ದಸರಾ ಆನೆಗಳನ್ನ ತಬ್ಬಿಕೊಂಡು ರೀಲ್ಸ್‌ ಮಾಡಿದ ಯುವತಿ! – ರಾತ್ರೋರಾತ್ರಿ ಪರ್ಮಿಷನ್‌ ಕೊಟ್ಟಿದ್ಯಾರು?

ದಸರಾ ಆನೆಗಳನ್ನ ತಬ್ಬಿಕೊಂಡು ರೀಲ್ಸ್‌ ಮಾಡಿದ ಯುವತಿ! – ರಾತ್ರೋರಾತ್ರಿ ಪರ್ಮಿಷನ್‌ ಕೊಟ್ಟಿದ್ಯಾರು?

ಮೈಸೂರು ದಸರಾ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ಮೈದಾನದಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಗಜಪಡೆಗಳು ಕೂಡ ತಾಲೀಮು ನಡೆಸುತ್ತಿದ್ದು, ದಸರಾ ಆನೆಗಳನ್ನ ನೋಡಲು ಜನ ಮುಗಿಬೀಳುತ್ತಿದ್ದಾರೆ. ಆದ್ರೀಗ ಯುವತಿಯೊಬ್ಬಳು ರಾತ್ರೋರಾತ್ರಿ ಅರಮನೆ ಆವರಣಕ್ಕೆ ಬಂದು ದಸರಾ ಆನೆಗಳನ್ನು ತಬ್ಬಿಕೊಂಡು ರೀಲ್ಸ್ ಮಾಡಿದ್ದು, ವಿವಾದಕ್ಕೆ ಗುರಿಯಾಗಿದೆ.

ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ವಿರೋಧಿಸಿದ ಅರ್ಜಿ ಸುಪ್ರೀಂನಲ್ಲೂ ವಜಾ – ಪ್ರತಾಪ್ ಸಿಎಂ & ಟೀಂಗೆ ಹಿನ್ನಡೆ

ಮೈಸೂರು ದಸರಾ ಆನೆಗಳನ್ನ ನೋಡಲು ಸಾವಿರಾರು ಮಂದಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಗಜಪಡೆಗಳನ್ನ ದೂರದಿಂದಲೇ ನೋಡಿ ಖುಷಿಪಡುತ್ತಿದ್ದಾರೆ. ಆದ್ರೀಗ ಯುವತಿಯೋರ್ವಳು ದಸರಾ ಆನೆಗಳನ್ನು ತಬ್ಬಿಕೊಂಡು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ರಾತ್ರೋರಾತ್ರಿ ಯಾರು ಇಲ್ಲದ ವೇಳೆ ಕರಿಕಲ್ಲುತೊಟ್ಟಿ ಮೂಲಕ ಅರಮನೆ ಆವರಣಕ್ಕೆ ಎರಡು ಕಾರುಗಳಲ್ಲಿ ಪ್ರವೇಶ ಪಡೆದಿರುವ ಯುವತಿ ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ಹೋಗಿ ಫೋಟೊಶೂಟ್ ಮಾಡಿಸಿದ್ದಾಳೆ. ಮೊಬೈಲ್‌ನ ಫ್ಲ್ಯಾಶ್‌ ಲೈಟ್ ಬಳಸಿಕೊಂಡು ರೀಲ್ಸ್ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಇದೀಗ ಆ ಯುವತಿಗೆ ಸಂಕಷ್ಟ ಶುರುವಾಗಿದೆ.

ಅರಮನೆ ನಿಯಮಗಳ ಪ್ರಕಾರ, ಆನೆಗಳು ವಾಸ್ತವ್ಯ ಹೂಡಿರುವ ಸ್ಥಳಕ್ಕೆ ರಾತ್ರಿ ವೇಳೆ ಯಾರು ಹೋಗುವಂತಿಲ್ಲ. ಫ್ಲ್ಯಾಶ್‌ ಲೈಟ್‌ಗಳನ್ನ ಬಳಸಿ ಫೋಟೊಶೂಟ್‌ ಮಾಡುವಂತಿಲ್ಲ. ಸದ್ಯ ಈ ವಿಡಿಯೋ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಆ ಯುವತಿ ಯಾರು? ರೀಲ್ಸ್‌ ಮಾಡುವಾಗ ಆನೆಗಳ ಜೊತೆ ಯಾರು ಇರಲಿಲ್ವಾ ಅನ್ನುವ ಪ್ರಶ್ನೆ ಕೂಡ ಎದುರಾಗಿದೆ. ಈ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ.

Shwetha M