ಮುಷ್ತಾಕ್ ಮುಸ್ಲಿಂ ಆಗಿರಬಹುದು, ಆದರೆ ಅವರು ಮನುಷ್ಯರು – ದಸರಾ ಉದ್ಘಾಟಿಸಿ ಸಿಟ್ಟಿನಲ್ಲೇ ಸಿದ್ದು ಮಾತು

ಮುಷ್ತಾಕ್  ಮುಸ್ಲಿಂ ಆಗಿರಬಹುದು, ಆದರೆ ಅವರು ಮನುಷ್ಯರು – ದಸರಾ ಉದ್ಘಾಟಿಸಿ ಸಿಟ್ಟಿನಲ್ಲೇ ಸಿದ್ದು ಮಾತು

ಮೈಸೂರು ದಸರಾಕ್ಕೆ ಚಾಲನೆ ಕೊಟ್ಟ ನಂತ್ರ  ಮಾತನಾಡಿದ  ಸಿಎಂ ಸಿದ್ದರಾಮಯ್ಯ ಸಿಟ್ಟಿನಿಂದಲೇ  ಭಾಷಣ ಶುರುಮಾಡಿದ್ರು.  ದಸರಾ ಕಾರ್ಯಕ್ರಮದಿಂದ ಎದ್ದು ಹೋಗುತ್ತಿದ್ದ ಜನರ ಮೇಲೆ ಸಿದ್ದರಾಮಯ್ಯ ಸಿಟ್ಟು ಪ್ರದರ್ಶಿಸಿದ್ದು, ಮನೆಯಲ್ಲಿ ಇರಬೇಕಿತ್ತು. ಯಾಕೆ ಬರ್ತಿರಾ ಇಲ್ಲಿಗೆ.‌ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಆಗಲ್ವಾ? ಕುಳಿತುಕೊಳ್ಳಲು ಆಗದವರು ಯಾಕೆ ಕಾರ್ಯಕ್ರಮಕ್ಕೆ ಬರ್ತಿರಾ? ಎಂದು ಸಿಟ್ಟಾದ್ರು.

ಬಾನು ಮುಷ್ತಾಕ್ ಹುಟ್ಟಿನಿಂದ ಮುಸ್ಲಿಂ ಆಗಿರಬಹುದು. ಆದರೆ ಅವರು ಮನುಷ್ಯರು. ಮನುಷ್ಯರು ಧರ್ಮದ ಆಧಾರದ ಮೇಲೆ ದ್ವೇಷಿಸಬಾರದು. ಧರ್ಮದ ಆಧಾರದ ಮೇಲೆ ದ್ವೇಷ ಮಾಡಿದರೆ ಅದು ಮನುಷ್ಯತ್ವದ ಲಕ್ಷಣ ಅಲ್ಲ. ಶ್ರೀರಂಗಪಟ್ಟಣದಲ್ಲಿ ಹೈದರಾಲಿ, ಟಿಪ್ಪು ದಸರಾ ಮಾಡಿದ್ದರು. ಈ ಇತಿಹಾಸ ಎಲ್ಲರಿಗೂ ಗೊತ್ತಿರಬೇಕು. ಬಾನು ಮುಷ್ತಾಕ್‌ರ ಆಯ್ಕೆಯನ್ನು ರಾಜ್ಯದ ಬಹುತೇಕ ಜನರು ಒಪ್ಪಿದ್ದಾರೆ. ಸ್ವಾರ್ಥಕ್ಕಾಗಿ ರಾಜಕೀಯಕ್ಕಾಗಿ ಇತಿಹಾಸ ತಿರುಚುವುದು ಅಕ್ಷ್ಮಮ್ಯ ಅಪರಾಧ. ರಾಜಕೀಯ ಮಾಡುವುದಾದರೆ ಚುನಾವಣೆ ಇದೆ. ಆಗ ಮಾಡೋಣಾ. ಗೋಡಾ ಹೈ, ಮೈದಾನಾ ಹೈ. ರಾಜಕೀಯ ಮಾಡುವುದಾದರೆ ಅಲ್ಲಿ ಮಾಡೋಣ. ಯಾವುದೋ ರಾಜಕೀಯಕ್ಕಾಗಿ, ದ್ವೇಷ ಮಾಡುವುದಕ್ಕಾಗಿ, ಯಾರನ್ನೋ ಓಲೈಸಲು ರಾಜಕೀಯ ಮಾಡಬಾರದು. ಓಲೈಕೆ ರಾಜಕಾರಣ ಅಪಾಯಕಾರಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: ಎಷ್ಟೇ ಅಡೆತಡೆ ಬಂದ್ರೂ ತಾಯಿ ಚಾಮುಂಡಿ ನನ್ನ ದಸರಾ ಉದ್ಘಾಟನೆಗೆ ಕರೆಸಿಕೊಂಡಿದ್ದಾಳೆ – ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್

 ಟಿಪ್ಪು ದಸರಾ ಮಾಡುವಾಗ ರಾಜರಿಗೆ ಗೌರವ ಧನ ಕೊಟ್ಟಿದ್ದರು. ಟಿಪ್ಪು, ಹೈದರಾಲಿ ದಸರಾ ಮಾಡಿದ್ದರು. ಮಿರ್ಜಾ ಇಸ್ಮಾಯಿಲ್ ರನ್ನು ಮಹಾರಾಜರು ಅಂಬಾರಿಯಲ್ಲೆ ಕೂರಿಸಿ ಕೊಂಡು ಹೋಗಿದ್ದರು. ದಸರಾ ಕೋಮು ಸೌರ್ಹಾದತೆಯ ಸಂಕೇತ. ದಸರಾ ಜಾತಿ, ಧರ್ಮ, ರಾಜಕೀಯ ಮೀರಿದ್ದು. ಇದು ಶ್ರೇಷ್ಠ ನಾಡಹಬ್ಬ ಕರ್ನಾಟಕದ ಸಾಂಸ್ಕೃತಿಕ ಹೆಮ್ಮೆ ಈ ದಸರಾ. ಸಂವಿಧಾನಕ್ಕಿಂತಾ ಯಾರು ದೊಡ್ಡವರಲ್ಲ. ಬಾನು ಮುಷ್ತಾಕ್‌ರದ್ದು ಧರ್ಮ ಮೀರಿದ ನಡವಳಿಕೆ ಹೊಂದಿದ್ದಾರೆ. ನಮ್ಮ ನಿಲುವು ಸ್ಪಷ್ಟತೆ ಇದ್ದಾಗ ಬೇರೆ ಯಾರಿಗೋ ಉತ್ತರ ಕೊಡುವ ಅಗತ್ಯವಿಲ್ಲ. ಇದು ನಾಡಿನ ಸಮಸ್ತ ಜನರ ಹಬ್ಬ ಇದು. ಧಾರ್ಮಿಕ ಸೌಹಾರ್ದತೆಯ ಸಂಕೇತ ದಸರಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

Kishor KV