ಮೂಡಿಗೆರೆಯ ಭೈರ ಏಕಲವ್ಯನಾಗಿ ಬದಲಾಗಿದ್ದು ಹೇಗೆ? – ಅಂದು ನರಹಂತಕ.. ಇಂದು ದಸರಾ ನಿಶಾನೆ ಪಟ್ಟ

ಮೂಡಿಗೆರೆ ಭೈರ. ಈ ಹೆಸರು ಕೇಳಿದರೆ ಸಾಕು ಎರಡು ಮೂರು ವರ್ಷಗಳ ಹಿಂದೆ ಮಲೆನಾಡು ಗಡಗಡ ನಡುಗುತ್ತಿತ್ತು. ಭೈರ ಬಂದ ಅಂದರೆ ಕಾಫಿತೋಟದಲ್ಲಿ ಮೌನ ಆವರಿಸುತ್ತಿತ್ತು. ಮನುಷ್ಯರ ನೆಲೆ ಕಂಡರೆ ಅಲ್ಲೊಂದು ಸಾವು ನೋವು ಇರುತ್ತಿತ್ತು. ಈಗ ಅದೇ ಭೈರ ಹೇಗಿದ್ದವರು ಹೇಗಾಗಿದ್ದಾನೆ ಗೊತ್ತಾ?
ಇದನ್ನೂ ಓದಿ:ಅಂದು ನರಹಂತಕ, ಇಂದು ಎಲ್ಲರ ಪ್ರೀತಿಯ ಸುಗ್ರೀವ – ಗಜಪಡೆಯ ಬಲಿಷ್ಠ ಆನೆ ಸುಗ್ರೀವನ ಕಥೆಯೇ ರೋಚಕ
ಪೂರ್ಣಚಂದ್ರ ತೇಜಸ್ವಿ ಕಾಲದ ಕೃಷ್ಣೇಗೌಡನ ಆನೆ ಕಥೆ ಎಷ್ಟು ಜನಪ್ರಿಯತೆ ಪಡೆದುಕೊಂಡಿತ್ತೋ.. ಅದೇ ತರ ಮಲೆನಾಡಲ್ಲಿ ಮೂಡಿಗೆರೆ ಭೈರ ಅಷ್ಟೇ ಹೆಸರುವಾಸಿ. ಈತ ಖ್ಯಾತಿಯಾಗಿದ್ದಲ್ಲ. ಕುಖ್ಯಾತಿಯಾಗಿದ್ದ. ಮಲೆನಾಡು ಜನರಿಗೆ ಆನೆ ಅಂದರೆ ಮೊದಲು ನೆನಪಿಗೆ ಬರುವುದು ಇದೇ ಭೈರ. ಮೂಡಿಗೆರೆಯಲ್ಲಿ ಈತ ಇಟ್ಟ ಹಾವಳಿ ಒಂದಾ ಎರಡಾ.
ಮೂಡಿಗೆರೆಯ ಭೈರಾಪುರಕ್ಕೆ ಕೆಲ ವರ್ಷಗಳ ಹಿಂದೆ ಎಂಟ್ರಿ ಕೊಟ್ಟ ಈತ ನರಹಂತಕನಾಗಿ ಬದಲಾಗಿ ಬಿಡ್ತಾನೆ. ಮೂಡಿಗೆರೆ, ಆಲ್ದೂರು ಸುತ್ತಮುತ್ತಲ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಹಾವಳಿಯಿಟ್ಟಿದ್ದ. ಜೊತೆಗೆ ಮೂವರ ಸಾವಿಗೂ ಕಾರಣವಾಗಿದ್ದ. ಭೈರನ ಸೆರೆಹಿಡಿಯಲು ಜನ ಪ್ರತಿಭಟನೆ ಮಾಡಿದ್ದರು. ಕೊನೆಗೂ ಒಂದು ದಿನ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕಿ ಮುತ್ತಿಗೋಡು ಅರಣ್ಯಕ್ಕೆ ಬರುತ್ತಾನೆ. ಅಲ್ಲಿ ಭೈರನಿಗೆ ಏಕಲವ್ಯ ಎಂದು ಹೆಸರಿಡಲಾಗುತ್ತೆ. ಮೂಡಿಗೆರೆಯ ಭೈರ ಏಕಲವ್ಯನಾಗಿ ಬದಲಾಗುತ್ತಾನೆ. ಕೇವಲ ಒಂದೇ ವರ್ಷದಲ್ಲಿ ಭೈರ ಬದಲಾಗಿ ಹೋಗುತ್ತಾನೆ. ಸೌಮ್ಯ ಸ್ವಭಾವದಿಂದ ಏಕಲವ್ಯ ಎಲ್ಲರ ಮನಗೆಲ್ಲುತ್ತಾನೆ.
ನಡಿಗೆಯಲ್ಲಿ ರಾಜಗಾಂಭೀರ್ಯ, ಗುಣದಲ್ಲಿ ಸೌಮ್ಯಸ್ವಭಾವ.. ಅಭಿಮನ್ಯು ಜೊತೆ ಅಂತರ ಕಾಯ್ದುಕೊಳ್ಳುವ ಏಕಲವ್ಯನಿಗೆ ಬಳ್ಳೆ ಲಕ್ಷ್ಮೀಯೆಂದರೆ ತುಂಬಾ ಪ್ರೀತಿ. ಈಗ ಇದೇ ಏಕಲವ್ಯ ಕಳೆದ ವರ್ಷದಿಂದ ದಸರಾ ಆನೆಯಾಗಿ ಎಲ್ಲರ ಮನಗೆದ್ದಿದ್ದಾನೆ. ಅರಮನೆಯಲ್ಲಿ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದಾನೆ. ಅದರಲ್ಲೂ ನಿಶಾನೆ ಆನೆಯಾಗಿ ಆಯ್ಕೆಯಾಗಿದ್ದಾನೆ.

ನೋಡಿರಿ

