ಬಲಿಷ್ಠ ಭಾರತ.. ಬಲವಿಲ್ಲದ ಪಾಕ್ – ಸೂಪರ್ 4ನಲ್ಲೂ ಇಂಡಿಯಾ ವಿನ್
ಬ್ಯಾಟಿಂಗ್, ಬೌಲಿಂಗ್ ಶಕ್ತಿ & ದೌರ್ಬಲ್ಯ

ಟೀಂ ಇಂಡಿಯಾ ಫ್ಯಾನ್ಗೆ ನೆಕ್ಸ್ಟ್ ಸಂಡೇ ಸೂಪರ್ ಸಂಡೇ ಆಗೋದ್ರಲ್ಲಿ ಡೌಟೇ ಇಲ್ಲ. ಕಳೆದ ಭಾನುವಾರ ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಮ್ಯಾಚ್ ಸಖತ್ ಥ್ರಿಲ್ಲಿಂಗ್ ಆಗಿತ್ತು. ಭಾರತ ಗೆದ್ದು ಹ್ಯಾಂಡ್ಶೇಕ್ ಕೊಡದೇ ಇದ್ದದ್ದು ಪಾಕಿಗಳ ಕಣ್ಣು ಕೆಂಪಾಗಿಸಿತ್ತು. ಇದೀಗ ಮತ್ತೊಮ್ಮೆ ಅಂತದ್ದೇ ಸಿಚುಯೇಷನ್ ಕ್ರಿಯೇಟ್ ಆಗಲಿದೆ. ಸೆಪ್ಟೆಂಬರ್ 21ರಂದು ಅಂದ್ರೆ ಮುಂದಿನ ಭಾನುವಾರ ಸೂಪರ್ 4 ಹಂತದ ಪಂದ್ಯಕ್ಕಾಗಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಆಲ್ರೆಡಿ 2 ಮ್ಯಾಚ್ ಗೆದ್ದು ಕಾನ್ಫಿಡೆಂಟಾಗಿರೋ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಇಲ್ಲೂ ಡಾಮಿನೇಟ್ ಮಾಡೋಕೆ ಕಾಯ್ತಿದೆ. ಇತ್ತ ಭಾರತದೆದುರು ಸೋತು, ಕೈಕುಲುಕದ ಅವಮಾನಕ್ಕೊಳಗಾಗಿರೋ ಪಾಕಿಸ್ತಾನ ರಿವೇಂಜ್ ತಗೊಳ್ಳೋಕೆ ನೋಡ್ತಿದೆ. ಆದ್ರೆ ಬಲಿಷ್ಠ ಭಾರತವನ್ನ ಸೋಲಿಸೋದು ಪಾಕ್ಗೆ ಅಷ್ಟು ಸುಲಭ ಇಲ್ಲ. ಜಗತ್ತಿನ ಯಾವುದೇ ಟೀಂ ಆದ್ರೂ ಬಗ್ಗು ಬಡಿಯೋ ಕೆಪಾಸಿಟಿ ಇರುವಂಥ ಭಾರತ ಟಿ-20ಐ ತಂಡ ಟಾಪ್ ಟು ಬಾಟಮ್ ಸೂಪರ್ ಸ್ಟ್ರಾಂಗ್ ಆಗಿದೆ.
ಇದನ್ನೂ ಓದಿ : T-20I ಬೆಸ್ಟ್ ಬೌಲರ್ ಗೆ ಬೆಂಚ್ – ಅರ್ಷದೀಪ್ ಸಿಂಗ್ ಸೈಡ್ ಲೈನ್ ಏಕೆ?
ಸೂಪರ್ ಸ್ಟ್ರಾಂಗ್ ಭಾರತ!
