ಕೇರಳದ ದೇಗುಲಕ್ಕೆ ಆನೆ ಗಿಫ್ಟ್‌ ಕೊಟ್ಟ ಕನ್ನಡಿಗ – ಮತ್ತೊಮ್ಮೆ ದೈವಭಕ್ತಿ ಮೆರೆದ KL ರಾಹುಲ್!

ಕೇರಳದ ದೇಗುಲಕ್ಕೆ ಆನೆ ಗಿಫ್ಟ್‌ ಕೊಟ್ಟ ಕನ್ನಡಿಗ – ಮತ್ತೊಮ್ಮೆ ದೈವಭಕ್ತಿ ಮೆರೆದ KL ರಾಹುಲ್!

ಟೀಮ್‌ ಇಂಡಿಯಾ ಆಟಗಾರ ಕೆ.ಎಲ್​ ರಾಹುಲ್ ಕಳೆದ ಕೆಲ ವರ್ಷಗಳಿಂದ ​​ ಆದ್ಯಾತ್ಮಿಕ ಜೀವನದತ್ತ ಹೆಚ್ಚು ವಾಲಿದ್ದಾರೆ. ಕೆ ಎಲ್‌ ರಾಹುಲ್‌ ಹಲವು ದೇವಾಲಯಗಳಿಗೆ​​ ಆಗಾಗ ಭೇಟಿ ನೀಡ್ತಾರೆ. ದೇವರ ಕೃಪಾಶೀರ್ವಾದವೋ, ಕಠಿಣ ಪರಿಶ್ರಮದ ಫಲವೋ ಗೊತ್ತಿಲ್ಲ. ಆನ್​ಫೀಲ್ಡ್​ ಹಾಗೂ ಆಫ್​​ ದ ಫೀಲ್ಡ್​ನಲ್ಲಿ ರಾಹುಲ್​ಗೆ ಯಶಸ್ಸು ಸಿಗ್ತಿದೆ. ಈ ಯಶಸ್ಸು ಮುಂದೆಯೂ ಕನ್ನಡಿಗ ರಾಹುಲ್​ಗೆ ಸಿಗ್ತಾನೆ ಇರಲಿ. ಇದೀಗ ಕೆ ಎಲ್‌ ರಾಹುಲ್‌ ಮತ್ತೊಮ್ಮೆ ದೈವಭಕ್ತಿ ಮೆರೆದಿದ್ದಾರೆ. ಇದೀಗ ಕೇರಳದ ದೇವಸ್ಥಾನಕ್ಕೆ ಆನೆಯನ್ನ ಗಿಫ್ಟ್‌  ನೀಡಿದ್ದಾರೆ.

ಇದನ್ನೂ ಓದಿ: ತೆರೆಗೆ ಬರಲಿದೆ ಪ್ರಧಾನಿ ಮೋದಿ ಬಯೋಪಿಕ್‌ – ನರೇಂದ್ರ ಮೋದಿ ಪಾತ್ರದಲ್ಲಿ ಮಿಂಚಲಿದ್ದಾರೆ ಮಲಯಾಳಂ ನಟ!

ಕನ್ನಡಿಗ ಕೆಎಲ್‌ ರಾಹುಲ್‌, ಬೆಂಗಳೂರಿನಲ್ಲಿ ಹುಟ್ಟಿದ್ರೂ ಮಂಗಳೂರಲ್ಲಿ ಬೆಳೆದಿದ್ದು. ಅವರಿಗೆ ಆ ನೆಲದೊಂದಿಗೆ ವಿಶೇಷ ನಂಟು ಇದೆ. ಕರಾವಳಿ ಭಾಗದ ನಂಬಿಕೆ, ಆಚರಣೆಗಳನ್ನ ಸದಾ ಪಾಲಿಸ್ತಾರೆ. ದೈವಗಳು, ದೇವರನ್ನ ಆರಾಧಿಸೋ ರಾಹುಲ್​ ಬಿಡುವು ಸಿಕ್ಕಾಗ ದೇವಸ್ಥಾನಳಿಗೆ ಭೇಟಿ ನೀಡುತ್ತಾರೆ. ಸ್ವಾಮಿ ಕೊರಗಜ್ಜ, ಬಪ್ಪನಾಡಿನ ದರ್ಗಾ ಪರಮೇಶ್ವರಿ, ಸೌತಡ್ಕದ ಮಹಾಗಣಪತಿ ದೇವಸ್ಥಾನಗಳಿಗೆ ಆಗಾಗ ತೆರಳಿ ಪೂಜೆಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಇದೀಗ ಕೆಎಲ್‌ ರಾಹುಲ್‌ ಕೇರಳದ ಮಹಾವಿಷ್ಣುವಿನ ದೇವಸ್ಥಾನಕ್ಕೆ ಆನೆಯೊಂದನ್ನ ದೇಣಿಗೆ ನೀಡಿದ್ದಾರೆ. ಕೇರಳದ ಪುರಾತನ ಶ್ರೀ ಪದ್ಮನಾಭಪುರಂ ಮಹಾವಿಷ್ಣು ಕೀರಮ್​​ ದೇವಸ್ಥಾನಕ್ಕೆ ಪೇಟಾ ಇಂಡಿಯಾ ಸಂಸ್ಥೆ ಜೊತೆಗೂಡಿ ಕೆಎಲ್‌ ರಾಹುಲ್ ಯಾಂತ್ರಿಕ‌ ಆನೆಯನ್ನ ರಾಹುಲ್​ ಉಡುಗೊರೆಯಾಗಿ ನೀಡಿದ್ದಾರೆ. ಕೃಷ್ಣ ಜಯಂತಿಯಂದು ಈ ಆನೆಯನ್ನ ಉಡುಗೊರೆಯಾಗಿ ನೀಡಿದ್ದು ಇದಕ್ಕೆ ಪದ್ಮನಾಭಪುರಂ ಪದ್ಮನಾಭನ್​ ಎಂದು ಹೆಸರಿಡಲಾಗಿದೆ. ದೇವರ ಮುಂದಿನ ಉತ್ಸವಗಳಲ್ಲಿ ಜೀವಂತ ಆನೆಯ ಬದಲು ಈ ಯಾಂತ್ರಿಕ ಆನೆಯನ್ನ ದೇವಸ್ಥಾನದ ಆಡಳಿತ ಮಂಡಳಿ ಬಳಸಲಿದೆ. ಅಂದ್ಹಾಗೆ ಇದು ಜೀವಂತ ಆನೆ ಅಲ್ಲ ರೋಬೋಟ್‌ ಆನೆ. ಯಾಂತ್ರಿಕ ಆನೆ ದೇಣಿಗೆ ನೀಡಿರುವ ಉದ್ದೇಶ ಸಾಮಾಜಿಕ ಕಳಕಳಿ.

ಧಾರ್ಮಿಕ ಆಚರಣೆಗಳ ವೇಳೆ ಆನೆಗಳು ಕೆರಳಿ ಭಕ್ತರು ಅಸುನೀಗಿದ, ಗಾಯಗೊಂಡ ಸಾಕಷ್ಟು ಪ್ರಕರಣಗಳು ಕೇಳದಲ್ಲಿ ಸಂಭವಿಸಿವೆ. ಇದೇ ವರ್ಷದ ಜನವರಿಯಲ್ಲಿ ಮಲಪ್ಪುರಂನ ತಿರೂರ್​ನಲ್ಲಿ ಹಬ್ಬದ ಸಂದರ್ಭದಲ್ಲಿ ಆನೆ ದಾಳಿಗೆ ಒಬ್ಬ ಅಸುನೀಗಿದ್ರೆ, 17 ಮಂದಿ ಗಾಯಗೊಂಡಿದ್ರು. ಫೆಬ್ರವರಿಯಲ್ಲಿ 13 2025ರಲ್ಲಿ ಕುರುವಂಗಡ್‌ನ ಮಣಕುಲಂಗರನ ಭಗವತಿ ದೇವಸ್ಥಾನದ ಹಬ್ಬದ ಸಂದರ್ಭದಲ್ಲಿ ಆನೆ ದಾಳಿಗೆ ಮೂವರು ಭಕ್ತರು ಮರಣ ಹೊಂದಿದ್ರೆ, 30ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ರು. ಇಂತಹ ಅವಘಡ ತಡೆಯಲು ಕೆಎಲ್‌ ರಾಹುಲ್‌ ಪೆಟಾ ಸಂಸ್ಥೆ ಜೊತೆ ಸೇರಿ ದೇಗುಲಕ್ಕೆ ಯಾಂತ್ರಿಕ ಆನೆಯನ್ನ ದೇಣಿಗೆ ನೀಡಿದ್ದಾರೆ. ಯಾಂತ್ರಿಕ ಆನೆಯನ್ನ ದೇವಸ್ಥಾನಗಳು ಬಳಸಿದ್ರೆ ಸಾಂಸ್ಕೃತಿಕ ಆಚರಣೆಯೂ ಉಳಿಯುತ್ತೆ. ಮತ್ತು ಭಕ್ತರಿಗೂ ಯಾವುದೇ ಅಪಾಯವಿಲ್ಲ ಅನ್ನೋದು ಆನೆ ದೇಣಿಗೆ ಹಿಂದಿನ ಉದ್ದೇಶವಾಗಿದೆ.

Shwetha M