ಮೂಗಿನ ಮೂಲಕ ಹಾಕುವ ಲಸಿಕೆಗೆ ದರ ನಿಗದಿ – ಜನವರಿ ನಾಲ್ಕನೇ ವಾರದಿಂದ ಲಸಿಕೆ ಲಭ್ಯ

ಭಾರತ ಸರ್ಕಾರ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಈಗಾಗಲೇ ಅನುಮೋದಿಸಿದೆ. ಇದನ್ನು ಹೆಟೆರೊಲಾಜಸ್ ಬೂಸ್ಟರ್ ಆಗಿ ಬಳಸಲಾಗುವುದು. ಮತ್ತು ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹೀಗಿರುವಾಗಲೇ ಮೂಗಿನ ಮೂಲಕ ಹಾಕುವ ಲಸಿಕೆಗೆ ಭಾರತ್ ಬಯೋಟೆಕ್ ಬೆಲೆ ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳಿಗೆ 800 ರೂಪಾಯಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂಪಾಯಿ ಎಂದು ದರವನ್ನು ನಿಗದಿಪಡಿಸಿದೆ.
ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿದ ನಾಲ್ವರು ವಿದೇಶಿಗರಲ್ಲಿ ಸೋಂಕು ಪತ್ತೆ – ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್
ಮೂಗಿನ ಮೂಲಕ ಹಾಕುವ ಲಸಿಕೆ BBV154 , ನವೆಂಬರ್ನಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತುರ್ತು ನೀಡಲು ಹೆಟೆರೊಲಾಜಸ್ ಬೂಸ್ಟರ್ ಡೋಸ್ನಂತೆ ನಿರ್ಬಂಧಿತ ಬಳಕೆಗಾಗಿ ಅನುಮೋದನೆಯನ್ನು ಪಡೆದಿದೆ.
ಇಂಟ್ರಾನಾಸಲ್ ಲಸಿಕೆ ಮುನ್ನೆಚ್ಚರಿಕೆಯ ಡೋಸ್ನ ಆಯ್ಕೆಗಳಲ್ಲಿ ಒಂದಾಗಿ ಶಿಫಾರಸು ಮಾಡಲಾಗಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಇಮ್ಯುನೈಸೇಶನ್ ಅಧ್ಯಕ್ಷ ಡಾ ಎನ್ಕೆ ಅರೋರಾ ತಿಳಿಸಿದ್ದಾರೆ. ಮೂಗಿನ ಮೂಲಕ ಹಾಕಲಾಗುವ ಲಸಿಕೆಗೆ iNCOVACC, ಜನವರಿ ನಾಲ್ಕನೇ ವಾರದಲ್ಲಿ ನೀಡಲಾಗುವುದು. ಈ ಲಸಿಕೆಯನ್ನು ವಾಷಿಂಗ್ಟನ್ ವಿಶ್ವವಿದ್ಯಾನಿಲಯ, ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.