IND Vs PAK.. ಗೆದ್ದವ್ರೇ ಬಾಸ್ – ಸೂಪರ್ 4ನಲ್ಲೂ ಇಲ್ಲ ಶೇಕ್ ಹ್ಯಾಂಡ್
ಏಷ್ಯಾಕಪ್ ಫೈನಲ್ ಮತ್ತೆ ಮುಖಾಮುಖಿ?

ಭಾರತ ವರ್ಸಸ್ ಪಾಕಿಸ್ತಾನ. ಜಸ್ಟ್ ಏಷ್ಯಾಕಪ್ ಮಟ್ಟಿಗೆ ಮಾತ್ರವಲ್ಲದೆ ಇಡೀ ಕ್ರಿಕೆಟ್ ಲೋಕದಲ್ಲೇ ಹೈವೋಲ್ಟೇಜ್ ಮ್ಯಾಚ್ ಇದು. ಈಗಾಗ್ಲೇ ಲೀಗ್ ಹಂತದ ಪಂದ್ಯದಲ್ಲಿ ಆಟಗಾರರು ಪರಸ್ಪರ ಶೇಕ್ ಮಾಡದೇ ಇರೋದೇ ದೊಡ್ಡ ಕಾಂಟ್ರವರ್ಸಿಯಾಗಿತ್ತು. ಅದೇ ಬಿಸಿಯಲ್ಲೇ ಈಗ ಸೂಪರ್ 4 ಫೈಟ್ನಲ್ಲಿ ಮುಖಾಮುಖಿಯಾಗ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಶನಿವಾರದಿಂದಲೇ ಸೂಪರ್ 4 ಹಂತದ ಪಂದ್ಯಗಳು ಸ್ಟಾರ್ಟ್ ಆಗಿದ್ದು ಮೊದಲ ದಿನ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ವು. ಇದೀಗ ಭಾನುವಾರ ಎರಡನೇ ಪಂದ್ಯದಲ್ಲಿ ಭಾರತ ವರ್ಸಸ್ ಪಾಕಿಸ್ತಾನ ನಡುವೆ ಫೈಟ್ ನಡೆಯಲಿದೆ. ಈ ಪಂದ್ಯ ಇಬ್ಬರ ಪಾಲಿಗೂ ಮುಖ್ಯವಾಗಲಿದೆ.
ಇದನ್ನೂ ಓದಿ : IND Vs OMA ಪಂದ್ಯಕ್ಕಿಲ್ಲ ಬುಮ್ರಾ? – ಪ್ಲೇಯಿಂಗ್ 11 ದಿಢೀರ್ ಟ್ವಿಸ್ಟ್ ಏಕೆ?
ಪಾಕಿಸ್ತಾನ ಮಣಿಸಲು ಭಾರತಕ್ಕೆ ಬಿಗ್ ಅಡ್ವಾಂಟೇಜ್!
ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಫೈಟ್ ಅಂತಾ ಬಂದ್ರೆ ಆಲ್ಮೋಸ್ಟ್ ಭಾರತವೇ ವಿನ್ ಆಗುತ್ತೆ. ಇವತ್ತಿನ ಮ್ಯಾಚಲ್ಲೂ ಭಾರತವೇ ಗೆಲ್ಲುವಂತ ಫೇವರೆಟ್ ಟೀಂ ಎನಿಸಿಕೊಳ್ತಿದೆ. ಅದೂ ಅಲ್ದೇ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನ ಕೇವಲ 127 ರನ್ಗಳಿಗೆ ಕಟ್ಟಿ ಹಾಕಿದ್ದ ಭಾರತ ತಂಡ 15.5 ಓವರ್ಗಳಲ್ಲೇ 3 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆಗಿತ್ತು. 7 ವಿಕೆಟ್ಗಳಿಂದ ಪಂದ್ಯವನ್ನ ಗೆದ್ದು ಕೊಂಡಿತ್ತು. ಈ ಮ್ಯಾಚಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 47 ರನ್‌ಗಳೊಂದಿಗೆ ತಂಡವನ್ನ ಸಮರ್ಥವಾಗಿ ಮುನ್ನಡೆಸಿದ್ರು. ಇನ್ನು ಬೌಲಿಂಗ್ನಲ್ಲಿ ಕುಲ್ದೀಪ್ ಯಾದವ್ ಅವರು 4 ಓವರ್ಗಳಲ್ಲಿ 18 ರನ್ಗಳನ್ನ ನೀಡಿ ಮೂರು ವಿಕೆಟ್ಗಳನ್ನ ಬೇಟೆಯಾಡಿದ್ರು. ಹಾಗೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಗೆದ್ದಿದ್ರು. ಅಲ್ದೇ ಏಷ್ಯಾಕಪ್‌ನಲ್ಲಿ ಇದು ಮೂರನೇ ಬಾರಿಯ ಟಿ-20ಐ ಮಾದರಿ ಟೂರ್ನಿಯಾಗಿದ್ದು ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟಾರೆ 4 ಸಲ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಮೂರು ಸಲ ಗೆದ್ದಿದ್ರೆ ಪಾಕಿಸ್ತಾನ ಒಮ್ಮೆ ಗೆದ್ದಿದೆ. ಏಷ್ಯಾಕಪ್‌ನಲ್ಲಿ ಒಟ್ಟಾರೆಯಾಗಿ ಅಂದ್ರೆ ಏಕದಿನ ಮಾದರಿಯೂ ಸೇರಿ ಉಭಯ ತಂಡಗಳ ನಡುವೆ 20 ಪಂದ್ಯಗಳು ನಡೆದಿವೆ. ಇದ್ರಲ್ಲಿ ಭಾರತ 11 ರಲ್ಲಿ ಗೆಲುವು ಕಂಡಿದ್ರೆ 6ರಲ್ಲಿ ಸೋಲು ಕಂಡಿದೆ. 3 ಪಂದ್ಯಗಳು ಫಲಿತಾಂಶ ಕಂಡಿಲ್ಲ. ಈ ಅಂಕಿ ಅಂಶಗಳನ್ನ ನೋಡಿದ್ರೆ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಯಾವಾಗ್ಲೂ ಮೇಲುಗೈ ಸಾಧಿಸುತ್ತಲೇ ಬಂದಿದೆ.
ಸೆಪ್ಟೆಂಬರ್ 28ಕ್ಕೆ ಫೈನಲ್ ನಲ್ಲಿ ಮುಖಾಮುಖಿ ಸಾಧ್ಯತೆ!
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವೆ ಈ ಸಲ ಫೈನಲ್ ನಡೆಯೋ ಚಾನ್ಸಸ್ನೂ ತಳ್ಳಿ ಹಾಕುವಂತಿಲ್ಲ. ಸೆಪ್ಟೆಂಬರ್ 28 ರಂದು ಪರಸ್ಪರ ಎದುರು ಬದುರಾಗೋ ಸಾಧ್ಯತೆಯೂ ಇದೆ. ಸೂಪರ್ 4 ಹಂತದಲ್ಲಿ ನಾಲ್ಕೂ ತಂಡಗಳು ತಲಾ ಮೂರು ಮೂರು ಪಂದ್ಯಗಳನ್ನ ಆಡಲಿವೆ. ಇದ್ರಲ್ಲಿ ಟಾಪ್ 2ನಲ್ಲಿ ಸ್ಥಾನ ಪಡೆಯುವ ಎರಡು ತಂಡಗಳು ಫೈನಲ್ಗೆ ಅವಕಾಶ ಪಡೆಯಲಿವೆ. ಹಾಗೇನಾದ್ರೂ ಈ ಸಲ ಭಾರತ ಮತ್ತು ಪಾಕ್ ಫೈನಲ್ಗೆ ತಲುಪಿದ್ರೆ ಅದು ಏಷ್ಯಾಕಪ್ ನಲ್ಲಿ ಇತಿಹಾಸ ಸೃಷ್ಟಿಸಿದಂತಾಗುತ್ತೆ. ಯಾಕಂದ್ರೆ ಈವರೆಗೂ 16 ಆವೃತ್ತಿಗಳು ನಡೆದ್ರೂ ಭಾರತ ಮತ್ತು ಪಾಕಿಸ್ತಾನ ಯಾವತ್ತೂ ಕೂಡ ಫೈನಲ್ನಲ್ಲಿ ಮುಖಾಮುಖಿಯಾಗಿಲ್ಲ. ಈ ಸಲ ಆಗುವಂತ ಎಲ್ಲಾ ಸಾಧ್ಯತೆಗಳೂ ಇದೆ.
ಏಷ್ಯಾಕಪ್‌ನಲ್ಲಿ ಭಾರತವೇ ಪವರ್ಫುಲ್ ಟೀಂ. 16 ಆವೃತ್ತಿಗಳ ಜರ್ನಿಯಲ್ಲಿ ಭಾರತವೇ 8 ಸಲ ಟ್ರೋಫಿ ಗೆದ್ದಿದೆ. ಹಾಗೇ ಶ್ರೀಲಂಕಾ 6 ಸಲ ವಿನ್ ಆಗಿದ್ರೆ ಪಾಕಿಸ್ತಾನ 2 ಸಲ ಚಾಂಪಿಯನ್ ಪಟ್ಟಕ್ಕೇರಿದೆ. ಅದೂ ಅಲ್ದೇ ಕಳೆದ ಬಾರಿ ಅಂದ್ರೆ 2023 ರಲ್ಲಿ ನಡೆದಿದ್ದ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಟ್ರೋಫಿ ಗೆದ್ದಿತ್ತು. ಹಾಲಿ ಚಾಂಪಿಯನ್ಶಿಪ್ ಉಳಿಸಿಕೊಳ್ಳೋ ಯೋಜನೆಯಲ್ಲೇ ಭಾರತ ಟೂರ್ನಿಗೆ ಕಾಲಿಟ್ಟಿತ್ತು. ಜೊತೆಗೆ 2016 ರಲ್ಲಿ ಟಿ 20 ಐ ಸ್ವರೂಪವನ್ನು ಗೆದ್ದ ಮೊದಲನೇ ತಂಡವೂ ಭಾರತವೇ ಆಗಿದೆ. ಈ ಬಾರಿಯೂ ಕೂಡ ವಿನ್ ಆದ್ರೆ ಒಂಬತ್ತನೇ ಪ್ರಶಸ್ತಿಯಾಗಲಿದೆ.

ನೋಡಿರಿ

