ಬೇಲ್ಗಾಗಿ ವಿಡಿಯೋ ವೈರಲ್? ಬೆನ್ನುನೋವು.. ದರ್ಶನ್ ರಿಲೀಸ್?
ಹಳೇ ಕಥೆ.. ಹೊಸ ವಿಡಿಯೋ ಅಸ್ತ್ರ

ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಜೈಲಿನಲ್ಲಿ ವಿಲವಿಲ್ಲ ಓದ್ದಾಡುತ್ತಿದ್ದಾರೆ. ಈ ನಡುವೆ ಶೂಟಿಂಗ್ನಲ್ಲಿ ದರ್ಶನ್ ಬೆನ್ನು ನೋವಿನಿಂದ ನರಳಾಡಿದ ವಿಡಿಯೋ ಈಗ ಸಖತ್ ವೈರಲ್ ಆಗ್ತಿದ್ದು, ದರ್ಶನ್ಗೆ ಮತ್ತೆ ಬೇಲ್ ಸಿಗೋಕೆ ಹೊಸ ಅಸ್ತ್ರ ಸಿಕ್ಕಿದಂತೆ ಆಗಿದೆ. ರೇಣುಕಾಸ್ವಾಮಿ ಕೇಸ್ನಲ್ಲಿ ಮೊದಲ ಸಲ ಜೈಲಿಗೆ ಹೋಗಿದ್ದ ದರ್ಶನ್ಗೆ ವಿಐಪಿ ಟ್ರೀಟ್ಮೆಂಟ್ ಸಿಕ್ಕಿತ್ತು. ಬಟ್ ಆಮೇಲೆ ಆ ಪೋಟೋ ವೈರಲ್ ಆಗಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ರು. ಬಳ್ಳಾರಿಗೆ ಹೋಗಿದ್ದ ದಾಸನಿಗೆ ಬೆನ್ನು ನೋವು ಬಿಟ್ಟು ಬಿಡದೇ ಕಾಡಿತ್ತು. ದರ್ಶನ್ಗೆ ಬೆನ್ನು ನೋವು ಮೊದ್ಲೇ ಇತ್ತು. ಆದ್ರೆ ಜೈಲಿಗೆ ಹೋದ್ ಮೇಲೆ ಅದು ಜಾಸ್ತಿ ಆಗಿತ್ತು. ಇದೇ ಬೆನ್ನು ನೋವಿನ ಸಮಸ್ಯೆ ಇಟ್ಕೊಂಡು ದರ್ಶನ್ಗೆ ಬೇಲ್ಗೆ ಅರ್ಜಿ ಸಲ್ಲಿಸಿದ್ರು. ಜೈಲಿನಲ್ಲಿ ಕ್ಯಾಮರ ಮುಂದೆ ದರ್ಶನ್ ಬೆನ್ನು ಹಿಡಿದುಕೊಂಡು ಕುಂಟುತ್ತಾ ಹೋಗುತ್ತಿದ್ದರು.. ಇದ್ದನ್ನ ನೋಡಿದವರು ಇದೆಲ್ಲಾ ದರ್ಶನ್ ಮಾಡ್ತಿರೋ ಡವ್.. ಬೇಲ್ಗೆ ಆಗಿ ದರ್ಶನ್ ಬೆನ್ನು ನೋವು ಅಂತ ಕಥೆ ಹೇಳುತ್ತಿದ್ದಾರೆ ಅಂತ ಎಲ್ಲಾ ಹೇಳುತ್ತಿದ್ದರು. ಬೇನ್ನು ನೋವಿನ ಕಾರಣ ಕೊಟ್ಟು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ರು. ಈ ಟೈಂನಲ್ಲಿ ದಾಸ ಆಸ್ಪತ್ರೆಯಲ್ಲೇ ಇದ್ದರು. ಆಮೇಲೆ ಆಪರೇಷನ್ ಮಾಡಿಸಬೇಕು ಅಂತ ಡಾಕ್ಟರ್ ಹೇಳಿದ್ರು. ಸಂಪೂರ್ಣ ಜಾಮೀನು ಸಿಕ್ಕ ಮೇಲೆ ಆಸ್ಪತ್ರೆಯಿಂದ ದಾಸ ಡಿಸ್ಚಾರ್ಜ್ ಆದರು. ಡಿಸ್ಟಾರ್ಜ್ ಆದ್ರೂ ಮೇಲೆ ದರ್ಶನ್ ಆಪರೇಷನ್ ಮಾಡಿಸಿಕೊಂಡಿಲ್ಲ. ಸಿನಿಮಾ ಶೂಟಿಂಗ್ ಅದು ಇದು ಅಂತ ಸುತ್ತಾಡಿಕೊಂಡಿದ್ದರು. ಕ್ಯಾಮೆರಾ ಕಂಡಾಗ ಬೆನ್ನು ಹಿಡಿದುಕೊಳ್ಳುತ್ತಿದ್ದನ್ನ ನೋಡಿದವರು ದರ್ಶನ್ ಡವ್ ಮಾಡ್ತಾ ಇದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಬಟ್ ಈಗ ಸೋಷಿಯಲ್ ವೈರಲ್ ಆಗಿರೋ ವಿಡಿಯೋ ದರ್ಶನ್ ಹೇಳಿದ್ದು ನಿಜ.. ನಿಜಕ್ಕೂ ಬೆನ್ನು ನೋವು ಇದೆ ಅಂತ ಗೊತ್ತಾಗ್ತಿದೆ..
ಹೌದು ಜೈಲಿನಲ್ಲಿ ಇರ್ತಾ ಇದ್ದ ಬೆನ್ನು ನೋವು ದಿ ಡೆವಿಲ್ ಶೂಟಿಂಗ್ ಮಾಡುವಾಗ ದರ್ಶನ್ ಇರಲಿಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಕೇಳಿಬಂದಿದ್ದವು. ಅದಕ್ಕೆ ಉತ್ತರವಾಗಿ ಈಗ ದರ್ಶನ್ ಫ್ಯಾನ್ಸ್ ಒಂದು ವಿಡಿಯೋವನ್ನು ವೈರಲ್ ಮಾಡಿದ್ದಾರೆ. ದರ್ಶನ್ ಅವರಿಗೆ ಬೆನ್ನು ನೋವು ಇದ್ದಾಗ್ಯೂ, ಅದರಲ್ಲೇ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರು ಬೆನ್ನು ನೋವಿನಲ್ಲೂ ಡೆವಿಲ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.. ದರ್ಶನ್ ಸರ್ ರವರ ಬೆನ್ನು ನೋವಿನ ಸತ್ಯ ಎಂದು ಅವರ ಫ್ಯಾನ್ಸ್ ಕ್ಯಾಪ್ಷನ್ ನೀಡಿ, ವಿಡಿಯೋ ವೈರಲ್ ಮಾಡುತ್ತಿದ್ದಾರೆ.
ಈಚೆಗೆ ಈ ಚಿತ್ರದ ರೈಟರ್ ಕಾಂತರಾಜ್ ಅವರು ಒಂದು ಸಂದರ್ಶನದಲ್ಲಿ ದರ್ಶನ್ ಬೆನ್ನು ನೋವಿನಿಂದ ಎಷ್ಟು ಸಂಕಟಪಟ್ಟರು ಎಂಬುದನ್ನು ವಿವರಿಸಿದ್ದರು. ಇದೀಗ ಆ ಸಂದರ್ಭ ಯಾವುದು ಎಂಬುದನ್ನು ಫ್ಯಾನ್ಸ್ ವಿಡಿಯೋ ಸಹಿತ ಹಂಚಿಕೊಂಡಿದ್ದಾರೆ. ‘ದಿ ಡೆವಿಲ್’ ಸೆಟ್ನಲ್ಲಿ ದರ್ಶನ್ ಅವರು ನಾಯಕಿಯನ್ನು ಎತ್ತಿಕೊಳ್ಳುವ ದೃಶ್ಯವೊಂದಿತ್ತಂತೆ. ಆದರೆ, ಆಗ ಬೆನ್ನು ನೋವು ಕಾಣಿಸಿಕೊಂಡಿದ್ದು, ದರ್ಶನ್ ಅವರಿಗೆ ಕುಳಿತುಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಆಗ ಕೂಡಲೇ ನೆಲದ ಮೇಲೆ ಒಂದು ಬಟ್ಟೆಯನ್ನು ಹಾಸಲಾಗುತ್ತದೆ. ಅದರ ಮೇಲೆ ಮಲಗಿಬಿಡುತ್ತಾರೆ. ಈಗ ಈ ವಿಡಿಯೋ ಒಬ್ಬರಿಂದ ಒಬ್ಬರಿಗೆ ಶೇರ್ ಆಗುತ್ತಿದ್ದು, ಫ್ಯಾನ್ಸ್ ಫುಲ್ ಮೂಡ್ ಆಪ್ ಮಾಡ್ಕೊಂಡಿದ್ದಾರೆ.