- ಐಸಿಸಿ ಟಿ-20 ವಿಶ್ವಕಪ್ ಹಾಲಿ ಚಾಂಪಿಯನ್ಸ್, ನಂ.1 ಟಿ20ಐ ಟೀಂ
- ಟಿ-20ಐನಲ್ಲಿ ಬ್ಯಾಟಿಂಗ್, ಬೌಲಿಂಗ್ & ಆಲ್ ರೌಂಡರ್ ನಂ.1
- ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ ಸಾಧನೆ
- ಟಿ20ಐನಲ್ಲಿ ನಾಯಕನಾಗಿ 82.6% ಗೆಲುವು ಸಾಧಿಸಿರುವ ಸೂರ್ಯ
- ಟಾಪ್ ಅರ್ಡರ್ ಬ್ಯಾಟಿಂಗ್ ಬಲ, ಡೆತ್ ಓವರ್ ಬೌಲಿಂಗ್ ಸ್ಟ್ರೆಂಥ್
- ಕಳೆದ 15 ತಿಂಗಳುಗಳಿಂದ ಟಿ-20ಐ ಸರಣಿಯನ್ನೇ ಸೋಲದ ಭಾರತ
- ಟಿ-20 ವಿಶ್ವಕಪ್ ಬಳಿಕ 22 ಟಿ20 ಪಂದ್ಯ, 18 ಗೆಲುವು, 3 ಸೋಲು
- ಕಳೆದ 15 ತಿಂಗಳಲ್ಲಿ ಸಂಜು, ಅಭಿಷೇಕ್ ಮತ್ತು ತಿಲಕ್ 6 ಟಿ20ಐ ಶತಕ
- ಜಸ್ಪ್ರೀತ್ ಬುಮ್ರಾನಂತರ ವರ್ಲ್ಡ್ ಕ್ಲಾಸ್ ಬೌಲರ್ ಭಾರತಕ್ಕೆ ಬ್ರಹ್ಮಾಸ್ತ್ರ
- ಏಷ್ಯಾಕಪ್ 8 ಸಲ ಚಾಂಪಿಯನ್, ಟ್ರೋಫಿ ಗೆಲುವಿನ ಫೇಟರೆಟ್ ಟೀಂ
ಹೀಗೆ ಟಿ20ಐ ಫಾರ್ಮೆಟ್ನಲ್ಲಿ ಕಂಪ್ಲಿಟ್ ಡಾಮಿನೇಟ್ ಮಾಡ್ತಿರೋ ಭಾರತ ಜಸ್ಟ್ ಪಾಕಿಸ್ತಾನ ಅಷ್ಟೇ ಅಲ್ಲ. ಏಷ್ಯಾಕಪ್ನಲ್ಲಿರೋ ತಂಡಗಳಲ್ಲೇ ದಿ ಬೆಸ್ಟ್ ಟೀಂ. ಸೋ ಈ ಸಲನೂ ಭಾರತವೇ ಚಾಂಪಿಯನ್ ಆಗುತ್ತೆ ಅನ್ನೋದು 99 ಪರ್ಸೆಂಟ್ ವಿಶ್ಲೇಷಕರ ಅಭಿಪ್ರಾಯ. ಹೀಗಾಗಿ ಮುಂದಿನ ಭಾನುವಾರದ ಸೂಪರ್ 4 ಹಂತದ ಪಂದ್ಯದಲ್ಲೂ ಪಾಕಿಸ್ತಾನವನ್ನ ಮಣ್ಣು ಮುಕ್ಕಿಸೋಕೆ ರೆಡಿಯಾಗಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ವೀಸ್ನೆಸ್ ಅಂತಾ ಏನೂ ಕಾಣದೇ ಇದ್ರೂ ಗೆದ್ದೇ ಗೆಲ್ತೀವಿ ಅನ್ನೋ ಓವರ್ ಕಾನ್ಫಿಡೆನ್ಸ್ ಇರಬಾರದು ಅಷ್ಟೇ. ಇದನ್ನ ಬಿಟ್ರೆ ಮಿಕ್ಕಿದ್ದೆಲ್ಲಾ ಓಕೆ. ಬಟ್ ಪಾಕಿಸ್ತಾನದ ಸಿಚುಯೇಷನ್ ಕಂಪ್ಲೀಟ್ ಉಲ್ಟಾ. ಅಲ್ಲಿ ಪಾಸಿಟಿವ್ ಗಿಂತ ನೆಗೆಟಿವಿಟಿನೇ ಜಾಸ್ತಿ ಇದೆ. ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂತಾರಲ್ಲ ಹಾಗೇ ಮೈದಾನದಲ್ಲಿ ಆಡೋದಕ್ಕಿಂತ ಬಿಟ್ಟಿ ಬಿಲ್ಡಪ್ ಕೊಟ್ಟು ಕೊಟ್ಟು ಮೂರ್ ಕಾಸಿಗೂ ಬೆಲೆ ಇಲ್ದಂಗೆ ಮಾಡಿಕೊಳ್ತಿದ್ದಾರೆ. ಇದೀಗ ಭಾನುವಾರ ಭಾರತವನ್ನೇ ಸೋಲಿಸೇ ತೀರುತ್ತೇವೆ ಅಂತಾ ಚಾಲೆಂಜ್ ಹಾಕಿರೋ ಪಾಕ್ ಟೀಮ್ನಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.
ಪಾಕಿಸ್ತಾನ ಟೀಂ ಠುಸ್ ಪಟಾಕಿ!
- ಪಾಕಿಸ್ತಾನದ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಹಳ್ಳ
- ಪಾಕ್ ಓಪನರ್ ಸೈಮ್ ಅಯೂಬ್ ಕಳೆದ 3 ಪಂದ್ಯಗಳಲ್ಲಿ ಡಕ್
- ಬುಮ್ರಾ ಬೌಲಿಂಗ್ ನಲ್ಲಿ 6 ಬಾಲ್ ಗೆ 6 ಸಿಕ್ಸ್ ತನ್ವೀರ್ ಚಾಲೆಂಜ್
- ಸಾಹಿಬ್‌ಜಾದಾ ಫರ್ಹಾನ್ & ಸೈಮ್ ವೇಗದ ಬೌಲಿಂಗ್ ದೌರ್ಬಲ್ಯ
- ಮಿಡಲ್ ಓವರ್ ನಲ್ಲಿ ಸ್ಪಿನ್ನರ್ ಗಳ ಮುಂದೆ ಬ್ಯಾಟರ್ಸ್ ಒದ್ದಾಟ
- ಶಾಹೀನ್, ಹ್ಯಾರಿಸ್ ರೌಫ್ ಮತ್ತು ಫಹೀಮ್ ಅಶ್ರಫ್ ರನ್ಸ್ ದುಬಾರಿ
- ಏಷ್ಯಾಕಪ್ ನಲ್ಲಿ ಪಾಕ್ ತಂಡದ ಕ್ಯಾಪ್ಟನ್ ಗೆ ಅನುಭವದ ಕೊರತೆ
- ಸಲ್ಮಾನ್ ಅಲಿ ಅಘಾ 28 ಪಂದ್ಯ, 512 ರನ್, 111ರ ಸ್ಟ್ರೈಕ್ ರೇಟ್
- ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ತಂಡದಲ್ಲಿಲ್ಲ
- ಐಸಿಸಿ ವಿಶ್ವಕಪ್ ಬಳಿಕ 27 ಟಿ-20ಐ ಪಂದ್ಯ, 13ರಲ್ಲಿ ಗೆಲುವು, 14 ಸೋಲು
ಹೀಗೆ ಹೇಳ್ತಾ ಹೋದ್ರೆ ಪಾಕಿಸ್ತಾನದ ವೀಕ್ನೆಸ್ ಸಿಗ್ತಾನೇ ಹೋಗುತ್ತೆ. ಅಲ್ಲಿ ಪಾಸಿಟಿವಿಟಿ ಹುಡ್ಕೋದು ಸ್ವಲ್ಪ ಕಷ್ಟ. ಅಲ್ದೇ ಅವ್ರು ಕೊಡೋ ಸ್ಟೇಟ್ಮೆಂಟ್ಗಳಿಗೂ ಮೈದಾನದಲ್ಲಿ ನೀಡೋ ಪರ್ಫಾಮೆನ್ಸ್ಗೂ ಅಜಗಜಾಂತರ ವ್ಯತ್ಯಾಸ ಇರುತ್ತೆ. ಹೆಂಗೆ ಅಂದ್ರೆ 10 ರೂಪಾಯಿ ಕಾಸು ತಗೊಂಡು 100 ರೂಪಾಯಿ ಡ್ರಾಮಾ ಮಾಡ್ತಾರೆ ಅಂತಾ ಟೀಸ್ ಮಾಡ್ತಾರಲ್ಲ ಹಂಗೆ. ಸದ್ಯ ಯುಎಇ ಟೀಂ ವಿರುದ್ಧ ಗೆದ್ದು ಸೂಪರ್ 4ಗೆ ಕಾಲಿಟ್ಮೇಲೆ ಆಟಗಾರರಿಗೆ ಓವರ್ ಕಾನ್ಫಿಡೆನ್ಸ್ ಬಂದಂಗೆ ಕಾಣ್ತಿದೆ. ಸೋ ನಾಯಕ ಸಲ್ಮಾನ್ ಅಲಿ ಅಘಾ ನಾವು ಭಾರತವನ್ನ ಸೋಲಿಸ್ತೇವೆ. ಬ್ಯಾಟಿಂಗ್ ಶಕ್ತಿ ಸಖತ್ತಾಗಿದೆ ಅಂತಾ ಹೇಳಿಕೆ ಕೊಟ್ಟಿದ್ದಾರೆ. ಌಕ್ಚುಲಿ ಲೀಗ್ ಪಂದ್ಯಕ್ಕೂ ಮುನ್ನ ಇದ್ನೇ ಹೇಳಿದ್ರು. ಆದ್ರೆ ಅದು ನಡೀಲಿಲ್ಲ. ಸೋ ಈ ಸಲನೂ ಅದನ್ನೇ ಹೇಳಿದ್ದಾರೆ. ಅದೂ ಕೂಡ ನಡೆಯಲ್ಲ ಬಿಡಿ. ಯಾಕಂದ್ರೆ ಅವ್ರು ಸೋಲಿಸಬೇಕಿರೋದು ಕ್ರಿಕೆಟ್ ಶಿಶುಗಳನ್ನಲ್ಲ ಬದಲಿಗೆ ಬಲಿಷ್ಠ ಭಾರತವನ್ನ. ಹೀಗಾಗಿ ನೆಕ್ಸ್ಟ್ ಸಂಡೇನೂ ನಾವೇ ಗೆಲ್ಲೋದು.

ನೋಡಿರಿ

