ರಾಜ್ ಬಿ ಹೊಸ ಪ್ರಾಜೆಕ್ಟ್‌ನಲ್ಲಿ ಸು ಫ್ರಮ್ ಸೋ ಭಾನು! – ಮುಂದಿನ ಚಿತ್ರದಲ್ಲೂ ನಟಿ ಸಂಧ್ಯಾ ನಾಯಕಿ!

ಸ್ಯಾಂಡಲ್‌ವುಡ್ ಚಿತ್ರ ಸು ಫ್ರಮ್ ಸೋ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಪಡೆದುಕೊಂಡಿದೆ. ಕೋಟಿ ಕೋಟಿ ಬಾಚಿಕೊಂಡಿದೆ. ಈ ಸಿನಿಮಾದಲ್ಲಿ ಭಾನು ನಟನೆ ಪ್ರೇಕ್ಷಕರ ಮನ ಗೆದ್ದಿದೆ. ಸಂಧ್ಯಾ ಅರೆಕೆರೆ ಆಕ್ಟಿಂಗ್ ಗೆ ಜನ ಭೇಷ್ ಅಂದಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ ನಟಿ ಸಂಧ್ಯಾ ಜೊತೆ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಜೆರ್ಸಿಗೆ ಹೊಸ ಸ್ಪಾನ್ಸರ್ -ಪ್ರತಿ ಪಂದ್ಯಕ್ಕೆ ₹4.5 ಕೋಟಿ ನೀಡಲಿರೋ ಅಪೋಲೋ ಟಯರ್ಸ್
ಹೌದು, ರಾಜ್ ಅವರ ಒಡೆತನದ ನಿರ್ಮಾಣ ಸಂಸ್ಥೆ ಲೈಟರ್ ಬುದ್ಧ ಪ್ರೊಡಕ್ಷನ್ ಹೊಸ ಪ್ರಾಜೆಕ್ಟ್ ಒಂದು ಘೋಷಿಸಿದೆ. ಇದು ಕಿರುಚಿತ್ರವಾಗಿದ್ದು, ಸು ಫ್ರಮ್ ಸೋ ಸಿನಿಮಾದ ಭಾನು ಪಾತ್ರ ಖ್ಯಾತಿ ಸಂಧ್ಯಾ ಅರೆಕೆರೆ ಅವರು ಇದರಲ್ಲಿ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಲೈಟರ್ ಬುದ್ಧ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡಿಲ್ಲ. ಆದ್ರೆ ಈ ಕಿರುಚಿತ್ರವನ್ನ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅದನ್ನು ರಿಲೀಸ್ ಮಾಡುತ್ತಿದೆ.
ನಟಿ ಸಂಧ್ಯಾ ನಟಿಸಿರುವ ಕಿರುಚಿತ್ರದ ಹೆಸರು ಹಿಂದೆ ಗಾಳಿ ಮುಂದೆ ಮತ್ತೆ. ರಘು ಆರವ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ‘ಸು ಫ್ರಮ್ ಸೋ’ ಚಿತ್ರದಲ್ಲಿ ಭಾನು ಆಗಿ ಸಂಧ್ಯಾ ಅವರು ಗಮನ ಸೆಳೆದಿದ್ದರು. ಅವರು ಈ ಕಿರುಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 19ರಂದು ‘ಲೈಟರ್ ಬುದ್ಧ ಯೂಟ್ಯೂಬ್’ ಚಾನೆಲ್ ಮೂಲಕ ಈ ಕಿರುಚಿತ್ರ ಬಿಡುಗಡೆ ಕಾಣಲಿದೆ. ರಾಜ್ ಅವರು ಸದ್ಯ ಮುಂದಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಯಾವುದೇ ಅಪ್ಡೇಟ್ ನೀಡಿಲ್ಲ. ಶೀಘ್ರವೇ ಅವರ ಹೊಸ ಪ್ರಾಜೆಕ್ಟ್ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ನೋಡಿರಿ

