ಮಗುವಿನ ಪಾಲಿಗೆ ದೇವರಾದ ಶ್ವಾನ! – ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ನಾಯಿ!

 ಮಗುವಿನ ಪಾಲಿಗೆ ದೇವರಾದ ಶ್ವಾನ! – ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ನಾಯಿ!

ಮನುಷ್ಯರ ಜೊತೆ ನಾಯಿಗಳು ಹೊಂದಿಕೊಂಡಷ್ಟು ಮತ್ತ್ಯಾವ ಪ್ರಾಣಿಗಳು ಹೊಂದಿಕೊಳ್ಳಲ್ಲ. ಶ್ವಾನಗಳ ಪ್ರೀತಿ, ನಮ್ಮ ಜೊತೆಗಿನ ಸಲುಗೆ, ಅವುಗಳು ತೋರುವ ನಿಷ್ಠೆ-ನಂಬಿಕೆ, ನಮ್ಮನ್ನು ಕಾಯುವ, ರಕ್ಷಿಸುವ ಬುದ್ಧಿವಂತಿಕೆಯಿಂದಾಗಿ ಮನುಷ್ಯರಿಗೆ ಇನ್ನಷ್ಟು ಹತ್ತಿರವಾಗಿದೆ. ಶ್ವಾನಗಳು ಮನೆಯನ್ನ ಕಾಯುವುದಲ್ಲದೇ, ಮನೆ ಮಾಲೀಕರನ್ನ ರಕ್ಷಿಸಿರುವಂತಹ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿವೆ. ಇದೀಗ ಇಲ್ಲೊಂದು ಶ್ವಾನ ಮಗುವಿನ ಪಾಲಿಗೆ ದೇವರಾಗಿದೆ. ಕೆರೆ ಬೀಳುತ್ತಿರುವ ಮಗುವನ್ನ ನಾಯಿಯೊಂದು ರಕ್ಷಿಸಿದೆ.

ಇದನ್ನೂ ಓದಿ: ಡಿ.ವಿ ಸದಾನಂದ ಗೌಡ ಬ್ಯಾಂಕ್‌ ಅಕೌಂಟ್‌ ಹ್ಯಾಕ್!‌ – ಲಕ್ಷ ಲಕ್ಷ ಕಳೆದುಕೊಂಡ ಮಾಜಿ ಸಿಎಂ

ಮನೆಯಲ್ಲಿ ಪುಟ್ಟ ಮಕ್ಕಳಿದ್ರೆ ಅವುಗಳ ಜೊತೆ ನಾಯಿಗಳು ಆಟ ಆಡುತ್ತವೆ. ಮಕ್ಕಳು ಎಷ್ಟೇ ಚೇಷ್ಟೆ ಕೊಟ್ರೂ ಸಹಿಸಿಕೊಳ್ತವೆ. ಅಷ್ಟೇ ಅಲ್ಲ ಮನೆಯಲ್ಲಿ ಸಾಕಿರೋ ನಾಯಿಗಳು ಮಕ್ಕಳನ್ನ ರಕ್ಷಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ ಸ್ಟ್ರಾಲರ್ ನಲ್ಲಿ ಕುಳಿತಿದ್ದ ಮಗುವು ಕೆಳಗೆ ಬೀಳುವುದನ್ನು ಶ್ವಾನವು ತಡೆದು ಮಗುವನ್ನು ದೊಡ್ಡ ಅಪಘಾತದಿಂದ ರಕ್ಷಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್‌ ಆಗಿದೆ.

therealdog ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಟ್ಟೆ ಒಗೆಯುವ ಕೆಲಸದಲ್ಲಿ ನಿರತಳಾಗಿದ್ದಾಳೆ. ಆಕೆಯ ಮಗು ಪಕ್ಕದಲ್ಲಿ ಸ್ಟ್ರಾಲರ್‌ನಲ್ಲಿ ಕುಳಿತಿದೆ. ಎದುರಿಗೆ ಕೊಳವನ್ನು ಕಾಣಬಹುದು. ಹೀಗಿರುವಾಗ ಸ್ಟ್ರಾಲರ್ ಮುಂದೆ ಸಾಗಲು ಪ್ರಾರಂಭಿಸುತ್ತದೆ. ಇದು ದೊಡ್ಡ ಅಪಾಯವೇನೋ ಸಂಭವಿಸುತ್ತದೆ ಎನ್ನುವುದರ ಮುನ್ಸೂಚನೆಯಾಂತಿದೆ. ಇದನ್ನು ನೋಡಿದ ಶ್ವಾನವುಮಗುವು ಸ್ಟ್ರಾಲರ್ ಸಮೇತ ನೀರಿಗೆ ಬೀಳುವುದನ್ನು ತಡೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಅನೇಕರು ಈ ವಿಡಿಯೋವನ್ನ ಮೆಚ್ಚಿಕೊಂಡರೆ, ಇನ್ನು ಕೆಲವರು ಇದು ಎಐ ರಚಿತ ವಿಡಿಯೋ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಅಪಾಯದ ಸಂದರ್ಭದಲ್ಲಿ ಡಾಂಗೇಶ್ ಭಾಯ್ ಸದಾ ಇರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಕಾರಣದಿಂದಲೇ ನಾನು ಡಾಗೇಶ್ ಭಾಯ್ ಅವರನ್ನು ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಈ ಎಂದು ಹೇಳಿದ್ದಾರೆ.

Shwetha M