ಶೂಟಿಂಗ್ ವೇಳೆ ಅವಘಡ – ಟಾಲಿವುಡ್ ನಟ ಜೂ.ಎನ್ಟಿಆರ್ಗೆ ಗಂಭೀರ ಗಾಯ!

ಟಾಲಿವುಡ್ನ ಸ್ಟಾರ್ ನಟ ಜೂ.ಎನ್ಟಿಆರ್ಗೆ ಶೂಟಿಂಗ್ ವೇಳೆ ಗಂಭೀರವಾಗಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ಗೆಲುವಿನ ಓಟ ಮುಂದುವರಿಸಿದ ಟೀಮ್ ಇಂಡಿಯಾ – ಒಮಾನ್ ವಿರುದ್ಧ ಭಾರತಕ್ಕೆ 21 ರನ್ಗಳಿಂದ ಜಯ!
ಜೂ. ಎನ್ಟಿಆರ್ ಹೈದ್ರಾಬಾದ್ನಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ಈ ಅವಘಡ ನಡೆದಿದೆ ಎಂದು ಹೇಳಲಾಗ್ತಿದೆ. ಚಿತ್ರೀಕರಣದ ವೇಳೆ ನೆಲದ ಮೇಲೆ ಸ್ಲಿಪ್ ಆಗಿ ಬಿದ್ದಿದ್ದು, ಕಾಲಿಗೆ ಬಲವಾಗಿ ಪೆಟ್ಟಾಗಿದೆ. ಇದ್ರಿಂದಾಗಿ ನಟ ಕಾಲಿನ ಮೂಳೆ ಮುರಿತವಾಗಿದೆ. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದ್ರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಜೂ.ಎನ್ಟಿಆರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಟನಿಗೆ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಮೂಳೆಗೆ ಪೆಟ್ಟಾಗಿರುವುದರಿಂದ ಕೆಲವು ದಿನ ಚಿತ್ರೀಕರಣದಿಂದ ದೂರ ಉಳಿಯಬೇಕಾಗಿದೆ.
ತಮ್ಮ ನೆಚ್ಚಿನ ನಟ ಆಸ್ಪತ್ರೆಗೆ ಸೇರಿರುವ ವಿಷಯ ತಿಳಿದು ಅಭಿಮಾನಿಗಳು ಆಸ್ಪತ್ರೆ ಎದುರು ಜಮಾಯಿಸಿದ್ದಾರೆ. ಈ ಬೆನ್ನಲ್ಲೇ ಆಸ್ಪತ್ರೆ ವೈದ್ಯರು ಹೆಲ್ತ್ ಬುಲಿಟಿನ್ ರಿಲೀಸ್ ಮಾಡಿ ಜೂ.ಎನ್ಟಿಆರ್ ಆರೋಗ್ಯವಾಗಿರುವುದನ್ನ ಖಚಿತಪಡಿಸಿದ್ದಾರೆ. ಚಿಕಿತ್ಸೆ ಮುಂದುವರಿದಿದ್ದು, ವಿಶ್ರಾಂತಿ ಬಳಿಕ ಅವರು ಗುಣಮುಖರಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಇದೀಗ ತಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನೋಡಿರಿ

