ಮೋಹನ್ ಲಾಲ್ ನಟನೆಯ ವೃಷಭ ಸಿನಿಮಾದ ಟೀಸರ್ ರಿಲೀಸ್ – ನಂದ ಕಿಶೋರ್ ನಿರ್ದೇಶನದ ಅದ್ಫುತ ಸಿನಿಮಾ

ಮೋಹನ್ ಲಾಲ್ ನಟನೆಯ ವೃಷಭ ಸಿನಿಮಾದ ಟೀಸರ್ ರಿಲೀಸ್ – ನಂದ ಕಿಶೋರ್ ನಿರ್ದೇಶನದ ಅದ್ಫುತ ಸಿನಿಮಾ

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಬಹು ನಿರೀಕ್ಷಿತ ವೃಷಭ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 1 ನಿಮಿಷ 43 ಸೆಕೆಂಡ್ ಇರುವ ಟೀಸರ್ ಬಹಳಷ್ಟು  ಇಂಟ್ರೆಸ್ಟಿಂಗ್ ಆಗಿದೆ. ಮೋಹಲ್ ಲಾಲ್ ರಾಜನಾಗಿ ನಟನೆ ಮಾಡಿದ್ದು, ಎಂಟ್ರಿ ಭರ್ಜರಿಯಾಗಿದೆ.  ನಂದ ಕಿಶೋರ್ ಕಥೆ ಬರೆದು ‘ವೃಷಭ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ  ಆಂಥೋನಿ ಸ್ಯಾಮ್ಸನ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಸ್ಯಾಮ್ ಸಿಎಸ್ ಸಂಗೀತ ಟೀಸರ್‌ನಲ್ಲಿ ಹೈಲೆಟ್ ಆಗಿದೆ.  ಚಿತ್ರದಲ್ಲಿ ಕನ್ನಡ ಕಲಾವಿದರು ಮಿಂಚಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸರ್ಮಜಿತ್ ಮೋಹನ್ ಲಾಲ್ ಮಗನಾಗಿ ಅಭಿನಯಿಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ ವೀಕ್ಷಣೆ 1 ಮಿಲಿಯನ್‌   ಹತ್ರ ಸಾಗುತ್ತಿದ್ದ, ಒಳ್ಳೆಯ ರೆಸ್ಪಾನ್ಸ್  ಬರ್ತಿದೆ.

 

ನಿರ್ಮಾಪಕಿ ಏಕ್ತಾ ಆರ್ ಕಪೂರ್ ಮಾತನಾಡಿ, ವೃಷಭ ಅದ್ಭುತವಾದ ಪ್ರಾಜೆಕ್ಟ್. ಇದು ಕೇವಲ ಸಿನಿಮಾವಲ್ಲ. ಸಂಬಂಧ, ಸೇಡು ಮತ್ತು ಪುನರ್ಜನ್ಮದ ಮಹಾಕಾವ್ಯವಾಗಿದೆ. ಈ ಸಿನಿಮೀಯ ಅನುಭವವನ್ನು ಪ್ರಸ್ತುತಪಡಿಸಲು ಅದ್ಭುತ ಪ್ರತಿಭೆಗಳೊಂದಿಗೆ ಸಹಕರಿಸಲು ನಾವು ರೋಮಾಂಚನ ಗೊಂಡಿದ್ದೇವೆ ಅಂತ ಹೇಳಿದ್ದಾರೆ.

 

ನಿರ್ದೇಶಕ ನಂದ ಕಿಶೋರ್ ಮಾತನಾಡಿ ವೃಷಭವು ಕೇವಲ ಸಿನಿಮಾವಲ್ಲ, ಅದೊಂದು ಎಮೋಷನ್.. ಲೆಜೆಂಡ್ ಎನಿಸಿಕೊಂಡಿರುವ ಮೋಹನ್ ಲಾಲ್ ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ಇದೆ. ಮಗನ ಪಾತ್ರದಲ್ಲಿ ಸಮರ್ಜಿತ್ ನಟಿಸಿದ್ದಾರೆ. ಅದ್ಭುತ ಸಾಮರ್ಥ್ಯ ಹೊಂದಿರುವ ಯುವ ಪ್ರತಿಭೆ. ವೃಷಭವು ತಂದೆ ಮತ್ತು ಮಗನ ಬಾಂಧವ್ಯದ ಕಥೆಯಾಗಿದೆ. ಪ್ರೇಕ್ಷಕರು ಇದನ್ನು ಬೆಳ್ಳಿಪರದೆಯ ಮೇಲೆ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಾನು‌ ನೋಡಲು ಕಾತುರನಾಗಿದ್ದೇನೆ  ಎಂದರು.

ಕನೆಕ್ಟ್ ಮೀಡಿಯಾ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ಅಭಿಷೇಕ್ ಎಸ್ ವ್ಯಾಸ್ ಸ್ಟುಡಿಯೋಸ್ ಜೊತೆಗೂಡಿ ಪ್ರಸ್ತುತಪಡಿಸುತ್ತಿರುವ ವೃಷಭ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಸಿ.ಕೆ. ಪದ್ಮ ಕುಮಾರ್, ವರುಣ್ ಮಾಥುರ್, ಸೌರಭ್ ಮಿಶ್ರಾ, ಅಭಿಷೇಕ್ ಎಸ್ ವ್ಯಾಸ್, ಪ್ರವೀರ್ ಸಿಂಗ್, ವಿಶಾಲ್ ಗುರ್ನಾನಿ ಮತ್ತು ಜೂಹಿ ಪರೇಖ್ ಮೆಹ್ತಾ ನಿರ್ಮಿಸಿದ್ದಾರೆ. ಮಲಯಾಳಂ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ಈ ಚಿತ್ರ ಹಿಂದಿ ಮತ್ತು ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ. ಈ ದೀಪಾವಳಿ  ವಿಶ್ವದಾದ್ಯಂತ ತೆರೆಗೆ ಬರಲಿದೆ.

Kishor KV