IP, OTP ಮುಚ್ಚಿಟ್ಟಿದ್ದೇಕೆ ಆಯೋಗ? – ಸಾಕ್ಷಿ ಸಮೇತ ಲಾಕ್ ಆದ್ರಾ?
ಏನಿದು ವೋಟ್ ಡಿಲೀಟ್ ಸಾಫ್ಟ್ವೇರ್?

IP, OTP ಮುಚ್ಚಿಟ್ಟಿದ್ದೇಕೆ ಆಯೋಗ? – ಸಾಕ್ಷಿ ಸಮೇತ ಲಾಕ್ ಆದ್ರಾ?ಏನಿದು ವೋಟ್ ಡಿಲೀಟ್ ಸಾಫ್ಟ್ವೇರ್?

ರಾಜ್ಯದಲ್ಲಿ ಸದ್ದು ಮಾಡ್ತಿರೋ ಪ್ರಕರಣ ಅಂದ್ರೆ ಅದು ಮತಗಳ್ಳತನ ಕೇಸ್‌.. ಚುನಾವಣಾ ಆಯೋಗದ ಮೇಲೆ ರಾಹುಲ್ ಗಾಂಧಿ ನೇರವಾಗಿ ಆರೋಪವನ್ನ ಮಾಡಿದ್ದಾರೆ. ಆಳಂದ ಕ್ಷೇತ್ರದಲ್ಲಿ 6018 ಮತಗಳನ್ನ ಡಿಲೀಟ್ ಮಾಡಿಸೋ ಯತ್ನ ನಡೆದಿದೆ. ಅದು ಕಾಂಗ್ರೆಸ್‌ಗೆ ಸೇರಿದ್ದ ಮತಗಳನ್ನ ಅನ್ನೋದು ರಾಹುಲ್ ಗಾಂಧಿ ಅವರ ಆರೋಪ.. ಅದ್ದಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನ ಕೂಡ ರಾಹುಲ್ ಗಾಂಧಿ ಕೊಟ್ಟಿದ್ದಾರೆ. ಗುರುವಾರ ನಡೆಸಿದ ಪ್ರೇಸ್‌ಮೀಟ್‌ನಲ್ಲಿ ಯಾರನ್ನ ವೋಟರ್ ಲೀಸ್ಟ್‌ನಿಂದ ಡಿಲೀಟ್ ಮಾಡಿಸಲು ಯತ್ನಿಸಲಾಗಿದೆ?  ಫೇಕ್  ನಂಬರ್‌ನಿಂದ  ಡಿಲೀಟ್ ಮಾಡಿಸಲಾಗಿದೆ ಅನ್ನೋದ್ದನ್ನ ರಾಹುಲ್ ಗಾಂಧಿ ಪಿನ್‌ ಟೂ ಪಿನ್ ಡೇಟಾ ಕೊಟ್ಟಿದ್ದಾರೆ. ಇದ್ದನ್ನೆಲ್ಲಾ ನೋಡಿದಾಗ ಚುನಾವಣಾ ಆಯೋಗದ ಮೇಲೆ ಅನುಮಾನ ಹೆಚ್ಚಾಗಿದೆ. ಇದ್ದಕ್ಕೆ ಕಾರಣ ಎಲೆಕ್ಷನ್‌ ಕಮಿಷನ್ ಸಿಐಡಿಗೆ ಸರಿಯಾದ ಮಾಹಿತಿ ನೀಡದೇ ಇರುವುದು.

ಇದನ್ನೂ ಓದಿ : ಭಾರತ ಭಯೋತ್ಪಾದಕ ನೆಲೆ ಮೇಲೆ ದಾಳಿ ಮಾಡಿದ್ದು ನಿಜ – ಕಟ್ಟಡದ ಅವಶೇಷದ ಮಧ್ಯೆ ನಿಂತು ಸತ್ಯ ಒಪ್ಪಿಕೊಂಡ ಉ*ಗ್ರ

