T-20I ಬೆಸ್ಟ್ ಬೌಲರ್ ಗೆ ಬೆಂಚ್ – ಅರ್ಷದೀಪ್ ಸಿಂಗ್ ಸೈಡ್ ಲೈನ್ ಏಕೆ?
ರಾಣಾಗಾಗಿ ಗಂಭೀರ್ ಮೈಂಡ್ ಗೇಮ್?

T-20I ಬೆಸ್ಟ್ ಬೌಲರ್ ಗೆ ಬೆಂಚ್ – ಅರ್ಷದೀಪ್ ಸಿಂಗ್ ಸೈಡ್ ಲೈನ್ ಏಕೆ?ರಾಣಾಗಾಗಿ ಗಂಭೀರ್ ಮೈಂಡ್ ಗೇಮ್?

ಏಷ್ಯಾಕಪ್​ನಲ್ಲಿ ಈಗಾಗ್ಲೇ ಎರಡು ಪಂದ್ಯಗಳನ್ನ ಆಡಿರೋ ಟೀಂ ಇಂಡಿಯಾ ಎರಡರಲ್ಲೂ ಒನ್ ಸೈಡೆಡ್ ಆಗಿಯೇ ಗೆದ್ದಿದೆ. ಸೆಪ್ಟೆಂಬರ್ 19ಕ್ಕೆ ಒಮನ್ ವಿರುದ್ಧ ಲೀಗ್ ಹಂತದ ಮೂರನೇ ಪಂದ್ಯ ಇದೆ. ಇಲ್ಲೂ ಗೆದ್ದೇ ಗೆಲ್ತಾರೆ ಡೌಟೇ ಇಲ್ಲ. ಆದ್ರೆ ಕಳೆದ ಎರಡು ಪಂದ್ಯಗಳ ಪ್ಲೇಯಿಂಗ್ 11 ಬಗ್ಗೆ ಕೆಲ ಮಾಜಿ ಆಟಗಾರರಿಗೆ ಅಸಮಾಧಾನ ಇದೆ. ಇದಕ್ಕೆ ಕಾರಣ ಅರ್ಷದೀಪ್ ಸಿಂಗ್​ಗೆ ಚಾನ್ಸ್ ನೀಡದೇ ಇರೋದು. ಟಿ-20ಐನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿರೋ ಅರ್ಷದೀಪ್​ರನ್ನ ಯಾಕೆ ಸೈಡ್​ಲೈನ್ ಮಾಡ್ತಿದ್ದೀರಿ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ : ಫ್ರೆಂಡ್ ಮೋದಿಗೆ ಟ್ರಂಪ್ ಬರ್ತ್‌ಡೇ ವಿಶ್‌ – ಮುನಿಸು ಮರೆತು ಖುಷಿ ಹಂಚಿಕೊಂಡ ದೋಸ್ತಿಗಳು

ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರೋ ರೇಸ್​ನಲ್ಲಿ ಫೇವರೆಟ್ ಟೀಂ ಅಂದ್ರೆ ಅದು ಭಾರತ. ಆನ್ ಫೀಲ್ಡ್​ನಲ್ಲೂ ಕಂಪ್ಲೀಟ್ ಡಾಮಿನೇಟ್ ಮಾಡ್ಕೊಂಡೇ ಸೂಪರ್ 4ಗೆ ಕಾಲಿಟ್ಟಿದ್ದಾರೆ. ಸದ್ಯ ಐಸಿಸಿ ಟಿ-20ಐ ಹಾಲಿ ಚಾಂಪಿಯನ್ಸ್.. ಜಗತ್ತಿನ ನಂಬರ್ 1 ಟಿ-20ಐ ಟೀಂ, ಬೆಸ್ಟ್ ಬ್ಯಾಟಿಂಗ್ ಌಂಡ್ ಬೌಲಿಂಗ್ ಲೈನಪ್.  ಸೋ ಅಟ್ ಎ ಟೈಂ ನಾಲ್ಕು ಟೀಮ್​ಗಳನ್ನ ಕಣಕ್ಕಿಳಿಸ್ಬೇಕು ಅಂದ್ರೂ ಆನ್​ದಿ ಸ್ಪಾಟ್ ಫೈನಲ್ ಮಾಡುವಷ್ಟು ಆಪ್ಶನ್ಸ್ ಇದೆ. ಯಾಕಂದ್ರೆ ಭಾರತದಲ್ಲಿ ಆ ಮಟ್ಟಿಗಿನ ಕ್ವಾಲಿಟಿ ಪ್ಲೇಯರ್ಸ್ ಇದ್ದಾರೆ. ಆದ್ರೆ ಆಪ್ಶನ್ಸ್ ಜಾಸ್ತಿ ಇರೋದ್ರಿಂದಲೋ ಏನೋ ಕೆಲ ಪ್ರತಿಭಾವಂತ ಆಟಗಾರರು ಕೂಡ ಚಾನ್ಸ್​ ಮಿಸ್ ಮಾಡಿಕೊಳ್ತಿದ್ದಾರೆ. ಇದ್ರಲ್ಲಿ ಅರ್ಷದೀಪ್ ಸಿಂಗ್ ಕೂಡ ಒಬ್ರು.

