ಟೀಂ ಇಂಡಿಯಾ ಜೆರ್ಸಿಗೆ ಹೊಸ ಸ್ಪಾನ್ಸರ್ ಫೈನಲ್ – ಅಪೊಲೊ ಟೈಯರ್ಸ್ ಜೊತೆ ಬಿಸಿಸಿಐ ಬಿಗ್ ಡೀಲ್!

ಡ್ರೀಮ್ 11 ಒಪ್ಪಂದ ಮುಕ್ತಾಯವಾದ ಬಳಿಕ ಮುಂದಿನ ಪ್ರಾಯೋಜಕತ್ವ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡ್ರೀಮ್11 ಸ್ಥಾನವನ್ನು ಪ್ರಮುಖ ಟೈರ್ ಉತ್ಪಾದಕ ಕಂಪನಿ ಅಪೊಲೊ ಟೈಯರ್ಸ್ ತನ್ನದಾಗಿಸಿಕೊಂಡಿದೆ. ರಿಯಲ್ ಮನಿ ಗೇಮಿಂಗ್ ಪ್ಲಾಟ್ಫಾರ್ಮ್ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರಿಂದ ಡ್ರೀಮ್ 11 ಅನಿವಾರ್ಯವಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಇದೀಗ ಅಪೊಲೊ ಟೈಯರ್ಸ್ ಹೊಸ ಜೆರ್ಸಿ ಪ್ರಾಯೋಜಕರಾಗಿದ್ದು, ಪ್ರತಿ ಪಂದ್ಯಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಬರೋಬ್ಬರಿ ಸುಮಾರು 4.5 ಕೋಟಿ ರೂ. ಪಾವತಿಸಲಿದೆ. ಇದು ಡ್ರೀಮ್ 11 ನೀಡುತ್ತಿದ್ದ 4 ಕೋಟಿ ರೂ.ಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ.
ಇದನ್ನೂ ಓದಿ : ಕೆ.ಎನ್ ರಾಜಣ್ಣಗೆ ಮತ್ತೆ ಮಂತ್ರಿಗಿರಿ ಕೊಡಿಸೋಕೆ ಸಿಎಂ ಕಸರತ್ತು – ಹೈಕಮಾಂಡ್ ಜೊತೆ ಮಾತುಕತೆಗೆ ಮುಂದಾದ್ರಾ ಸಿದ್ದರಾಮಯ್ಯ?
2027ರಲ್ಲಿ ಈ ಒಪ್ಪಂದವು ಮುಕ್ತಾಯಗೊಳ್ಳಲಿದ್ದು, ಅಲ್ಲಿಯವರೆಗೆ ಒಟ್ಟಾರೆಯಾಗಿ ಬಿಸಿಸಿಐಗೆ ಸುಮಾರು 600 ಕೋಟಿ ರೂ. ಜೆರ್ಸಿ ಪ್ರಾಯೋಜಕತ್ವದಿಂದಲೇ ಹರಿದು ಬರಲಿದೆ. ಟೀಮ್ ಇಂಡಿಯಾದ 3 ಮಾದರಿಯ ಪ್ರಾಯೋಜಕತ್ವದ ಹಕ್ಕುಗಳ (Sponsorship Rights)ನ್ನು ಅಪೊಲೊ ಟೈರ್ಸ್ (Apollo Tyres) ಕಂಪನಿ ಬರೋಬ್ಬರಿ 579 ಕೋಟಿ ರೂಪಾಯಿಗಳಿಗೆ ಗೆದ್ದುಕೊಂಡಿದೆ. ಅಪೊಲೊ ಟೈರ್ಸ್ನ ಸ್ಪಾನ್ಸರ್ಶಿಪ್ ಅವಧಿಯು ಮೂರು ವರ್ಷಗಳವರೆಗೆ ಇರಲಿದ್ದು ಒಟ್ಟು 121 ಪಂದ್ಯಗಳು ಹಾಗೂ 21 ಐಸಿಸಿ ಮ್ಯಾಚ್ಗಳು ನಡೆಯಲಿವೆ.
ಟೀಮ್ ಇಂಡಿಯಾದ ಮೂರು ಮಾದರಿಯ ಸ್ಪಾನ್ಸರ್ಶಿಪ್ ರೈಟ್ಸ್ ಪಡೆಯುತ್ತಿದ್ದಂತೆ ಹರಿಯಾಣ ಮೂಲದ ಗುರುಗ್ರಾಮ್ನ ಟೈರ್ ತಯಾರಿಕಾ ಕಂಪನಿ ಅಪೊಲೊ ಟೈರ್ಸ್ ಖುಷಿ ವ್ಯಕ್ತಪಡಿಸಿದೆ. ಬಿಡ್ಡಿಂಗ್ನಲ್ಲಿ ಕೊನೆವರೆಗೂ ಹಿಂದೆ ಬೀಳದ ಅಪೊಲೊ ಟೈರ್ಸ್ 100 ಅಲ್ಲ, 200 ಅಲ್ಲ ಬರೋಬ್ಬರಿ 579 ಕೋಟಿ ರೂಪಾಯಿಗಳಿಗೆ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದುಕೊಂಡಿದೆ. ಅಪೊಲೊ ಟೈರ್ಸ್ ಭಾರತ ಸೇರಿ 100ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಂಪನಿಯ ಬ್ರ್ಯಾಂಚ್ಗಳನ್ನು ಒಳಗೊಂಡಿದೆ. ಬಿಡ್ಡಿಂಗ್ನಲ್ಲಿ ಕ್ಯಾನ್ವಾ 544 ಕೋಟಿ ರೂಪಾಯಿಗಳವರೆಗೆ ಬಿಡ್ಡಿಂಗ್ ಮಾಡಿದ್ದರೇ, ಜೆಕೆ ಸೀಮೆಂಟ್ 477 ಕೋಟಿ ರೂಪಾಯಿಗಳವರೆಗೆ ಹರಾಜು ಕರೆದಿದ್ದವು. ಆದರೆ ಅಪೊಲೊ ಟೈರ್ಸ್ ಬಿಡ್ಡಿಂಗ್ ಗೆಲ್ಲುವವರೆಗೂ ತನ್ನ ರೇಸ್ ನಿಲ್ಲಿಸಲೇ ಇಲ್ಲ.
ಹೊಸ ಸ್ಪಾನ್ಸರ್ಶಿಪ್ನಲ್ಲಿ ದ್ವಿಪಕ್ಷೀಯ ಹಾಗೂ ಐಸಿಸಿ ಪಂದ್ಯಗಳ ನಡುವೆ ಹಣ ಖರ್ಚು ಹಾಗುವುದು ಸ್ವಲ್ಪ ವ್ಯತ್ಯಾಸ ಇದ್ದರೂ ಪ್ರತಿ ಪಂದ್ಯಕ್ಕೆ 4.77 ಕೋಟಿ ರೂಪಾಯಿಗಳು ಖರ್ಚು ಆಗುತ್ತದೆ. ಆದರೆ ಬಿಸಿಸಿಐ ದ್ವಿಪಕ್ಷೀಯ ಪಂದ್ಯಗಳಿಗೆ 3.5 ಕೋಟಿ ರೂಪಾಯಿ ಹಾಗೂ ವರ್ಲ್ಡ್ಕಪ್ ಪಂದ್ಯಗಳಿಗೆ 1.5 ಕೋಟಿ ರೂಪಾಯಿಗಳನ್ನು ನಿಗದಿ ಮಾಡಿತ್ತು.

ನೋಡಿರಿ

