ ಉಳಿಯಲು ಝಾನ್ಸಿ ಮುಂದಾದ್ರೆ, ಮನೆಯವರು ಆಕೆಯನ್ನ ಹೊರ ಹಾಕಲು ಪ್ರಯತ್ನಪಟ್ಟಿದ್ರು. ಹೀಗಾಗಿ ಝಾನ್ಸಿಗೆ ಸಹಾಯ ಮಾಡಲು ರಾಮಾಚಾರಿ ಹಾಗೂ ಚಾರು ಬಂದಿದ್ರು. ಇದೀಗ ಝಾನ್ಸಿ ಮನೆಯವರು ಕೊಟ್ಟ ಟಾಸ್ಕ್‌ ನಲ್ಲಿ ವಿನ್‌ ಆಗಿದ್ದಾಳೆ. ಈ ವೇಳೆ ರಾಘು ಹಾಗೂ ಜಾನ್ಸಿ ಚಾರುಲತಾಗೆ ಸೀಮಂತ ನೆರವೇರಿಸಿದ್ದಾರೆ.  ಸೀಮಂತ ಶಾಸ್ತ್ರದ ವೇಳೆ ಚಾರುಲತಾಳನ್ನ ರಾಮಾಚಾರಿ ಪ್ರೀತಿಯಿಂದ ಎತ್ತಿಕೊಂಡ. ಆದರೆ ಈ ವಿಚಾರ ರುಕ್ಮಿಣಿಗೆ ಗೊತ್ತಗಿದೆ. ಕೂಡಲೇ ಇದನ್ನ ಜಾನಕಿ ಹಾಗೂ ಅಜ್ಜಿ ತಿಳಿಸಿದ್ದಾಳೆ. ಇದನ್ನ ನೋಡಿದ ಅಜ್ಜಿ ಶಾಕ್‌ ಆಗಿದ್ದಾರೆ.  ಅತ್ತಿಗೆ ಚಾರುಲತಾ ಜೊತೆ ಕೃಷ್ಣ ಇಷ್ಟೊಂದು ಸಲುಗೆ ಇಂದ ಇರೋದ್ಯಾಕೆ ಅಂತ ಮುಜುಗರಕ್ಕೆ ಒಳಗಾಗಿದ್ದಾರೆ. ಈ ವೇಳೆ ಜಾನಕಿ – ರಾಮಾಚಾರಿ – ರುಕ್ಮಿಣಿ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಇದೇ ಸಮಯದಲ್ಲಿ ರುಕ್ಮಿಣಿ ಬಹುದೊಡ್ಡ ಸತ್ಯವನ್ನ ಬಾಯ್ಬಿಟ್ಟಿದ್ದಾಳೆ.

ಜಾನಕಿ ರಾಮಾಚಾರಿಗೆ ಬೈಯುತ್ತಿದ್ದಂತೆ, ನಾನು ಕೃಷ್ಣ ಅಲ್ಲ, ರಾಮಾಚಾರಿ! ಕೃಷ್ಣ ಸತ್ತು ಹೋಗಿದ್ದಾನೆ ಎಂದು ವಾದಿಸಿದ್ದಾನೆ. ಆದರೆ ಇದನ್ನ ರುಕ್ಮಿಣಿ ಒಪ್ಪಲ್ಲ. ರಾಮಾಚಾರಿ ಬದುಕಿರೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ ನಾನೇ ನನ್ನ ಕೈಯ್ಯಾರೆ ರಾಮಾಚಾರಿಯನ್ನ ಚುಚ್ಚಿ ಸಾಯಿಸಿದ್ದೇನೆ  ಅಂತ ಮಾತಿನ ಭರದಲ್ಲಿ ರುಕ್ಮಿಣಿ ಸತ್ಯವನ್ನ ಹೇಳಿದ್ದಾಳೆ. ಇದನ್ನ ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ. ಇದೀಗ  ಬದುಕಿರೋದು ರಾಮಾಚಾರಿ, ಸತ್ತಿರೋದು ಕೃಷ್ಣ ಅಂತ ಎಲ್ಲರಿಗೂ ಗೊತ್ತಾಗಿದೆ. ತನ್ನ ಗಂಡ ಸತ್ತಿದ್ದಾನೆ ಅಂತ ತಿಳಿದು ರುಕ್ಮಿಣಿಗೆ ಶಾಕ್ ಆಗಿದ್ದಾಳೆ.  ಅಲ್ಲಿಂದ ಎಸ್ಕೇಪ್ ಆಗಲು ರುಕ್ಮಿಣಿ  ಟ್ರೈ ಮಾಡಿದ್ದಾಳೆ. ಆದರೆ, ಅಷ್ಟರಲ್ಲಿ ಝಾನ್ಸಿ ಮತ್ತು ರಾಘು ರುಕ್ಮಿಣಿಯನ್ನ ಲಾಕ್ ಮಾಡಿದ್ದಾರೆ. ಇದೀಗ ರುಕ್ಮಿಣಿ ಅರೆಸ್ಟ್ ಆಗ್ಬೋದು. ಪೊಲೀಸ್‌ ವಿಚಾರಣೆ ವೇಳೆ ಮಾನ್ಯತಾಗೆ ಹೆಸರು ಕೂಡ ಹೇಳಬಹುದು. ಬಳಿಕ ಮಾನ್ಯತಾ ಕೂಡ ಜೈಲು ಸೇರುವ ಸಾಧ್ಯತೆ ಇದೆ. ಇಲ್ಲಿಗೆ ಈ ಸೀರಿಯಲ್‌ ಎಂಡ್‌ ಆಗಗ್ಬೋದು. ಯಾಕಂದ್ರೆ ಮುಂದಿನ ವಾರದಿಂದ ಬಿಗ್‌ ಬಾಸ್‌ ಕನ್ನಡ ಶೋ ಆರಂಭವಾಗಲಿದೆ. ಹೀಗಾಗಿ ಈ ಸೀರಿಯಲ್‌ ಅಂತ್ಯಕಾಣಲಿದೆ ಎಂದು ಹೇಳಲಾಗ್ತಿದೆ. ಒಂದ್ವೇಳೆ ಸೀರಿಯಲ್‌ ಮುಗಿದ್ರೆ ಸೀರಿಯಲ್‌ ಫ್ಯಾನ್ಸ್‌ ಚಾರಿ, ಚಾರು ಜೋಡಿಯನ್ನ ಮಿಸ್‌ ಮಾಡಿಕೊಳ್ಳೋದಂತೂ ಪಕ್ಕಾ.

Shwetha M