ಮದುವೆ ಆದ್ಮೇಲೆ ಹೀಗೆ ಮಾಡ್ತಿದ್ದಾರೆ.. ಸಹೋದರಿ ಮೇಲೆ ಆರೋಪ ಮಾಡಿದ ಬಿಗ್‌ ಬಾಸ್‌ ರಂಜಿತ್!

ಮದುವೆ ಆದ್ಮೇಲೆ ಹೀಗೆ ಮಾಡ್ತಿದ್ದಾರೆ.. ಸಹೋದರಿ ಮೇಲೆ ಆರೋಪ ಮಾಡಿದ ಬಿಗ್‌ ಬಾಸ್‌ ರಂಜಿತ್!

ಬಿಗ್​​ಬಾಸ್​ ಖ್ಯಾತಿಯ ರಂಜಿತ್ ಹಾಗೂ ಅವರ ಸಹೋದರಿ ನಡುವಿನ ಜಗಳ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಒಂದು ಫ್ಲಾಟ್​​ನ ವಿಚಾರಕ್ಕಾಗಿ ಅಕ್ಕ-ತಮ್ಮನ ಮಧ್ಯೆ ಜಗಳ ನಡೆದಿದ್ದು, ಈ ಸಂಬಂಧ ನಗರದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಆಗಿದೆ. ಇದೀಗ ರಂಜಿತ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಲಾವಿದ. ನನಗೆ ಲೋನ್ ಸಿಗಲ್ಲ ಎಂಬ ಕಾರಣಕ್ಕೆ ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದೆ ಎಂದು ರಂಜಿತ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಂಹಳೀಯರ ಮುಂದೆ ಮಂಡಿಯೂರಿದ ಅಫ್ಘಾನಿಸ್ತಾನ – ಸೂಪರ್ 4ಗೆ ಹಂತಕ್ಕೇರಿದ ಶ್ರೀಲಂಕಾ

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ರಂಜಿತ್‌,  ದೂರು ಕೊಟ್ಟಮೇಲೆ ಇದೆಲ್ಲಾ ಆಗಿದ್ದು. ಮದುವೆಯಾಗುವ ಮುಂಚೆ ನನ್ನ ಇಬ್ಬರು ಅಕ್ಕಂದಿರು ನನ್ನ ಜೊತೆಯೇ ನನ್ನ ಮನೆಯಲ್ಲೇ ಇದ್ದರು. ಮೇ 11 ಕ್ಕೆ ನನ್ನ ಮದುವೆ ಆಯ್ತು. ಎಲ್ಲರೂ ನಮ್ಮ ಜೊತೆನೆ ಇದ್ರು. ಮದುವೆಯಾದ ಮೇಲೆ ಈಗ ಆರೋಪ ಮಾಡ್ತಿದ್ದಾರೆ. ಸಿವಿಲ್ ಮ್ಯಾಟರ್ ಆಗಿರುವುದರಿಂದ ಕೋರ್ಟ್ಗೆ ಹೋಗಿ ಅಂತ ಪೊಲೀಸರು ಹೇಳಿ ಕಳುಹಿಸಿದ್ದಾರೆ. ಅದನ್ನ ಬಿಟ್ಮೇಲೂ ಹೋಗಿ ದೂರು ಕೊಟ್ಟಿದ್ದಾರೆ. ಅವರು ಸಿವಿಲ್ ಕೋರ್ಟ್‌ ಗೆ ಹೋಗಬಹುದಿತ್ತಲ್ವಾ? ನನ್ನ ಮನೆಗೆ ಏಕೆ ಬಂದು, ನನ್ನ ಹೆಂಡತಿ ಮೇಲೆ ಕೈ ಮಾಡಿದ್ರು ಎಂದು ರಂಜಿತ್ ಪ್ರಶ್ನಿಸಿದ್ದಾರೆ.

