ಚಾಮುಂಡೇಶ್ವರಿಗೆ ಕೈಮುಗಿದು ಭಾವುಕರಾದ ಬಾನು ಮುಷ್ತಾಕ್- ಶಕ್ತಿದೇವತೆಯ ಮಂಗಳಾರತಿ ತೆಗೆದುಕೊಂಡ ಬಾನುಮುಷ್ತಾಕ್

ಮೈಸೂರಿನಲ್ಲಿ ನಾಡಹಬ್ಬದ ವೈಭವ ಶುರುವಾಗಿದೆ. ದಸರಾಗೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದ್ದಾರೆ. ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ:ಶರನ್ನವರಾತ್ರಿ ಮೊದಲ ದಿನ ಶೈಲಪುತ್ರಿಯ ಆರಾಧನೆ – ದೇವಿಯನ್ನ ಪೂಜಿಸುವುದರಿಂದ ಸಿಗುವ ಫಲಗಳೇನು?
ಮೈಸೂರಿನಲ್ಲಿ 415ನೇ ದಸರಾವನ್ನು ಲೇಖಕಿ ಬಾನು ಮುಷ್ತಾಕ್ ಉದ್ಘಾಟನೆ ಮಾಡಿದ್ದಾರೆ. ಬೆಳ್ಳಿ ರಥದಲ್ಲಿ ವಿರಾಜಮಾನಳಾಗಿರೋ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾ ಉದ್ಘಾಟನೆ ಮಾಡಲಾಗಿದೆ. ಪಂಚಲೋಹದಲ್ಲಿ ನೀಲಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿರೋ ದೇವಿಗೆ ದೀಪಬೆಳಗಿ ಪುಷ್ಪಾರ್ಚನೆ ಮಾಡಲಾಯಿತು. ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಬೆಳಿಗ್ಗೆ 10:10ರಿಂದ 10:40ರ ವೃಶ್ಚಿಕ ಲಗ್ನದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದರು.
ದಸರಾ ಉದ್ಘಾಟನೆಗೂ ಮೊದಲು ಬಾನು ಮುಷ್ತಾಕ್ ಚಾಮುಂಡಿ ತಾಯಿ ಸನ್ನಿಧಿಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಿದ್ದರು. ತಾಯಿಯ ಮಂಗಳಾರತಿ ಸ್ವೀಕರಿಸಿ, ಭಾವುಕರಾದರು. ಅರ್ಚಕರು ಅವರ ಕೈಗೆ ಹೂವಿನ ಹಾರ ನೀಡಿ, ಚಾಮುಂಡೇಶ್ವರಿ ತಾಯಿಯ ಮಂಗಳಾರತಿ ನೀಡಿದರು. ಈ ಸಂದರ್ಭದಲ್ಲಿ ಭಾನು ಮುಸ್ತಾಕ್ ಭಾವುಕರಾಗಿ, “ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾರೆ” ಎಂದು ಹೇಳಿದರು. ಕಿತ್ತಳೆ ಹಾಗೂ ಹಸಿರು ಬಣ್ಣದ ಸೀರೆಯುಟ್ಟುಕೊಂಡು ಬಂದಿದ್ದ ಬಾನು ಮುಡಿ ತುಂಬಾ ಹೂವು ಮುಡಿದುಕೊಂಡು ಬಂದಿದ್ದು ವಿಶೇಷವಾಗಿತ್ತು.

ನೋಡಿರಿ

