ತನ್ನ ಮೇಲೆ ತಾನೇ ಬಾಂಬ್ ಹಾಕಿಕೊಂಡ ಪಾಕ್ – 30 ಜನ ಸಾ*ವು, 20ಕ್ಕೂ ಹೆಚ್ಚು ಜನಕ್ಕೆ ಗಾಯ

ತನ್ನ ಮೇಲೆ ತಾನೇ ಬಾಂಬ್ ಹಾಕಿಕೊಂಡ ಪಾಕ್ – 30 ಜನ ಸಾ*ವು, 20ಕ್ಕೂ ಹೆಚ್ಚು ಜನಕ್ಕೆ ಗಾಯ
Security official checks at the site of a bomb blast in Quetta, Pakistan, Friday, Feb. 28, 2025. (AP Photo/Arshad Butt)

ಪಾಕಿಸ್ತಾನ ತನ್ನ ಮೇಲೆ ತಾನೇ ಚಪ್ಪಡಿ ಎಳೆದುಕೊಂಡಿದೆ.   ತನ್ನ ದೇಶದ ಮೇಲೆಯೇ ಬಾಂಬ್ ಹಾಕಿ ತನ್ನ ದೇಶ 30 ನಾಗರಿಕರನ್ನು ಬಲಿಪಡೆದಿದೆ. ಇಂದು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದ ಯುದ್ಧ ವಿಮಾನಗಳು ತಿರಾ ಕಣಿವೆಯ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಎಂಟು ಬಾಂಬ್‌ಗಳನ್ನು ಬೀಳಿಸಿದೆ. ಇದರಿಂದಾಗಿ ಒಂದು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ನಾಶ ಆಗಿದೆ.   LS-6 ವರ್ಗದ ವಿನಾಶಕಾರಿ ಬಾಂಬ್‌ಗಳಾಗಿದ್ದು, ಇವುಗಳನ್ನು ಚೀನಾದ JF-17 ಯುದ್ಧ ವಿಮಾನಗಳಿಂದ ಬೀಳಿಸಲಾಗಿದ್ದು, ಗ್ರಾಮದ 30 ಜನ ಮರಣ ಹೊಂದಿದ್ದಾರೆ.

ಇದನ್ನೂ ಓದಿ: ರ‍್ಯಾಲಿಗೆ ಬಂದವರೆಲ್ಲ ವೋಟ್ ಹಾಕಲ್ಲ! – ದಳಪತಿ ವಿಜಯ್​ಗೆ ಟಾಂಗ್‌ ಕೊಟ್ಟ ಕಮಲ್ ಹಾಸನ್!

ದಾಳಿಯ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಬಾಂಬ್ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.   ಸ್ಥಳೀಯ ನಿವಾಸಿಗಳ ಪ್ರಕಾರ, ಗ್ರಾಮಸ್ಥರು ನಿದ್ರಿಸುತ್ತಿದ್ದರು, ಆಗ ಅವರಿಗೆ ದೊಡ್ಡ ಸ್ಫೋಟಗಳ ಶಬ್ದ ಕೇಳಿ ಎಚ್ಚರವಾಯಿತು. ಬಾಂಬ್ ಸ್ಫೋಟವು ಎಷ್ಟು ವಿನಾಶಕಾರಿಯಾಗಿತ್ತೆಂದರೆ ಗ್ರಾಮದ ದೊಡ್ಡ ಭಾಗಗಳು ನಾಶವಾಗಿವೆ. ಕೆಲವು ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿ ಹಲವು ಮಕ್ಕಳು ಸೇರಿದಂತೆ ಹಲವರ ಶವ ನೆಲದ ಮೇಲೆ ಬಿದ್ದಿದ್ದವು. ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುತ್ತಿವೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳುತ್ತದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯವು ಈ ಹಿಂದೆ ಹಲವಾರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಸಾಕ್ಷಿಯಾಗಿದ್ದು, ಈ ಪ್ರದೇಶದಿಂದ ನಾಗರಿಕರ ಸಾವುನೋವುಗಳ ವರದಿಗಳು ಬಂದಿವೆ. ಖೈಬರ್ ಪಖ್ತುಂಖ್ವಾ ಪೊಲೀಸರ ಪ್ರಕಾರ, ಈ ವರ್ಷದ ಜನವರಿ ಮತ್ತು ಆಗಸ್ಟ್ ನಡುವೆ ಪ್ರಾಂತ್ಯದಲ್ಲಿ 605 ಭಯೋತ್ಪಾದಕ ಘಟನೆಗಳು ಸಂಭವಿಸಿದ್ದು, ಕನಿಷ್ಠ 138 ನಾಗರಿಕರು ಮತ್ತು 79 ಪಾಕಿಸ್ತಾನಿ ಪೊಲೀಸರು ಸಾವನ್ನಪ್ಪಿದ್ದಾರೆ. ಆಗಸ್ಟ್‌ನಲ್ಲಿ ಮಾತ್ರ, ಆರು ಪಾಕಿಸ್ತಾನಿ ಸೇನೆ ಮತ್ತು ಅರೆಸೈನಿಕ ಫೆಡರಲ್ ಕಾನ್‌ಸ್ಟಾಬ್ಯುಲರಿ ಸಿಬ್ಬಂದಿಯ ಹತ್ಯೆ ಸೇರಿದಂತೆ 129 ಘಟನೆಗಳು ವರದಿಯಾಗಿವೆ.

Kishor KV