ರಾಹುಲ್ ಗಾಂಧಿ  ಮಾಡಿರೋ ಆರೋಪ ಏನು ಅಂದ್ರೆ  ಆಳಂದ ಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್ ಮಾಡೋಕೆ ಪ್ರಯತ್ನ ನಡೆದಿದೆ. 6018 ಮತದಾರರ ಡಿಲೀಟ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಅದು ಫೇಕ್ ಲಾಗಿನ್ ಐಡಿಗಳನ್ನ ಬಳಸಿ ಮತದಾರರ  ಡಿಲೀಟ್‌ಗೆ ಯತ್ನಿಸಲಾಗಿದೆ ಅನ್ನೋದು. ಕಾಂಗ್ರೆಸ್ ಪ್ರಬಲವಾಗಿರೋ ಕ್ಷೇತ್ರದಲ್ಲಿ ಕಾಂಗ್ರೆಸ್ ಕಡೆ ಇರೋ ಮತದಾರರನ್ನ ಡಿಲೀಟ್ ಮಾಡೋಕೆ ಯತ್ನಿಸಲಾಗಿದೆ ಅನ್ನೋದು ರಾಹುಲ್ ಗಾಂಧಿ ಆರೋಪ. ಇದ್ರ ಹಿಂದೆ ಬೇರೆ ಯಾರದ್ದೋ ಕೈವಾಡ ಇದೆ. ಇದ್ದಕ್ಕೆ ಚುನಾವಣಾ ಆಯೋಗದ ಸಪೋರ್ಟ್ ಇದೆ ಅನ್ನೋದು ರಾಹುಲ್ ಗಾಂಧಿ ಆರೋಪ.  ರಾಹುಲ್ ಗಾಂಧಿ ಅದ್ದಕ್ಕೆ ಕೆಲ ಸಾಕ್ಷಿ ಕೊಟ್ಟಿದ್ದಾರೆ.. ಬಟ್ ಈ ವಿಷ್ಯದಲ್ಲಿ ಕರ್ನಾಟಕ ಎಲೆಕ್ಷನ್ ಕಮಿಷನ್ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ರಾಹುಲ್ ಗಂಂಧಿ ಆರೋಪಕ್ಕೆ ಚುನಾವಣಾ ಆಯೋಗ ಏನ್ ಹೇಳಿದೆ ಅಂದ್ರೆ ನಾವು 2023ರ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗೆದ್ದಿದೆ. ರಾಹುಲ್ ಗಾಂಧಿ ಆರೋಪಕ್ಕೆ ಆಧಾರಗಳೇ ಇಲ್ಲ. ಆನ್‌ಲೈನ್ ಮೂಲಕ ಮತದಾರರನ್ನ ಡಿಲೀಟ್ ಮಾಡೋಕೆ ಆಗಲ್ಲ. ಆದ್ರೆ ಆಳಂದ ಕ್ಷೇತ್ರದಲ್ಲಿ ಮತಗಳ ಡಿಲೀಟ್‌ಗೆ ವಿಫಲ ಯತ್ನಗಳು ನಡೆದಿದ್ದು ನಿಜ. ಚುನಾವಣಾ ಆಯೋಗದ ಅಧಿಕಾರಿಯೇ ಈ ಬಗ್ಗೆ 2023ರಲ್ಲೇ ದೂರು ಕೊಟ್ಟಿದ್ದಾರೆ ಅಂತ ಚುನಾವಣಾ ಆಯೋಗ ಹೇಳಿದೆ. ಬಟ್ ಇಲ್ಲಿ ಅನುಮಾನ ಹುಟ್ಟುವುದ್ದಕ್ಕೆ ಸಾಕಷ್ಟು ಕಾರಣಗಳಿವೆ. ಎಲೆಕ್ಷನ್ ಕಮಿಷನ್  ಕಂಪ್ಲೇಂಟ್ ಕೊಟ್ಟಿದ್ದು 2023ರಲ್ಲಿ.. ಸುಮಾರು 2 ವರ್ಷ ಆಗ್ತಾ ಬಂತು.. ಆಮೇಲೆ ಏನ್ ಆಯ್ತು ಅನ್ನೋದು ಗೊತ್ತಿಲ್ಲ.  ಸಿಐಡಿಯಲ್ಲಿ ಎಫ್‌ಐಆರ್‌  ಆಗಿದೆ.  ಆದ್ರೆ ಯಾಕೆ ಎಲೆಕ್ಷನ್ ಕಮಿಷನ್ ಸಿಐಡಿ ತನಿಖೆಗೆ ಸಹಕರಿಸುತ್ತಿಲ್ಲ ಅನ್ನೋದು ಮುಖ್ಯ ಆಗುತ್ತೆ. ಇದ್ದಕ್ಕೆ ಎಲೆಕ್ಷನ್ ಕಮಿಷನ್ ಉತ್ತರ ಕೊಡಬೇಕು.. ಸುಮ್ಮನೇ ರಾಹುಲ್ ಗಾಂಧಿ ಸುಳ್ಳು ಹೇಳಿದ್ರು ಅಂತ ತೇಪೆ ಹಚ್ಚೋ ಕೆಲಸ ಮಾಡಬಾರದು. ಇದೇ ಕೇಸ್‌ಗೆ ಸಂಬಂಧ ಪಟ್ಟ ಮಾಹಿತಿ ಕೇಳಿ  ಸಿಐಡಿ ಚುನಾವಣಾ ಆಯೋಗಕ್ಕೆ  ಪತ್ರ ಬರೆದಿದೆ.  ಎಫ್‌ಐಆರ್ ದಾಖಲಿಸಿ 18 ತಿಂಗಳಲ್ಲಿ 18  ಪತ್ರ ಬರೆದಿದೆ. ಆದ್ರೆ ಯಾವುದೇ ಪತ್ರಕ್ಕೂ ಎಲೆಕ್ಷನ್ ಕಮಿಷನ್ ಉತ್ತರ ಕೊಟ್ಟಿಲ್ಲ. ಎಲೆಕ್ಷನ್ ಕಮಿಷನ್ ಹೇಳಬೇಕು. ಸಣ್ಣಪುಟ್ಟ ಕೇಸ್ ಆಗಿದ್ರೆ ಹೌದಪ್ಪ. ಬಟ್ ಇದು ಗಂಭೀರ್ ಆದ ಪ್ರಕರಣ ಇದ್ರಲ್ಲಿ ಯಾಕೆ ಎಲೆಕ್ಷನ್ ಕಮಿಷನ್ ಸೈಲೆಂಟ್ ಆಗಿದೆ ಅನ್ನೋದು ಗೊತ್ತಾಗಿಲ್ಲ.

ಚುನಾವಣಾ ಆಯೋಗ ಯಾಕೆ ಕೊಟ್ಟಿಲ್ಲ IP ಅಡ್ರೆಸ್‌, OTP ಮಾಹಿತಿ

ಇಲ್ಲಿ ಚುನಾವಣಾ ಆಯೋಗದ ಮೇಲೆ ಅನುಮಾನ ಬರುವುದ್ದಕ್ಕೆ ಕಾರಣ ಸಿಐಡಿ 18 ಸಲ ಪತ್ರ ಬರೆದು IP ಅಡ್ರೆಸ್‌, OTP ಮಾಹಿತಿ ಕೇಳಿದೆ. ಆದ್ರೆ ಆಯೋಗ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ಉತ್ತರ ಕೊಟ್ಟಿಲ್ಲ. ಕೇವಲ ಎಫ್ ಐ ಆರ್ ಹಾಕಿ ಕುಳಿತ್ರೆ ಸಾಕ.. 18 ತಿಂಗಳಲ್ಲಿ IP ಅಡ್ರೆಸ್‌, OTP ಹೇಗೆ ಕ್ರಿಯೇಟ್ ಆಯ್ತು ಅನ್ನೋ ಮಾಹಿತಿ  ಕೊಟ್ಟಿದ್ರೆ ತನಿಖೆಗೆ ಪ್ರಗತಿ ಹಂತಕ್ಕೆ ಹೋಗ್ತಾ ಇತ್ತು.  ಯಾರು ಮತದಾರರನ್ನ ಡಿಲೀಟ್ ಮಾಡಿಸೋಕೆ ಪ್ರಯತ್ನ ಮಾಡಿದ್ದಾರೆ ಅನ್ನೋದು ಗೊತ್ತಾಗ್ತಿತ್ತು ಇಷ್ಟೊತ್ತಿಗೆ. ಕೇವಲ ನಾವು ಎಫ್ಐ ಆರ್ ಮಾಡಿದ್ದೇವೆ ಅಂತ ಹೇಳ್ತಾ ಯಾವುದೇ ಮಾಹಿತಿಯನ್ನ ಸಿಐಡಿಗೆ ಕೊಡದೇ ಇರುವುದ್ದನ್ನ ನೋಡಿದ್ರೆ ಎಲೆಕ್ಷನ್ ಕಮಿಷನ್ ಮೇಲೆ ಅನುಮಾನ ಬರುವಂತೆ ಮಾಡ್ತಿದೆ. ರಾಹುಲ್ ಗಾಂಧಿ ಅವರು ಫೋನ್ ನಂಬರ್‌ನನ್ನ ಕೂಡ ಉಲ್ಲೇಖ ಮಾಡಿದ್ದಾರೆ. ಅದ್ದನ್ನ ಅವರಿಗೆ ಸಿಐಡಿನೇ ಕೊಟ್ಟಿರುತ್ತೆ.. ಫೋನ್ ನಂಬರ್ ಇದೆ.. ಅದ್ದಕ್ಕೆ ಬೇಕಾದ ಸಾಕ್ಷಿ ಕೂಡ ಇದೆ. ಎಲೆಕ್ಷನ್ ಕಮಿಷನ್ ಸಿಐಡಿ ಕೇಳಿದ IP ಅಡ್ರೆಸ್ ಮತ್ತು OPT ನೀಡುವ ಕೆಲಸ ಮಾಡಬೇಕಿದೆ.

ರಾಹುಲ್ ಗಾಂಧಿ ಹೇಳಿದ್ದು ನಿಜವಾಗಬೇಕಾದ್ರೆ ಐಪಿ ಅಡ್ರೆಸ್ ಹಾಗೂ OTP ವಿವರಗಳು ಬೇಕಿದೆ. ಅದ್ದನ್ನ ಚುನಾವಣಾ ಆಯೋಗ ನಿಡ್ತಿಲ್ಲ ಅನ್ನೋದು ರಾಹುಲ್ ಗಾಂಧಿ ಆರೋಪ. ಒಂದು ವೇಳೆ ಡೇಟಾ ಎಲೆಕ್ಷನ್ ಕಮಿಷನ್ ನೀಡಿ ಅದ್ರಿಂದ ಆರೋಪ ಸಾಬೀತು ಆಗದಿದ್ರೆ ರಾಹುಲ್ ಗಾಂಧಿಗೆ ಮುಖಭಂಗ ಆಗೋದು ಪಕ್ಕಾ. ನೀಡಲ್ಲ ಅಂದ್ರೆ ಚುನಾವಣಾ ಆಯೋಗ ಆರೋಪಿ ಸ್ಥಾನದಲ್ಲಿರುತ್ತೆ.

Kishor KV