ಪ್ರತಾಪ್ ಸಿಎಂ & ಟೀಂಗೆ ಹಿನ್ನಡೆ – ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ವಿರೋಧಿಸಿದ ಅರ್ಜಿ ಸುಪ್ರೀಂನಲ್ಲೂ ವಜಾ

ಪ್ರತಾಪ್ ಸಿಎಂ & ಟೀಂಗೆ ಹಿನ್ನಡೆ – ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ವಿರೋಧಿಸಿದ ಅರ್ಜಿ ಸುಪ್ರೀಂನಲ್ಲೂ ವಜಾ

ಬಾನು ಮುಷ್ತಾಕ್‌ಗೆ ದಸರಾ ಉದ್ಘಾಟನೆ ಮಾಡೋಕೆ ಸುಪ್ರೀಂನಲ್ಲೂ ಅವಕಾಶ ಸಿಕ್ಕಿದೆ.  ನಾಡಹಬ್ಬ ಮೈಸೂರು ದಸರಾ  ಅನ್ನು ಉದ್ಘಾಟಿಸಲು ಲೇಖಕಿ, ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್  ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿತ್ತು. ಇದ್ದನ್ನ ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ  ವಜಾ ಆಗಿದೆ.   ಮೈಸೂರು ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಕೆಲ ಬಿಜೆಪಿ ನಾಯಕರು ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಹೈಕೋರ್ಟ್​ಗೆ ಅರ್ಜಿ ಹಾಕಿದ್ದರು. ಹೈಕೋರ್ಟ್​ ಈ ಅರ್ಜಿ ವಜಾ ಮಾಡಿತ್ತು, ನಂತರ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದು, ಇಂದು ನಡೆದ ವಿಚಾರಣೆಯಲ್ಲಿ ಅರ್ಜಿ ವಜಾಗೊಳಿಸಲಾಗಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಸಂಕ್ಷಿಪ್ತ ವಿಚಾರಣೆಯ ನಂತರ ಈ ತೀರ್ಪು ನೀಡಿದೆ. ಹೀಗಾಗಿ ಸೆಪ್ಟೆಂಬರ್ 22ರಂದು ಬಾನು ಮುಷ್ತಾಕ್ ಅವರಿಂದ ಉದ್ಘಾಟನೆ ನಡೆಯುವುದು ಪಕ್ಕಾ ಆಗಿದೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಟ್ರೈಲರ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್!‌ – ಸಿನಿಮಾ ಪ್ರೀ ರಿಲೀಸ್ ಯಾವಾಗ?

ಅರ್ಜಿದಾರರ ಪರ ಹಿರಿಯ ವಕೀಲ ಪಿ.ಬಿ. ಸುರೇಶ್ ಅವರು, ಹಿಂದೂಯೇತರ ವ್ಯಕ್ತಿಗೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಅವಕಾಶ ನೀಡುವುದು ಧಾರ್ಮಿಕ ಆಚರಣೆಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. ಇದು ಸಂಪೂರ್ಣವಾಗಿ ರಾಜಕೀಯ. ಧಾರ್ಮಿಕ ಚಟುವಟಿಕೆಗಾಗಿ ಅವರನ್ನು ದೇವಸ್ಥಾನಕ್ಕೆ ಕರೆತರಲು ಯಾವುದೇ ಕಾರಣವಿಲ್ಲ ಎಂದು ಅವರು ಹೇಳಿದರು. ಆಹ್ವಾನಿತರು ಹಿಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಆಕ್ಷೇಪಿಸಿದರು. ಆದರೆ ನ್ಯಾಯಮೂರ್ತಿ ನಾಥ್ ಅವರು  ಅರ್ಜಿ ವಜಾಗೊಳಿಸಲಾಗಿದೆ  ಎಂದು ಘೋಷಿಸಿದರು.  ಅನ್‌ ಧರ್ಮದ ವ್ಯಕ್ತಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡುವುದರಿಂದ ಅರ್ಜಿದಾರರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನಮಗೆ ಮನವರಿಕೆಯಾಗಿಲ್ಲʼ ಎಂದು ಪೀಠ ತಿಳಿಸಿತು. ದನ್ನು ಇಂದು ವಿಚಾರಣೆಗೆ ತಂದಿದ್ದರು. ಸಂಕ್ಷಿಪ್ತ ವಾದಗಳ ನಂತರ ಅರ್ಜಿಯನ್ನು ವಜಾ ಮಾಡಲಾಯಿತು.

ಸೆಪ್ಟೆಂಬರ್ 15ರಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭೂ ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ಪೀಠವು ಮೂರು ಅರ್ಜಿಗಳನ್ನು ವಜಾ ಮಾಡಿತ್ತು. ಹೈಕೋರ್ಟ್ ತೀರ್ಪಿನಲ್ಲಿ, “ಒಂದು ನಿರ್ದಿಷ್ಟ ಧರ್ಮ ಅಥವಾ ನಂಬಿಕೆಯವರು ಇತರ ಧರ್ಮದ ಹಬ್ಬಗಳಲ್ಲಿ ಭಾಗವಹಿಸುವುದರಿಂದ ಸಂವಿಧಾನದಡಿ ಲಭ್ಯವಿರುವ ಹಕ್ಕುಗಳು ಉಲ್ಲಂಘನೆಯಾಗುವುದಿಲ್ಲ” ಎಂದು ಹೇಳಿತ್ತು. ಆಹ್ವಾನವು ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ತರುವುದಿಲ್ಲ. ಯಾವುದೇ ಧಾರ್ಮಿಕ ಪಂಗಡದ ಹಕ್ಕುಗಳು ಮೊಟಕುಗೊಳ್ಳುವುದಿಲ್ಲ ಎಂದು ಹೈಕೋರ್ಟ್ ದೃಢಪಡಿಸಿತ್ತು. ಬಾನು ಮುಷ್ತಾಕ್ ಅವರ ಆಹ್ವಾನ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುವುದಿಲ್ಲ. ಅವರು ನಿಪುಣ ಲೇಖಕಿ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಎಂದು ಪೀಠ ಶ್ಲಾಘಿಸಿತು. ಅರ್ಜಿದಾರರು, ಪವಿತ್ರ ದೀಪ ಬೆಳಗಿಸುವುದು, ದೇವರಿಗೆ ಹಣ್ಣು-ಹೂವು ಅರ್ಪಿಸುವುದು, ವೈದಿಕ ಮಂತ್ರಗಳು ಸೇರಿದಂತೆ ಹಿಂದೂ ಆಚರಣೆಗಳನ್ನು ಹಿಂದೂಗಳೇ ಮಾಡಬೇಕು ಎಂದು ವಾದಿಸಿದ್ದರು.

Kishor KV