ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆ ಫೋಟೋ ಲೀಕ್‌! – ದೊಡ್ಮನೆ ಹೇಗಿದೆ ಗೊತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆ ಫೋಟೋ ಲೀಕ್‌! – ದೊಡ್ಮನೆ ಹೇಗಿದೆ ಗೊತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಇದೇ ಸೆಪ್ಟೆಂಬರ್‌ 28 ರಿಂದ ಆರಂಭವಾಗಲಿದೆ. ಈಗಾಗಲೇ ಹೊಸ ಸೀಸನ್‌ ನ ಪ್ರೋಮೋ ಬಿಡುಗಡೆ ಮಾಡಲಾಗಿತ್ತು. ಕಿಚ್ಚ ಸುದೀಪ್‌ ಕಾಗೆ ನರಿ ಕತೆ ಹೇಳಿದ್ದು, ಈ ಸೀಸನ್‌ ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರನ್ನ ಕಾಡ್ತಿದೆ. ಇದ್ರ ಮಧ್ಯೆ ಬಿಗ್‌ ಬಾಸ್‌ ಮನೆ ಹೇಗಿರಲಿದೆ ಅನ್ನೋ ಕುತೂಹಲ ಪ್ರೇಕ್ಷಕರನ್ನ ಕಾಡ್ತಿದೆ. ಇದೀಗ ಬಿಗ್‌ ಬಾಸ್‌ ಮನೆಯ ಫೋಟೋ ಲೀಕ್‌ ಆಗಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಮಲಗಿದ ಭೂಪ! – ಅಕ್ಕ ಪಕ್ಕ ವಾಹನ ಓಡಾಡಿದ್ರೂ ಡೋಂಟ್‌ ಕೇರ್!‌

ಕಳೆದ ಸೀಸನ್‌ ನಲ್ಲಿ ಬಿಗ್‌ ಬಾಸ್‌ ಮನೆ ಭಾರಿ ವಿವಾದ ಹುಟ್ಟುಹಾಕಿತ್ತು. ನೋಟಿಸ್‌ ಕೂಡ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಮನೆ ಕಟ್ಟಲಾಗಿದೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಈ ಬಾರಿಯ ಮನೆ ಹೇಗಿರಲಿದೆ ಎಂಬ  ಕ್ಯೂರಿಯಾಸಿಟಿ ಪ್ರೇಕ್ಷಕರಲ್ಲಿದೆ. ಇದೀಗ ದೊಡ್ಮನೆಯ ಫೋಟೋ ಲೀಕ್ ಆಗಿದೆ.

ಬೆಂಗಳೂರಿನ ಹೊರ ವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಒಂದರಿಂದ ಒಂಬತ್ತನೇ ಸೀಸನ್‌ವರೆಗೆ ಬಿಗ್ ಬಾಸ್ ಮನೆಯನ್ನ ಕಟ್ಟಲಾಗಿತ್ತು. ಆ ನಂತರ ಬಿಗ್ ಬಾಸ್‌ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ನಂತರ ಲೊಕೇಶನ್ ಶಿಫ್ಟ್ ಮಾಡಲಾಗಿತ್ತು. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು. ಮನೆಯ ಇಂಟೀರಿಯರ್ಸ್ ಹಾಗೂ ಡೆಕೋರೇಷನ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಅಲ್ಲಿಯೂ ಒಂದಷ್ಟು ಸೀಸನ್‌ಗಳನ್ನು ನಡೆಸಲಾಗಿದೆ. ಇದೀಗ ಈ ಬಾರಿ ಮತ್ತೊಮ್ಮೆ ಮನೆ ಬದಲಾವಣೆ ಮಾಡಲಾಗಿದ್ದು ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಮರಳಿದೆ.

ಸದ್ಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ದೊಡ್ಮನೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಹಿಂದೆಂದಿಗಿಂತಲೂ ಈ ಬಾರಿ ಬಿಗ್ ಬಾಸ್ ಮನೆ ಹೆಚ್ಚು ಕಲರ್‌ ಫುಲ್ ಆಗಿ, ಹೆಚ್ಚು ರಿಚ್‌ ಆಗಿ ಇರಲಿದ್ಯಂತೆ. ಈ ನಿಟ್ಟಿನಲ್ಲಿ ವಿಭಿನ್ನವಾಗಿ, ವಿಶೇಷವಾಗಿ ಇಂಟೀರಿಯರ್‌ ಡಿಸೈನ್‌ ಮಾಡಲಾಗುತ್ತಿದೆ. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ತಲೆಯೆತ್ತುತ್ತಿರುವ ಬಿಗ್ ಬಾಸ್ ಮನೆಯ ಫೋಟೋವೊಂದು ಲೀಕ್ ಆಗಿದೆ. ಇದನ್ನ ಕಂಡು ಅಭಿಮಾನಿಗಳಿಗೆ ಬಿಬಿಕೆ 12 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

Shwetha M