ನ್ಯಾನೋ ಬನಾನಾ ಟ್ರೆಂಡ್ ಡೇಂಜರ್.. ಬಯೋಡೇಟಾ ಲೀಕ್.. ಅಕೌಂಟ್ ಖಾಲಿ! – ಯುವತಿ ಮಚ್ಚೆ ಗುಟ್ಟು ರಟ್ಟಾಗಿದ್ದು ಹೇಗೆ?

ಇದು ಎಐ ಯುಗ.. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಂದ್ಮೇಲೆ ಹೊಸ ಹೊಸ ಟ್ರೆಂಡ್ ಗಳು ಹುಟ್ಟಿಕೊಳ್ತಿವೆ. ಮೊನ್ನೆ ಮೊನ್ನೆಯಷ್ಟೇ ಘಿಬ್ಲಿ ಶೈಲಿ ಇಮೇಜ್ ಟ್ರೆಂಟ್ ಸೆಟ್ ಮಾಡಿತ್ತು. ಈಗ ನ್ಯಾನೋ ಬನಾನಾ ಟ್ರೆಂಡ್ ದೇಶ, ವಿದೇಶದಲ್ಲಿಸದ್ದು ಮಾಡ್ತಿದೆ. ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ನ್ಯಾನೋ ಬನಾನಾ ಟ್ರೆಂಡ್ ಗೆ ಫಿದಾ ಆಗಿದ್ದಾರೆ. ಆದ್ರೆ ಎಐ ಇಮೇಜ್ ಕ್ರಿಯೇಟ್ ಮಾಡೋ ಮುನ್ನ ಎಚ್ಚರ.. ಇದೀಗ ವ್ಯಕ್ತಿಯೊಬ್ಬ ಫೋಟೋ ಅಪ್ಲೋಡ್ ದುಡ್ಡು ಕಳ್ಕೊಂಡಿದ್ದಾರೆ.. ಅಷ್ಟೇ ಅಲ್ಲ ಯುವತಿಯೊಬ್ಬರು ನ್ಯೂನೋ ಬನಾನ ಟ್ರೆಂಡ್ ಫೋಟೋ ಅಸಲಿಯತ್ತು ಬಯಲು ಮಾಡಿದ್ದಾರೆ.
ಇದನ್ನೂ ಓದಿ: ಮಗುವಿನ ಪಾಲಿಗೆ ದೇವರಾದ ಶ್ವಾನ! – ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ನಾಯಿ!
ಈಗ ಕೈಯಲ್ಲೊಂದು ಸ್ಮಾರ್ಟ್ ಫೋನ್ ಇದ್ರೆ ಸಾಕು. ಏನ್ ಬೇಕಾದ್ರೂ ಮಾಡ್ಬೋದು.. ಯಾಕಂದ್ರೆ ತಂತ್ರಜ್ಜಾನ ಅಷ್ಟೊಂದು ಮುಂದುವರಿದಿದೆ. ಜನ ಮರುಳೋ.. ಜಾತ್ರೆ ಮರುಳೋ ಅನ್ನೋತರ ತರ ಆಗಿದೆ ಸೋಶಿಯಲ್ ಮೀಡಿಯಾ ಬಳಕೆದಾರರ ಸ್ಥಿತಿ. ಯಾಕಂದ್ರೆ, ಹೊಸ ಫೀಚರ್ ಯಾವುದಾದ್ರೂ ಬಂತು, ಹೊಸತಾಗಿ ಏನಾದ್ರು ಒಂದು ಕಾಣಿಸಿಕೊಳ್ತು ಅಂದ್ರೆ ಜನ ಅದನ್ನ ಟ್ರೈ ಮಾಡದೇ ಬಿಡೋದಿಲ್ಲ. ಇತ್ತೀಚೆಗಷ್ಟೇ ನ್ಯಾನೋ ಬನಾನಾ ಟ್ರೆಂಡ್ ಸದ್ದು ಮಾಡ್ತಿದೆ. ಗೂಗಲ್ ಕೃತಕ ಬುದ್ಧಿಮತ್ತೆಯಾಗಿರುವ ಗೂಗಲ್ ಜೆಮಿನಿ ಇದನ್ನ ಕ್ರಿಯೇಟ್ ಮಾಡಿದೆ. ಗೂಗಲ್ ಜೆಮಿನಿಗೆ ನಿಮ್ಮ ಫೋಟೋ ಅಪ್ಲೋಡ್ ಮಾಡಿದ್ರೆ ಸಾಕು.. ಕ್ಷಣ ಮಾತ್ರದಲ್ಲೇ ನಿಮ್ಮ ಡಿಫ್ರೆಂಟ್ ಡಿಫ್ರೆಂಟ್ ಫೋಟೋ ರೆಡಿಯಾಗುತ್ತೆ.. ಆದ್ರೆ ಈ 3D ಫೋಟೋ ರಚಿಸೋ ಮುನ್ನ ಎಚ್ಚರ.. ಯಾಕಂದ್ರೆ ನೀವು ಅಪ್ಲೋಡ್ ಮಾಡಿರೋ ಫೋಟೋ ಏನ್ ಬೇಕಾದ್ರೂ ಆಗ್ಬೋದು.. ನಿಮ್ಮ ಅಕೌಂಟ್ ಕೂಡ ಖಾಲಿ ಆಗ್ಬೋದು..