ಹಳೇ ಕಥೆ.. ಹೊಸ ವಿಡಿಯೋ ಅಸ್ತ್ರ
ಇನ್ನೂ ದರ್ಶನ್ ಈ ಹಿಂದೆ ರಿಲೀಸ್ ಆಗಿದ್ದು ಬೆನ್ನು ನೋವಿನ ಕಾರಣದಿಂದ. ಬೆನ್ನು ನೋವು ಇದೆ ಆಪರೇಷನ್ ಮಾಡಿಸಿಕೊಳ್ಳಬೇಕು. ಬಟ್ ಈ ಸಲ ಕೂಡ ಇದೇ ಕಾರಣವನ್ನ ಕೊಡಬಹುದು. ಯಾಕಂದ್ರೆ ದರ್ಶನ್ಗೆ ಬೆನ್ನು ನೋವು ಇದೆ ಅನ್ನೋದು ಸತ್ಯ ಅನ್ನೋಕೆ ಶೂಟಿಂಗ್ ಟೈಂನಲ್ಲಿ ತೆೆಗದ ಈ ವಿಡಿಯೋ ಸಾಕ್ಷಿ. ಇದು ನಾಟಕ ಅಂತ ಅನ್ಸಲ್ಲ.. ನಿಜವಾಗಿ ದರ್ಶನ್ಗೆ ಬೆನ್ನು ನೋವು ಎಷ್ಟರ ಮಟ್ಟಿಗೆ ಇದೆ ಅನ್ನೋದ್ದನ್ನ ತೋರಿಸಿಕೊಟ್ಟಿದೆ. ನೆಕ್ಟ್ ದರ್ಶನ್ ಪರ ವಕೀಲರು ಬೇಲ್ಗೆ ಅರ್ಜಿ ಸಲ್ಲಿಸುವಾಗ ಈ ವಿಷ್ಯವನ್ನ ಮುಂದಿಟ್ಟುಕೊಂಡು ಬೇಲ್ಗೆ ಅರ್ಜಿ ಸಲ್ಲಿಸಬಹುದು. ದರ್ಶನ್ಗೆ ಬೇಲ್ ಕೊಡಿ, ಕೊನೆ ಪಕ್ಷ ಮಧ್ಯಂತರ ಜಾಮೀನು ಆದ್ರೂ ಕೊಡಿ. ಅವರಿಗೆ ಬೆನ್ನು ನೋವು ಕಮ್ಮಿಯಾಗಿಲ್ಲ. ಶೂಟಿಂಗ್ ಟೈಂನಲ್ಲಿ ಅವರಿಗೆ ಬೆನ್ನು ನೋವು ಇತ್ತು. ಅದ್ದಕ್ಕೆ ಸಾಕ್ಷಿ ಈ ವಿಡಿಯೋ ಅಂತ ಹೇಳಬಹುದು.
ಮತ್ತೆ ಕೋರ್ಟ್ ಬಾಗಿಲು ಬಡಿದ ದರ್ಶನ್
ಇನ್ನು ಇತ್ತೀಚೆಗೆ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ದರ್ಶನ್ ಮನವಿಯಂತೆ ಹಾಸಿಗೆ, ದಿಂಬು ನೀಡುವಂತೆ ಸೂಚಿಸಿತ್ತು. ವಿಚಾರಣೆ ವೇಳೆ ದರ್ಶನ್ ನನಗೆ ವಿಷ ಕೊಡಿ ಅಂತ ಹೇಳಿದ್ದು ಜಡ್ಜ್ ಮನಸ್ಸು ಕರಗುವಂತೆ ಮಾಡಿತ್ತು. ಹೀಗಾಗಿ ಕೋರ್ಟ್ ಜೈಲಿನ ಮ್ಯಾನ್ಯುವಲ್ ಪ್ರಕಾರ ವಿಚಾರಣಾಧೀನ ಕೈದಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುವಂತೆ ಸೂಚಿಸಿತ್ತು. ವಾಕಿಂಗ್ ಮಾಡಲು ಅವಕಾಶ ನೀಡುವಂತೆ ಜೈಲು ಸಿಬ್ಬಂದಿಗೆ ಕೋರ್ಟ್ ಹೇಳಿತ್ತು. ಆದರೂ ಈವರೆಗೆ ನನಗೆ ಹಾಸಿಗೆ, ದಿಂಬು ಕೊಟ್ಟಿಲ್ಲ ಎಂದು ದರ್ಶನ್ ಮತ್ತೆ ಕೋರ್ಟ್ ಕದ ತಟ್ಟಿದ್ದಾರೆ. ಕೋರ್ಟ್ ಆದೇಶವನ್ನು ಜೈಲು ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಲು ಅವಕಾಶ ಕೊಟ್ಟಿದ್ದಾರೆ. ಇನ್ನುಳಿದಂತೆ ಯಾವುದೇ ಸೌಲಭ್ಯ ದರ್ಶನ್ಗೆ ನೀಡಿಲ್ಲ, ಹಾಸಿಗೆ ಹಾಗೂ ದಿಂಬು ಕೂಡ ಕೊಟ್ಟಿಲ್ಲ. ಹಿಂದೆ ಹೇಗೆ ನಡೆದುಕೊಳ್ಳುತ್ತಿದ್ದರೋ ಅದೇ ರೀತಿ ಮುಂದುವರೆಸಿದ್ದಾರೆ. ಕೋರ್ಟ್ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನೋಡಿರಿ

