ಗೌತಮ್ ಪ್ರೀತಿ ಧಿಕ್ಕರಿಸಿದ ಭೂಮಿಕಾ – ಮಗನ ನೋಡಲು ಬಂದ ಗೌತಮ್ ಮತ್ತು ಆನಂದ್ ಮಾಸ್ಟರ್ ಪ್ಲಾನ್ ವರ್ಕ್ ಆಗುತ್ತಾ?

ಗೌತಮ್ ಪ್ರೀತಿ ಧಿಕ್ಕರಿಸಿದ ಭೂಮಿಕಾ – ಮಗನ ನೋಡಲು ಬಂದ ಗೌತಮ್ ಮತ್ತು ಆನಂದ್ ಮಾಸ್ಟರ್ ಪ್ಲಾನ್ ವರ್ಕ್ ಆಗುತ್ತಾ?

ಮನದರಸಿ ಸಿಕ್ಕಾಯ್ತು.. ಗೌತಮ್ ಭೂಮಿಕಾ ಒಂದಾದರು ಎಂದು ಕಾಯುತ್ತಿದ್ದ ವೀಕ್ಷಕರಿಗೆ ಮತ್ತೊಮ್ಮೆ ನಿರಾಶೆಯಾಗಿದೆ. ಗೌತಮ್ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಭೂಮಿಕಾ, ತಿರಸ್ಕರಿಸಿದ್ದಾಳೆ. ಬಯಸಿ ಬಂದ ಪ್ರೀತಿಯನ್ನು ಕಾಲಲ್ಲಿ ಒದ್ದು ಮುಂದೆ ಸಾಗಿದ್ದಾಳೆ. ಆದರೆ, ಗೌತಮ್ ಮಾತ್ರ ತನ್ನ ಪ್ರಯತ್ನದಿಂದ ಹಿಂದೆ ಸರಿದಿಲ್ಲ. ಭೂಮಿಕಾ ನೋಡಿದ ಗೌತಮ್ ಮಗನ ನೋಡಲು ಸ್ನೇಹಿತನ ಜೊತೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ.

ಇದನ್ನೂ ಓದಿ: ಅಮೃತಧಾರೆ ಸೀರಿಯಲ್‌ ನಲ್ಲಿ ಬಂದೇ ಬಿಡ್ತು ಆ ಕ್ಷಣ..!- ಭೂಮಿಗೆ ಗೌತಮ್ ಹೂವು ಕೊಟ್ಟಾಯ್ತು..!

ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ನಂತರ ಭೂಮಿಕಾ ಮತ್ತು ಗೌತಮ್ ಒಬ್ಬರನೊಬ್ಬರು ನೋಡಿದ್ದಾರೆ. ಗುಲಾಬಿ ಹೂವು ಕೊಟ್ಟು ಪ್ರೇಮ ಪತ್ರ ಕೊಟ್ಟರೂ ಕೂಡಾ ಭೂಮಿಕಾ ಗೌತಮ್ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಆದರೆ, ಗೌತಮ್ ಗೊತ್ತಲ್ಲ… ಸೋಲುವ ಮಾತೇ ಇಲ್ಲ. ತನ್ನ ಪ್ರೀತಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾನೆ. ಇದಕ್ಕಾಗಿ ಗೌತಮ್ ಬಳಿ ಮತ್ತೊಂದು ಪ್ಲಾನ್ ರೆಡಿಯಾಗುತ್ತಿದೆ. ಈ ಪ್ಲಾನ್‌ ಗೌತಮ್ ಮತ್ತು ಸ್ನೇಹಿತ ಆನಂದ್ ಜೊತೆಯಾಗಿ ರೂಪಿಸಿದ್ದಾರೆ.

ಗೌತಮ್ ತನ್ನ ಪ್ರೀತಿಯನ್ನು ಭೂಮಿಕಾ ನಿರಾಕರಿಸಿದ್ದಕ್ಕೆ ಬೇಸರ ಪಟ್ಟಿದ್ದು ನಿಜವೇ. ಆದರೆ, ಒಂದಲ್ಲಾ ಒಂದು ದಿನ ಭೂಮಿ ತನ್ನನ್ನು ಸೇರುವುದು ಖಂಡಿತಾ ಎಂಬ ನಂಬಿಕೆ ಗೌತಮ್‌ಗೆ. ಇನ್ನು ಪ್ರೀತಿಯ ಮಡದಿಯನ್ನು ನೋಡಿದ ಮೇಲೆ ಡುಮ್ಮ ಸರ್‌ಗೆ ಮಗನ ನೋಡುವ ಹಂಬಲ ಜಾಸ್ತಿಯಾಗಿದೆ. ಇದಕ್ಕಾಗಿ ಸ್ನೇಹಿತ ಆನಂದ್ ಜೊತೆ ಸೇರಿ ಅರ್ಧರಾತ್ರಿ ಭೂಮಿ ಮನೆ ಹತ್ತಿರ ಬರುತ್ತಾರೆ. ಮಗ ಬೆಡ್‌ಶೀಟ್‌ನಲ್ಲಿ ಮುಸುಕು ಹೊದ್ದು ಮಲಗಿರುತ್ತಾನೆ. ಹೀಗಾಗಿ ಕಿಟಕಿಯಲ್ಲಿ ಕೋಲು ತೂರಿಸಿ ಬೆಡ್‌ಶೀಟ್ ಎಳೆಯುವ ಪ್ರಯತ್ನ ಸಾಗಿದೆ. ಈ ಕಳ್ಳಬೆಕ್ಕುಗಳು ಯಾರ ಕೈಗೆ ಸಿಕ್ಕಿಬೀಳುತ್ತಾರೆ. ತನ್ನ ಪುಟ್ಟ ಸ್ನೇಹಿತನೇ ತನ್ನ ಮಗ ಎಂದು ಗೌತಮ್‌ಗೆ ಗೊತ್ತಾಗುತ್ತಾ?.. ಈ ಕುತೂಹಲ ವೀಕ್ಷಕರಲ್ಲಿದೆ.

Sulekha