ಏಷ್ಯಾಕಪ್ ಟೂರ್ನಿಯಲ್ಲಿ ಅರ್ಷದೀಪ್ ಗೆ ಯಾಕಿಲ್ಲ ಚಾನ್ಸ್?

17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿ ಆಡ್ತಿರೋ ಭಾರತ ತಂಡ 15 ಆಟಗಾರರನ್ನ ಟೂರ್ನಿಗೆ ಸೆಲೆಕ್ಟ್ ಮಾಡಿತ್ತು. ಈ ಪೈಕಿ ನಾಲ್ವರಿಗೆ ಬೆಂಚ್ ಕಾಯಿಸಿ ಉಳಿದ 11 ಜನ್ರನ್ನ ಅಖಾಡಕ್ಕಿಳಿಸಿತ್ತು. ಎರಡೂ ಪಂದ್ಯಗಳಿಗೂ ಯಾವುದೇ ಬದಲಾವಣೆ ಆಗಿರಲಿಲ್ಲ. ಆದ್ರೆ ಭಾರತದ ಪರ ಅರ್ಷದೀಪ್ ಸಿಂಗ್​ರನ್ನ ಆಡಿಸಬೇಕಿತ್ತು ಅನ್ನೋದು ಕೆಲವರ ವಾದ. ಯಾಕಂದ್ರೆ ಕಳೆದ ಕೆಲ ವರ್ಷಗಳಿಂದ ಅರ್ಷದೀಪ್ ಸಿಂಗ್ ಭಾರತ ಟಿ-20 ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಹಾಗೇ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದಾರೆ. ಇದುವರೆಗೆ  ಭಾರತದ ಪರ 63 ಟಿ20 ಪಂದ್ಯಗಳನ್ನ ಆಡಿದ್ದು 99 ವಿಕೆಟ್‌ ಕಬಳಿಸಿದ್ದಾರೆ. ಇನ್ನೊಂದು ವಿಕೆಟ್ ಪಡೆದ್ರೂ ಕೂಡ 100 ವಿಕೆಟ್​ಗಳ ಸಾಧನೆ ಮಾಡ್ತಾರೆ. ಏಷ್ಯಾ ಕಪ್‌ನಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶವಿತ್ತು. ಆದ್ರೆ ಯುಎಇ ವಿರುದ್ಧದ ಪಂದ್ಯ ಹಾಗೇ ಪಾಕ್ ವಿರುದ್ಧದ ಪಂದ್ಯದಲ್ಲೂ ಪ್ಲೇಯಿಂಗ್ 11 ನಲ್ಲಿ ಅವಕಾಶ ನೀಡಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗ ಆರ್.ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದುಬೈನ ಪಿಚ್​ಗಳು ಸ್ಪಿನ್ ಫ್ರೆಂಡ್ಲಿಯಾಗಿವೆ ಅಂದ ಮಾತ್ರಕ್ಕೆ ಬರೀ ಸ್ಪಿನ್ನರ್​ಗಳಿಗೆ ಮಣೆ ಹಾಕಬಾರದು. ಬ್ಯಾಟಿಂಗ್ ಡೆಪ್ತ್ ಇರೋದ್ರಿಂದ ಆಲ್​ರೌಂಡರ್​ಗಳನ್ನ ಟಾರ್ಗೆಟ್ ಮಾಡೋ ಬದ್ಲು ಒಬ್ಬ ಹೆಚ್ಚುವರಿ ಸೀಮರ್ ಬೌಲರ್​ನ ಕಣಕ್ಕಿಳಿಸಬಹುದಿತ್ತು. ಯುಎಇ, ಪಾಕ್​ನಂತ ದುರ್ಬಲ ತಂಡಗಳ ವಿರುದ್ಧ ಎಕ್ಸ್​​​ಟ್ರಾ ಬ್ಯಾಟಿಂಗ್​ ಗಿಂತ ಬೌಲಿಂಗ್​ಗೆ ಪ್ರಾಶಸ್ತ್ಯ ಕೊಡ್ಬೋದಿತ್ತು ಅಂದಿದ್ದಾರೆ. ಈ ಮೂಲಕ ಶಿವಂ ದುಬೆ ಬದಲಿಗೆ ಅರ್ಶದೀಪ್​ ಸಿಂಗ್​ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಕೊಡ್ಬೋದಿತ್ತು ಅಂದಿದ್ದಾರೆ. ಅಷ್ಟಕ್ಕೂ ಅರ್ಷದೀಪ್​ ಪರ ಬ್ಯಾಟ್ ಬೀಸೋಕೆ ಕಾರಣವೂ ಇದೆ.

2026ರ ಟಿ-20 ವಿಶ್ವಕಪ್ ಮರೆಯಿತಾ ಭಾರತ?

ಟೀಂ ಇಂಡಿಯಾಗೆ ಸದ್ಯ ಏಷ್ಯಾಕಪ್ ಟೂರ್ನಿಗಿಂತ 2026ರ ಟಿ-20 ವಿಶ್ವಕಪ್ ಗೆಲ್ಲೋದೇ ಮೇನ್ ಅಜೆಂಡಾ. ಅದರ ಪೂರ್ವಭಾವಿಯಾಗಿಯೇ ಈಗ ಏಷ್ಯಾಕಪ್​ನೂ ಕೂಡ ಟಿ-20ಐ ಮಾದರಿಯಲ್ಲಿ ಆಡಿಸ್ತಿದ್ದಾರೆ. ಹೀಗಾಗಿ ಏಷ್ಯಾಕಪ್ ಟೂರ್ನಿಗೆ ಟೀಂ ಕಟ್ಟೋದಕ್ಕಿಂತ ಮುಂದಿನ ವಿಶ್ವಕಪ್ ಗಮನದಲ್ಲಿ ಇಟ್ಕೊಂಡು ಸಾಮರ್ಥ್ಯ ಇರೋರಿಗೆ ಅವಕಾಶ ಕೊಡ್ಬೇಕು. ಏಷ್ಯಾಕಪ್ ಮುಗಿದ್ಮೇಲೆ 15 ಟಿ-20ಐ ಪಂದ್ಯಗಳನ್ನ ಆಡ್ಬೇಕಿದೆ. ಸೋ ತಂಡದಲ್ಲಿ ಅರ್ಷದೀಪ್ ಸಿಂಗ್ ಇರೋದು ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದಾಗ ಅರ್ಷದೀಪ್​ ಗೆ ಪ್ರಾಮಿನೆಸ್ಟ್ ಕೊಡ್ತಿದ್ರು. ಬಟ್ ಗಂಭೀರ್ ಬಂದ್ಮೇಲೆ ಸೆಲೆಕ್ಟ್ ಆದ್ರೂ ಪ್ಲೇಯಿಂಗ್ 11ನಲ್ಲಿ ಆಡಿಸ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಅರ್ಷದೀಪ್ ಬೆಂಚ್ ಕಾದಿದ್ದೇ ಆಗಿತ್ತು. ಈಗ ಏಷ್ಯಾಕಪ್ ಟೂರ್ನಿಯಲ್ಲೂ ಅದೇ ಆಗ್ತಿದೆ. ಮೊಹಮ್ಮದ್ ಶಮಿ ಜಾಗದಲ್ಲಿ ತಂಡಕ್ಕೆ ಸೇರಿರೋ ಅರ್ಷದೀಪ್ ಗೇಮ್ ಟರ್ನಿಂಗ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಹೀಗಾಗಿ ಟಿ-20 ವಿಶ್ವಕಪ್​ನಲ್ಲಿ ಅರ್ಷದೀಪ್ ಇರ್ಬೇಕು. ಬುಮ್ರಾ ಜೊತೆ ಬೌಲಿಂಗ್ ಶಕ್ತಿಯಾಗ್ಬೇಕು. ಅದನ್ನ ಬಿಟ್ಟು ಟೆಂಪರರಿ ಟೀಂ ಕಟ್ಟಿದ್ರೆ ಮುಂದಿನ ಪಂದ್ಯಗಳಲ್ಲಿ ಹೊಡೆತ ತಿನ್ಬೇಕಾಗುತ್ತೆ.