2017 ರಲ್ಲಿ ನಾನು ಮನೆ ತೆಗೆದುಕೊಳ್ಳುವಾಗ, ನಾನು ಕಲಾವಿದ ನನಗೆ ಲೋನ್ ಸಿಗಲ್ಲ ಎಂಬ ಕಾರಣಕ್ಕೆ ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದೆ. ನನ್ನ ತಾಯಿಯೂ ಸುಮಾರು ಬಾರಿ ನನ್ನ ಹೆಸರಿಗೆ ಗಿಫ್ಟ್ ಡೀಡ್ ಮಾಡಿಕೊಡುವಂತೆ ಹೇಳಿದ್ರು. ಮದುವೆಯಾಗಲಿ ಮಾಡಿಕೊಡ್ತೀನಿ ಎನ್ನುತ್ತಿದ್ದರು. ಆದ್ರೆ ಈಗ ನನ್ನ ತಾಯಿ ಇಲ್ಲ ಎಂದು ತಿಳಿಸಿದರು.

ಅಕ್ಕನ ಪತಿ ಅರ್ಮಿಯಲ್ಲಿದ್ರು. ಅಪಾರ್ಟ್ಮೆಂಟ್ 2017-18 ರಲ್ಲಿ ರಂಜಿತ್ ಕುಮಾರ್ ಅಂತಾ ಇದೆ. ನನ್ನ ಹೆಸರು ಯಾಕೆ ಹಾಕ್ತಾರೆ? ರಿಜಿಸ್ಟರ್ ಮಾತ್ರ ಅಕ್ಕನ ಹೆಸರಲ್ಲಿದೆ. ಏಕೆಂದರೆ, ನಾನು ಬೆಂಗಳೂರಿನಲ್ಲಿ ಇರ್ತಿರಲಿಲ್ಲ. 2017-18 ರಲ್ಲಿ ಮುಂಬೈನಲ್ಲಿರುತ್ತಿದ್ದೆ. ನಾನು ಕಲಾವಿದ ಆಗಿದ್ದರಿಂದ ಲೋನ್ ಆಗ್ತಿರಲಿಲ್ಲ. ಅದಕ್ಕೆ ಅಕ್ಕನ ಹೆಸರಲ್ಲಿ ಮಾಡಿದ್ದೆ. ಅಮೌಂಟ್ ಟ್ರಾನ್ಸ್ಫರ್ ಮಾಡಿರೋದು ದಾಖಲೆ ಇದೆ. ಈ ಸಂಬಂಧ ವಕೀಲರ ಮೂಲಕ ಉತ್ತರ ಕಳುಹಿಸಿದ್ದೆ. ಇದಾದ ಬಳಿ ಇದನ್ನೆಲ್ಲಾ ಮಾಡ್ತಿರೋದು ಎಂದು ಆರೋಪಿಸಿದರು.

ವೀಡಿಯೋ ವೈರಲ್ ಆದ ಬಗ್ಗೆ ಮಾತನಾಡಿ, ನಮ್ಮ ತಂದೆ ನಮ್ಮ ಜೊತೆ ಇದ್ದಿದ್ದು. ತಂದೆ ನಮ್ಮ ಅಕ್ಕಂದಿರಿಗೆ ಸಪೋರ್ಟ್. ನಮ್ಮ ತಂದೆ ಒಳಗೆ ಬಂದ್ರು, ಮಾತುಕತೆ ಆಗುತ್ತೆ. ಇದಾದ ಮೇಲೆ ಇವಳಿಗೆ ಹೊಡೆದಿರೋದು ಎಂದು ಸ್ಪಷ್ಟಪಡಿಸಿದರು. ಪತ್ನಿ ಮೇಲೆ ಹಲ್ಲೆ ಕುರಿತು ಆರೋಪ ಮಾಡಿದ ರಂಜಿತ್, ಮೆಡಿಕಲ್ ಮಾಡಿಸಿದ್ದೀವಿ. ದೂರು ಕೊಡೋದು ಲೇಟ್ ಆಗಿತ್ತು. ಅವರ ಮೇಲೆ ಎನ್‌ಸಿಆರ್ ಆಗಿದೆ. ತಂದೆ, ಅಕ್ಕಂದಿರು, ಭಾವನ ಮೇಲೆ ಎನ್‌ಸಿಆರ್ ಆಗಿದೆ ಎಂದರು.

Shwetha M