ಗೂಗಲ್ ನ ಜೆಮಿನಿ 2.5 ಫ್ಲ್ಯಾಶ್ ಇಮೇಜ್ ಟೂಲ್ ಸದ್ಯ ದೇಶ, ವಿದೇಶದಲ್ಲಿ ಟ್ರೆಂಡ್ ಆಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನ್ಯಾನೋ ಬನಾನಾ ಮೂಲಕ ಈ 3D ಪ್ರತಿಮೆಯನ್ನ ರಚಿಸಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ರು.. ಅಲ್ಲಿಂದಲೇ ಈ ಟ್ರೆಂಡ್ ಫೇಮಸ್ ಆಯ್ತು..ಇದೀಗ ಬಾಲಿವುಡ್ ಆಕ್ಟರ್ಸ್, ಕ್ರಿಕೆಟರ್ಸ್, ಸಾಮಾನ್ಯ ಜನರು ಕೂಡ ಈ ಪ್ಲಾಟ್ಫಾರ್ಮ್ನ ಬಳಸ್ತಿದ್ದಾರೆ. ಕಳೆದೊಂದು ವಾರದಿಂದ 10 ಮಿಲಿಯನ್ ಗೂ ಹೆಚ್ಚು ಬಳಕೆದಾರರು, Google Gemini ಅಪ್ಲಿಕೇಶನ್ ಬಳಸಿದ್ದಾರೆ. ಈಗಾಗಲೇ 200 ಮಿಲಿಯನ್ ಗೂ ಹೆಚ್ಚು ಫೋಟೋಗಳನ್ನ ಎಡಿಟ್ ಮಾಡಿದ್ದಾರೆ. ಇದೇ ರೀತಿ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಫೋಟೋನಾ ಎಐ ಇಮೇಜ್ಗೆ ಕನ್ವರ್ಟ್ ಮಾಡಿದ್ದಾರೆ. ಫೋಟೊ ಏನೋ ಚೆನ್ನಾಗಿರೋದೇ ಬಂತು.. ಆದ್ರೆ ಫೋಟೊ ಡೌನ್ಲೋಡ್ ಆಗ್ತಿದ್ದಂತೆ ಅವ್ರ ಅಕೌಂಟ್ನಿಂದ 70 ಸಾವಿರ ರೂಪಾಯಿ ಕಟ್ ಆಗಿದೆ. ಇದನ್ನ ನೋಡಿ ಶಾಕ್ ಆಗಿದ್ದಾರೆ. ಕೂಡಲೇ ಆ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಈ ನ್ಯಾನೋ ಬನಾನ ಟ್ರೆಂಡ್ ಗೆ ಯುವತಿಯರೇ ಜಾಸ್ತಿ ಅಟ್ರಾಕ್ಟ್ ಆಗ್ತಿದ್ದಾರೆ. ಫೋಟೋ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದಾರೆ. ಇದಿಗ ಝಲಕ್ ಭಾವನಾನಿ ಎಂಬಾಕೆ ಕೂಡ ಜೆಮಿನಿಗೆ ತನ್ನ ಫೋಟೋ ಅಪ್ಲೋಡ್ ಮಾಡಿದ್ಲು.. ಸುಂದರವಾದ ಫೋಟೋ ಎಡಿಟ್ ಆಗಿರೋದನ್ನ ನೋಡಿ ಖುಷಿ ಪಟ್ಟಿದ್ಲು.. ಆದ್ರೆ ಆ ಫೋಟೋನ ಸೂಕ್ಷ್ಮವಾಗಿ ಗಮನಿಸಿದ್ದಾಗಲೇ ಆಕೆಗೆ ಗೊತ್ತಾಗಿದ್ದು, ಈ ಪ್ಲ್ಯಾಟ್ಫಾರ್ಮ್ ಎಷ್ಟು ಡೇಂಜರ್ ಅನ್ನೋದು.. ಯಾಕಂದ್ರೆ ಝಲಕ್ ಭಾವನಾನಿ ದೇಹ ಫುಲ್ ಕವರ್ ಆಗಿರೋ ಗ್ರೀನ್ ಕಲರ್ ಡ್ರೆಸ್ನಲ್ಲಿನ ಫೋಟೋನ ಅಪ್ಲೋಡ್ ಮಾಡಿದ್ದರು. ಯುವತಿಯ ಎಐ ಫೋಟೋ ಸೂಪರ್ ಆಗೇ ಬಂದಿದೆ. ಆದರೆ ಫುಲ್ ಶಾಕಿಂಗ್ ವಿಷ್ಯ ಏನೆಂದರೆ, ಯುವತಿಯ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕ ಮಚ್ಚೆ ಇದೆ. ಇದು ಅಪ್ಲೋಡ್ ಮಾಡಿದ ಫೋಟೋದಲ್ಲಿ ಕಾಣಿಸುವುದಿಲ್ಲ. ಆದರೆ AI ಕಳಿಸಿರುವ ಫೋಟೋದಲ್ಲಿ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಬಂದಿದೆ. ಫೋಟೋದಲ್ಲಿ ಕಾಣಿಸಿಲ್ಲ ಅಂದ್ರೂ ಚಿಕ್ಕದಾದ ಮಚ್ಚೆಯನ್ನು ಎಐ ಹೇಗೆ ಗುರುತಿಸಿದೆ ಎಂದು ಯುವತಿ ಫುಲ್ ಶಾಕ್ ಆಗಿದ್ದಾರೆ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ.
