ಪಾಕಿಸ್ತಾನದ ಸೊಕ್ಕು ಮುರಿದ ಭಾರತ – ಅಭಿಷೇಕ್, ಗಿಲ್ ಆರ್ಭಟಕ್ಕೆ ಪಾಕ್ ಧೂಳಿಪಟ

ಪಾಕಿಸ್ತಾನದ ಸೊಕ್ಕು ಮುರಿದ ಭಾರತ – ಅಭಿಷೇಕ್, ಗಿಲ್ ಆರ್ಭಟಕ್ಕೆ ಪಾಕ್ ಧೂಳಿಪಟ

ಏಷ್ಯಾಕಪ್​ 2025ರ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ ತಂಡ ಬದ್ಧ ಎದುರಾಳಿ ಪಾಕಿಸ್ತಾನವನ್ನ ಧೂಳೀಪಟ ಮಾಡಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 172 ರನ್​ಗಳ ಸವಾಲಿನ ಗುರಿಯನ್ನ, 7 ಎಸೆತಗಳಿರುವಾಗಲೇ ಭಾರತ ಗೆಲುವು ಸಾಧಿಸಿತು.

ಇದನ್ನೂ ಓದಿ: IND ಪ್ರತಿಷ್ಠೆ.. PAK ಸೇಡಿನ ಜ್ವಾಲೆ – ಸೂಪರ್ ಸಂಡೇ.. ಸೂಪರ್ 4 ಫೈಟ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಆರಂಭಿಕ ಬ್ಯಾಟರ್ ಸಾಹಿಬ್ಜಾದಾ ಫರ್ಹಾನ್ 56 ರನ್​ ಗಳ ನೆರವಿನೊಂದಿಗೆ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್​ಗಳಿಸಿತ್ತು. ಒಂದು ಹಂತದಲ್ಲಿ ಪಾಕಿಸ್ತಾನ 10 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 92 ರನ್​ಗಳಿಸಿತ್ತು. ಆದರೆ ಆದರೆ ಭಾರತೀಯ ಸ್ಪಿನ್ ಬೌಲರ್​ಗಳು ಪಾಕ್ ರನ್​ಗತಿಗೆ ಕಡಿವಾಣ ಹಾಕಿದರು. ವರುಣ್ ಚಕ್ರವರ್ತಿ 4 ಓವರ್​ ಬೌಲಿಂಗ್ ಮಾಡಿ ಕೇವಲ 25 ರನ್​ ನೀಡಿದರೆ, ಕುಲ್ದೀಪ್ 31 ರನ್ ನೀಡಿ 1 ವಿಕೆಟ್ ಪಡೆದರು.  ಅಕ್ಷರ್ ಒಂದು ಓವರ್ ಬೌಲಿಂಗ್ ಮಾಡಿ 8 ರನ್ ಬಿಟ್ಟುಕೊಟ್ಟರು. ಶಿವಂ ದುಬೆ ಕೊನೆಯ ಓವರ್ನಲ್ಲಿ 14 ರನ್ ಬಿಟ್ಟುಕೊಟ್ಟಿದ್ದು​ ಹೊರೆತು ಪಡಿಸಿದರೆ, ಉಳಿದ 3 ಓವರ್​ಗಳಲ್ಲಿ ಕೇವಲ 19 ರನ್​ ಮಾತ್ರ ಬಿಟ್ಟುಕೊಟ್ಟಿದ್ದರು. ಹಾರ್ದಿಕ್ ಪಾಂಡ್ಯ 29 ರನ್​ ನೀಡಿ 1 ವಿಕೆಟ್ ಪಡೆದರೆ, ಸ್ಟಾರ್ ಬೌಲರ್ ಬುಮ್ರಾ ವಿಕೆಟ್ ರಹಿತ 45 ರನ್​ ಬಿಟ್ಟುಕೊಟ್ಟು ದುಬಾರಿಯಾದರು.

ನಂತರ ಬ್ಯಾಟಿಂಗ್‌ಗೆ ಬಂದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 72 ರನ್​ ಸಿಡಿಸಿದರೆ, ಅವರ ಆರಂಭಿಕ ಜೊತೆಗಾರ ಶುಭ್​ಮನ್ ಗಿಲ್ 47 ರನ್​ಗಳಿಸಿ ಪಾಕಿಸ್ತಾನದ ಬೌಲರ್‌ಗಳನ್ನು ಬೆಂಡೆತ್ತಿದರು. ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಇಬ್ಬರು ಮೊದಲ 10 ಓವರ್​ಗಳಲ್ಲಿ ಪಾಕಿಸ್ತಾನ ಬೌಲರ್​ಗಳನ್ನ ಸಿಕ್ಕಾಪಟ್ಟೆ ಕಾಡಿದರು. ಈ ಇಬ್ಬರು 59 ಎಸೆತಗಳಲ್ಲಿ 105 ರನ್​ಗಳ ಜೊತೆಯಾಟ ನೀಡಿದರು. ಗಿಲ್​ 28 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 47 ರನ್​ಗಳಿಸಿ ಫಹೀಮ್ ಅಶ್ರಫ್​ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ 3 ಎಸೆತಗಳನ್ನಾಡಿ ಖಾತೆ ತೆರೆಯದೇ ಹಾರಿಸ್ ರೌಫ್​ ಬೌಲಿಂಗ್​​ನಲ್ಲಿ ಅಬ್ರಾರ್ ಅಹ್ಮದ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ನಂತರ ತಿಲಕ್-ಸಂಜು ಮಂದಗತಿಯ ಜೊತೆಯಾಟ ಕೂಡಾ ನಿರಾಸೆ ಮೂಡಿಸಿತು. ಕೊನೆಯಲ್ಲಿ ಅಬ್ಬರಿಸಿದ ತಿಲಕ್ ವರ್ಮಾ 19 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ ಸಹಿತ ಅಜೇಯ 30 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

Sulekha