ನಡು ರಸ್ತೆಯಲ್ಲೇ ಮಲಗಿದ ಭೂಪ! – ಅಕ್ಕ ಪಕ್ಕ ವಾಹನ ಓಡಾಡಿದ್ರೂ ಡೋಂಟ್‌ ಕೇರ್!‌

ನಡು ರಸ್ತೆಯಲ್ಲೇ ಮಲಗಿದ ಭೂಪ! – ಅಕ್ಕ ಪಕ್ಕ ವಾಹನ ಓಡಾಡಿದ್ರೂ ಡೋಂಟ್‌ ಕೇರ್!‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಟ್ರಾಫಿಕ್‌ ಜಾಮ್..‌ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಂದ್ರೂ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲೇ ಸಿಲುಕಿಕೊಳ್ಳಬೇಕಾಗುತ್ತೆ. ಆದ್ರೆ ಇಲ್ಲೊಬ್ಬ ರಸ್ತೆಯಲ್ಲೇ ಬೆಡ್‌ ಹಾಕಿ ಮಲಗಿದ್ದಾನೆ. ಇದ್ರಿಂದಾಗಿ ಕೆಲ ಸಮಯ ಸಂಚಾರ ದಟ್ಟಣೆ ಉಂಟಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಅಕ್ರಮ ಚುನಾವಣೆ ಮೂಲಕವೇ ಪ್ರಧಾನಿ ಮೋದಿ ಗೆದ್ದಿರೋದು! – ಗಂಭೀರ ಆರೋಪ ಮಾಡಿದ ಸಂತೋಷ್ ಲಾಡ್

ಈ ಘಟನೆ ಬೆಂಗಳೂರಿನ ಬನಶಂಕರಿ ರಸ್ತೆಯಲ್ಲಿ ನಡೆದಿದೆ. ವೈರಲ್‌ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಗೆ ಬೆಡ್‌ ತಂದು ಹಾಕಿಕೊಂಡಿದ್ದಾನೆ. ಬಳಿಕ ಕಾಲಿನ ಮೇಲೆ ಕಾಲು ಹಾಕಿ ಮಲಗಿದ್ದಾನೆ. ಆತನ ಎದುರು ಕಾರು, ಬೈಕ್, ಬಸ್‌ ಇದ್ರೂ ಕೂಡ ಆತ ಏಳುವುದೇ ಇಲ್ಲ. ಇದ್ರಿಂದಾಗಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿದೆ. ಬಳಿಕ ರಸ್ತೆಯ ಇನ್ನೊಂದು ಭಾಗದಲ್ಲಿ ವಾಹನವನ್ನ ಚಲಾಯಿಸಲಾಗಿದೆ. ಸದ್ಯ ಈ ವಿಡಿಯೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ, ಸಂಚಾರಿ ಪೊಲೀಸರಿಗೆ ಟ್ಯಾಗ್‌ ಮಾಡಲಾಗಿದೆ.

ರಸ್ಯೆಯಲ್ಲಿ ಬೆಡ್‌ ಹಾಕಿ ಮಲಗಿದ ಯುವಕನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಇಂತಹ ವರ್ತನೆ ತೋರುವುದು ಸರಿಯಲ್ಲ. ಆ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನೋ ಅಥವಾ ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಂಡಿದ್ದಾನೋ ತಿಳಿದಿಲ್ಲ, ಅದು ಆತನ ಜೀವಕ್ಕೆ ಅಪಾಯವನ್ನುಂಟು ಮಾಡುವುದರ ಜತೆಗೆ ಇತರರಿಗೂ ಹಾನಿ ಮಾಡಬಹುದು. ಹೀಗಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ ಮತ್ತು ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ಭುಗಿಲೆದ್ದಿದೆ. ಈ ಬೆನ್ನಲ್ಲೇ ಆತನ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ವೈರಲ್‌ ಆದ ವಿಡಿಯೋಗೆ ಕಮೆಂಟ್‌ ಹಾಕಿದ್ದಾರೆ.

Shwetha M