ಎಷ್ಟೇ ಅಡೆತಡೆ ಬಂದ್ರೂ ತಾಯಿ ಚಾಮುಂಡಿ ನನ್ನ ದಸರಾ ಉದ್ಘಾಟನೆಗೆ ಕರೆಸಿಕೊಂಡಿದ್ದಾಳೆ – ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ- 2025ಕ್ಕೆ ಖ್ಯಾತ ಲೇಖಕಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಚಾಲನೆ ನೀಡಿದ್ರು. ಹಳದಿ ಹಸಿರು ಬಣ್ಣದ ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ವೇದಿಕೆಗೆ ಆಗಮಿಸಿದ ಬಾನು ಮುಷಕ್ ತಮ್ಮ ಮಾತುಗಳಿಂದ ಗಮನ ಸೆಳೆದ್ರು. ದಸರಾ ಉದ್ಘಾಟನೆ ಮಾಡಿ ಮಾತನಾಡಿದ ಮುಷ್ತಾಕ್ ದಸರಾ ಉದ್ಘಾಟನೆಯನ್ನ ತಾಯಿ ಚಾಮುಂಡೇಶ್ವರಿ ಕೃಪಾಶೀರ್ವಾದದೊಂದಿಗೆ ವಿಜೃಂಭಣೆಯಿಂದ ಉದ್ಘಾಟನೆ ಮಾಡಿದ್ದೇವೆ ಅಂದ್ರು. ನನ್ನ ಗೆಳತಿ ನನಗೆ ಬೂಕರ್ ಪ್ರಶಸ್ತಿ ಸಂದರ್ಭದಲ್ಲಿ ನನ್ನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದುಕೊಂಡು ಬರ್ತಿನಿ ಎಂದು ಹರಕೆ ಹೊತ್ತಿದ್ದೇನೆ ಎಂದಿದ್ರು. ನನ್ನ ಆಪ್ತ ಗೆಳತಿ.. ನನಗೆ ಹೋಗೋದ್ದಕ್ಕೆ ಸಾಧ್ಯವಾಗಿಲ್ಲ. ಆದ್ರೆ ಸರ್ಕಾರದ ಮೂಲಕ ದಸರಾ ಉದ್ಘಾಟನೆ ಮಾಡಿಸೋ ಮೂಲಕ ಚಾಮುಂಡೇಶ್ವರಿ ನನ್ನ ಕರೆಸಿಕೊಂಡಿದ್ದಾಳೆ ಅಂದ್ರು. ಈ ವಿಷ್ಯದಲ್ಲಿ ಬೇಕಾದಷ್ಟು ಏರು ಪೇರುಗಳು ಬಂದ್ರೂ ತಾಯಿ ಚಾಮುಂಡಿ ನನ್ನ ಕರೆಸಿಕೊಂಡಿದ್ದಾಳೆ ಅಂತ ಬಾನು ಮುಷ್ತಾಕ್ ಒತ್ತಿ ಹೇಳಿದ್ರು.
ಇದನ್ನೂ ಓದಿ: ಚಾಮುಂಡೇಶ್ವರಿಗೆ ಕೈಮುಗಿದು ಭಾವುಕರಾದ ಬಾನು ಮುಷ್ತಾಕ್- ಶಕ್ತಿದೇವತೆಯ ಮಂಗಳಾರತಿ ತೆಗೆದುಕೊಂಡ ಬಾನುಮುಷ್ತಾಕ್
ಹಾಗೇ ಮಾತು ಮುಂದುವರಿಸಿದ ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದ್ದು ನನ್ನ ಅದೃಷ್ಟ.. ಮೈಸೂರು ಅರಸರ ಸಾಧನೆ ಕನ್ನಡ ಸಾಧನೆ ಬಗ್ಗೆ ಕೂಡ ಮಾತನಾಡಿದ್ರು.. ಮೈಸೂರಿನ ಉರ್ದು ಬಾಷಿಕರು ನವರಾತ್ರಿಯ 10 ದಿನಗಳ ಕಾಲ ಅವರ ಗುರುತು ಕೊಟ್ಟಿದ್ದಾರೆ. ಇಲ್ಲಿ ಯಾರು ಬಿನ್ನರಲ್ಲ ಯಾರು ಪರಾಕೀಯರಲ್ಲ ಎಲ್ಲರೂ ಸೇರಿ ಮಾಡುವ ಉತ್ಸವ ಮೈಸೂರು ದಸರಾ ಅಂದ್ರು. ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಮುಸ್ಮಿಮರ ಬಗ್ಗೆ ಅನುಮಾನ ಪಡದೇ ಅಂಗ ರಕ್ಷಕರಾಗಿ ಇಟ್ಟುಕೊಂಡಿರೋ ಪ್ರಸಂಗ ನನಗೆ ಹೆಮ್ಮ ತರುವಂತಹದ್ದು ಎಂದು ಜಯಚಾಮರಾಜೇಂದ್ರರನ್ನ ಹಾಡಿ ಹೊಗಳಿದ್ರು. ಸಂಸ್ಕೃತಿ ಅಂದ್ರೆ ಹೃದಯನ್ನ ಒಟ್ಟುಗೂಡಿಸೋ ಸೇತುವೆ ದ್ವೇಷವನ್ನ ಹರಡುವುದಲ್ಲ ಎಂದ್ರು. ನಾವು ಪರಸ್ವರ ಬದುಕನ್ನ ಗೌರವಿಸೋಣ,ನಂಬಿಕೆಯನ್ನ ಗೌರವಿಸೋಣ ಎಂದ್ರು. ಈ ಮೈಸೂರು ದಸರಾ ಕೇವಲ ಮೈಸೂರಿಗೆಸೀಮಿತ ಆಗಿರದೇ, ನಮ್ಮ ನಾಡಿಗೆ ಸಿಮೀತವಾಗದೇ, ದೇಶಕ್ಕೆ ಸಿಮೀತವಾಗದೇ ಇಡೀ ವಿಶ್ವಕ್ಕೆ ಗೊತ್ತಾಗಲಿ ಎಂದ್ರು..
ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಎಂದರೆ ಕೇವಲ ಮೃದುತ್ವ, ತಾಳ್ಮೆ ಎಂದಲ್ಲ ಅಪಾರ ಗಟ್ಟಿ ಬದುಕಿನ ಹೋರಾಟ ಎಂಬುದನ್ನು ನಾವು ಅರಿಯಬೇಕಿದೆ. ಮೈಸೂರಿನ ಇಡೀ ಒಡೆಯರ್ ಅರಸೊತ್ತಿಗೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಔದಾರ್ಯಕ್ಕೆ ಮಾದರಿಯಾಗಿದ್ದರು. ಸಂಪತ್ತು ಹಂಚಿಕೊಂಡರೆ ವೃದ್ಧಿಯಾಗುತ್ತದೆ, ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕುತ್ತದೆ ಎಂದು ಹೇಳಿದ್ದರು. ನಾನು ಒಬ್ಬ ಸಾಹಿತಿ, ಕವಯಿತ್ರಿ ನನ್ನ ಕವನದ ಮೂಲಕ ಒಂದು ಸಂದೇಶ ನಿಮ್ಮ ಮುಂದೆ ಇಡುತ್ತೇನೆ ಎಂದರು.
ನಾನು ಇದುವರೆಗೂ ಸುಮಾರು ಕಾರ್ಯಕ್ರಮ ನಡೆಸಿದ್ದೇನೆ, ಆಹ್ವಾನಿತಳಾಗಿದ್ದೇನೆ ನೂರಾರು ಸಾರಿ ದೀಪಗಳನ್ನು ಬೆಳಗಿಸಿದ್ದೇನೆ, ನೂರಾರು ಸಾರಿ ಪುಷ್ಪಾರ್ಚನೆ ಮಾಡಿದ್ದೇನೆ, ಮಂಗಳಾರತಿ ಕೂಡ ಸ್ವೀಕರಿಸಿದ್ದೇನೆ. ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬುಕರ್ ಬಾನು ಬದುಕು ಬರಹ ಎಂಬ ಪುಸ್ತಕ ಪ್ರಕಟವಾಗುತ್ತಿದೆ. ಅದರಲ್ಲಿ ನನ್ನ ಆತ್ಮಕಥೆಯ ಒಂದು ಭಾಗ ಪ್ರಕಟವಾಗಲಿದೆ. ಅದರಲ್ಲಿ ನನ್ನ ಮತ್ತು ಹಿಂದು ಧರ್ಮದೊಂದಿಗಿನ ಸಂಬಂಧ, ಬಾಂಧವ್ಯ ಹೇಗಿದೆ ಎಂಬುದನ್ನು ನಾನು ಬರೆದಿದ್ದೇನೆ ಎಂದು ತಿಳಿಸಿದರು. ನೀವು ಓದಿ ಎಂದು ತಮ್ಮ ಮಾತುಗಳನ್ನ ಮುಗಿಸಿದ್ರು.

ನೋಡಿರಿ

