ಉತ್ತರಾಖಂಡ ಮೇಘಸ್ಟೋಟಕ್ಕೆ 15 ಮಂದಿ ಬಲಿ – ಹಲವರು ನಾಪತ್ತೆ.. 900 ಜನ ಆಸ್ಪತ್ರೆಗೆ ದಾಖಲು!

ಉತ್ತರಾಖಂಡ ಮೇಘಸ್ಟೋಟಕ್ಕೆ 15 ಮಂದಿ ಬಲಿ – ಹಲವರು ನಾಪತ್ತೆ.. 900 ಜನ ಆಸ್ಪತ್ರೆಗೆ ದಾಖಲು!

ಉತ್ತರಾಖಂಡದಲ್ಲಿ ಮೇಘಸ್ಟೋಟ ಉಂಟಾಗಿದ್ದು, ಹಲವು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಇದೀಗ ಭಾರಿ ಮಳೆ, ಪ್ರವಾಹಕ್ಕೆ ಜನರು ನಲುಗಿದ್ದಾರೆ. ಇದೀಗ 15 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಐವರಿಂದ ವಿಜಯಪುರ SBI ಬ್ಯಾಂಕ್ ದರೋಡೆ – ಕೋಟಿ ಕೋಟಿ ಬೆಲೆಬಾಳುವ ಚಿನ್ನ ಕದ್ದು ಎಸ್ಕೇಪ್

ಡೆಹ್ರಾಡೂನ್​ನಲ್ಲಿ 13 ಹಾಗೂ ಪಿಥೋರಗಡ್ ಮತ್ತು ನೈನಿತಾಲ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ನಾಪತ್ತೆಯಾಗಿದ್ದು, ಪ್ರವಾಹಕ್ಕೆ ಸಿಲುಕಿದ 900 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಇನ್ನು ಉತ್ತರಾಖಂಡದಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ಪ್ರವಾಹದ ಅಬ್ಬರ ಕೊಂಚ ಮಟ್ಟಿಗೆ ಇಳಿದಿದೆ. ಮಾಲ್ದೇವತಾ ಮತ್ತು ಸಹಸ್ತ್ರಧಾರಾ ಪ್ರದೇಶದಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, ಇಲ್ಲಿನ ನದಿಗಳು ಉಕ್ಕಿ ಹರಿದಿದ್ದು, ಮನೆ, ರಸ್ತೆಗಳು ಕೊಚ್ಚಿ ಹೋಗಿವೆ. ರಿಸ್ಪಾನಾ ಮತ್ತು ಬಿಂದಾಲ್​ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸುತ್ತಮುತ್ತಲಿನ ಜನರಿಗೆ ಸಾಕಷ್ಟು ಹಾನಿ ಉಂಟು ಮಾಡಿದೆ.

ಭಾರಿ ಮಳೆಯುಂದಾಗಿ ನೇಪಾಳಿ ಫಾರ್ಮ್ ಮತ್ತು ದೋಯಿವಾಲಾ ನಡುವಿನ ಡೆಹ್ರಾಡೂನ್-ಹರಿದ್ವಾರ ಹೆದ್ದಾರಿಗೆ ಹಾನಿಗೊಂಡಿದೆ. ಋಷಿಕೇಶದಲ್ಲಿ, ಗಂಗಾ ಮತ್ತು ಇತರ ನದಿಮೂಲಗಳಿಂದ ಪ್ರವಾಹದ ನೀರು ಉಕ್ಕಿ ಹರಿದಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇನ್ನು ಭೀಕರ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಮಂಗಳವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭೇಟಿ ನೀಡಿ, ಪರಿಹಾರ ಕ್ರಮಗಳನ್ನು ಪರಿಶೀಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಿಎಂ ಧಾಮಿ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದು, ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

Shwetha M