ಒಮನ್ ವಿರುದ್ಧದ ಪಂದ್ಯದಲ್ಲಾದ್ರೂ ಅವಕಾಶ ಸಿಗುತ್ತಾ?

ಏಷ್ಯಾಕಪ್​ನ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಭಾರತ ಒಮನ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ವೇಗಿಗಳಿಗೆ ಈ ಪಿಚ್ ಪ್ಲಸ್ ಆಗುತ್ತೆ.ಹೀಗಾಗಿ ಅರ್ಷದೀಪ್ ಸಿಂಗ್​ಗೆ ಚಾನ್ಸ್ ಸಿಗೋ ಸಾಧ್ಯತೆ ಇದೆ. ಅಥವಾ ಜಸ್ಪ್ರೀತ್ ಬುಮ್ರಾ ಅವರಿಗೆ ಸೂಪರ್ ಫೋರ್ ಹಂತದ ಪಂದ್ಯಗಳಿಗೂ ಮುನ್ನ ವಿಶ್ರಾಂತಿ ನೀಡಲಾಗುತ್ತಿದ್ದು, ಬದಲಿಯಾಗಿ ಅರ್ಶ್ದೀಪ್ ಸಿಂಗ್ ಆಡುವ ನಿರೀಕ್ಷೆಯಿದೆ. ಇಬ್ಬರ ಪರ್ಫಾಮೆನ್ಸ್ ಬಗ್ಗೆ ಹೇಳೋದಾದ್​ರೆ ಇಬ್ಬರೂ ಕೂಡ ಭಾರತದ ವೇಗದ ಬೌಲರ್​ಗಳಾಗಿದ್ದಾರೆ. ಬುಮ್ರಾ ವಿಶ್ವದ ಅತ್ಯುತ್ತಮ ಡೆತ್ ಓವರ್ ಸ್ಪೆಷಲಿಸ್ಟ್‌ಗಳಲ್ಲಿ ಒಬ್ಬರೆಂದು ಕರೆಸಿಕೊಳ್ತಾರೆ. ಅರ್ಷ್‌ದೀಪ್ ವಿಶ್ವಾಸಾರ್ಹ ಬೌಲರ್ ಆಗಿದ್ದಾರೆ. ಇಲ್ಲಿ ಬುಮ್ರಾ ರನ್ ರೇಟ್ ಚೆನ್ನಾಗಿದೆ. ಅಂದ್ರೆ ಹೆಚ್ಚು ರನ್ಸ್ ಬಿಟ್ಟುಕೊಡಲ್ಲ. ಬಟ್ ಅರ್ಶದೀಪ್ ಹಂಗಲ್ಲ ಬೌಲಿಂಗ್​ನಲ್ಲಿ ದುಬಾರಿ ಅನ್ಸಿದ್ರೂ ಕೂಡ ಬ್ರೇಕ್ ಥ್ರ್ಯೂ ತಂದುಕೊಡುವಂಥ ವಿಕೆಟ್ ಟೇಕರ್ ಆಗಿದ್ದಾರೆ. ಆದ್ರೆ ಹರ್ಷಿತ್ ರಾಣಾಗೆ ದಾರಿ ಮಾಡಿಕೊಡೋಕೆ ಗೌತಮ್ ಗಂಭೀರ್ ಅರ್ಷದೀಪ್​ರನ್ನ ಸೈಡ್​ಲೈನ್ ಮಾಡಿಸ್ತಿದ್ದಾರೆ ಅನ್ನೋ ವಾದವೂ ಇದೆ. ಇದೆಲ್ಲಾ ಏನೇ ಇದ್ರೂ ಭಾರತ ತಂಡ ಗೆಲ್ಲೋದು ಎಷ್ಟು ಇಂಪಾರ್ಟೆಂಟೋ ಪ್ರತಿಭಾವಂತರಿಗೆ ಅವಕಾಶ ನೀಡ್ಬೇಕು ಅನ್ನೋದು ಕೂಡ ಅಷ್ಟೇ ಮುಖ್ಯವಾಗುತ್ತೆ.

Shantha Kumari