ಕಿಚ್ಚ ಸುದೀಪ್ ವಿರುದ್ಧ ಟ್ರೋಲ್ – ಪೊಲೀಸ್ ಆಯುಕ್ತರಿಗೆ ದೂರು

ಇತ್ತೀಚೆಗೆ ಸೆಲೆಬ್ರಿಟಿಗಳನ್ನ ಟಾರ್ಗೆಟ್ ಮಾಡಿ ಟ್ರೋಲ್ ಮಾಡುವ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಟಿ ರಮ್ಯಾ, ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕೆಟ್ಟ ಕಮೆಂಟ್ಸ್, ಅಶ್ಲೀಲ ಮೆಸೆಜ್ ಬಂದಿದ್ದವು. ಇದೀಗ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನ ಟ್ರೋಲ್ ಮಾಡಿದ್ದು, ಇದೀಗ ಅವರ ಅಭಿಮಾನಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಗುರುವಾರದಂದು ಗುರು ರಾಘವೇಂದ್ರರ ಜೊತೆ ಯಾವ ದೇವರನ್ನು ಪೂಜಿಸಬೇಕು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳನ್ನ ಕೆಟ್ಟದಾಗಿ ಬಿಂಬಿಸುವ ಕೆಲಸ ಆಗುತ್ತಿದೆ. ಬಹುತೇಕ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ಸೈಲೆಂಟ್ ಆಗಿರುತ್ತಾರೆ. ಆದರೆ, ಇತ್ತೀಚೆಗೆ ಸೆಲೆಬ್ರಿಟಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಟ್ರೋಲ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಮೊನ್ನೆಯಷ್ಟೇ ಕಿಚ್ಚ ಸುದೀಪ್ ಯಾವ ಕಿತ್ತೋಗಿರೋ ನನ್ನ ಮಕ್ಕಳಿಗೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದು ಫ್ಯಾನ್ಸ್ ಗೆ ಹೇಳಿದ್ರು. ಇದೀಗ ಸುದೀಪ್ ಅಭಿಮಾನಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುದೀಪ್ ಅವರನ್ನು ಟ್ರೋಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ದೂರು ನೀಡಲಾಗಿದೆ. ಟ್ವಿಟ್ಟರ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಅವರಿಗೆ ವಿಕೃತವಾದ, ವೈಯಕ್ತಿಕ ನಿಂದನೆ ಮಾಡುವವರ ವಿರುದ್ಧ ದೂರು ನೀಡಲಾಗಿದೆ. ಸುದೀಪ್ ಅವರ ಫೇಕ್ ಫೊಟೋ ಬಳಕೆ ಮಾಡಿ ಕಮೆಂಟ್ ಮಾಡಲಾಗಿದೆ. ಟ್ವಿಟರ್ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವ ಮೂಲಕ ನಟನ ಘನತೆಗೆ ದಕ್ಕೆ ತಂದಿದ್ದಾರೆ. ಇದರಿಂದ ನೇರವಾಗಿ ಸ್ಟಾರ್ ವಾರ್ಗೆ ಕಾರಣವಾಗ್ತಿದೆ. ಈ ಹಿನ್ನಲೆ ಫೇಕ್ ಅಕೌಂಟ್ ಹೋಲ್ಡರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ನೋಡಿರಿ