ಅಂದ್ಹಾಗೆ ಈ ನ್ಯಾನೋ ಬನಾನಾ 3D ಇಮೇಜ್ ಟ್ರೆಂಡ್ ಆಗೋದಿಕ್ಕೂ ಒಂದು ಕಾರಣ ಇದೆ. 3D ಇಮೇಜ್ ಕ್ರಿಯೇಟ್ ಮಾಡೋ ಸಾಫ್ಟ್ವೇರ್ ದುಬಾರಿ.. ಇದನ್ನ ಕ್ರಿಯೇಟ್ ಮಾಡೋದಿಕ್ಕೆ ಎಲ್ಲರಿಂದಲೂ ಸಾಧ್ಯ ಇಲ್ಲ.. ಆ ಸಾಫ್ಟ್ವೇರ್ ಬಗ್ಗೆ ತಿಳಿದಿದ್ದವರು ಮಾತ್ರ ಇದನ್ನ ಮಾಡ್ಬೋದು. ಆದ್ರೆ ಈ ಎಐ ಟೂಲ್ನಲ್ಲಿ ಜಸ್ಟ್ ಒಂದು ಫೋಟೋ ಮತ್ತು ಪ್ರಾಂಪ್ಟ್ ಸಾಕು. 3D ಇಮೇಜ್ ರೆಡಿಯಾಗುತ್ತೆ. ಯಾವುದೇ ಹಣ ಕೊಡೋ ಅವಶ್ಯಕತೆ ಕೂಡ ಇರಲ್ಲ. ಹೀಗಾಗೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಆದ್ರೆ ಇದ್ರಿಂದಾಗಿ ನಿಮ್ಮ ವೈಯಕ್ತಿಕ ಡೇಟಾ ಲೀಕ್ ಆಗೋ ಸಾಧ್ಯತೆ ಇರುತ್ತೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇನ್ನು ನಿಮ್ಮ ಫೋಟೋ ಅಪ್ಲೋಡ್ ಮಾಡಿದ ಬಳಿಕ, ಬೇರೆ ಉದ್ದೇಶಗಳಿಗೂ ಬಳಕೆಯಾಗೋ ಸಾಧ್ಯತೆ ಇದೆ. ನಿಮ್ಮ ಫೋಟೋ ಇಟ್ಕೊಂಡು ನಕಲಿ ಐಡಿ ಕ್ರಿಯೇಟ್ ಮಾಡ್ಬೋದು, ಹಾಗೇ ಸಾಲ ಪಡೆಯೋ ಸಾಧ್ಯತೆ ಕೂಡ ಇರುತ್ತೆ.. ಹಾಗೇ ಕೆಲ ಜಾಹಿರಾತಿಗೂ ಬಳಸಿಕೊಳ್ಳಬಹುದು. ಯಾವುದಾದ್ರೂ APK ಫೈಲ್, Unkown ಲಿಂಕ್ಸ್ ಬಂದ್ರೆ ಅದನ್ನ ಓಪನ್ ಮಾಡ್ಬೇಡಿ ಅಂತ ಪೊಲೀಸರು ಕೂಡ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗಲೇ ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಡೀಪ್ ಫೇಕ್ ಫೋಟೋ, ವಿಡಿಯೋಗಳನ್ನ ವೈರಲ್ ಮಾಡ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರೋದು ಮುಖ್ಯ.

ನೋಡಿರಿ

