ಸಿಎಂ ಸಿದ್ದರಾಮಯ್ಯರನ್ನ ಭೇಟಿ ಆದ SIT ಮುಖ್ಯಸ್ಥ ಪ್ರಣವ್ ಮೊಹಾಂತಿ – ಅಂತಿಮ ಘಟ್ಟಕ್ಕೆ ಬಂತಾ ಬುರುಡೆ ಕೇಸ್?

ಸಿಎಂ ಸಿದ್ದರಾಮಯ್ಯರನ್ನ ಭೇಟಿ ಆದ SIT ಮುಖ್ಯಸ್ಥ ಪ್ರಣವ್ ಮೊಹಾಂತಿ – ಅಂತಿಮ ಘಟ್ಟಕ್ಕೆ ಬಂತಾ ಬುರುಡೆ ಕೇಸ್?

ಸಿಎಂ ಸಿದ್ದರಾಮಯ್ಯರನ್ನ ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿ ಮಾಡಿದ್ದಾರೆ. ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಆಗಿರೋ ಪ್ರಣಬ್ ಮೊಹಂತಿ ರಾಜ್ಯದ ಧರ್ಮಸ್ಥಳ ತಲೆಬುರಡೆ ಕೇಸ್ ತನಿಖೆ ನಡೆಸುತ್ತಿದ್ದಾರೆ.    ಇದರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕ್ಕೆ ಇವರು ಮುಖ್ಯಸ್ಥರಾಗಿದ್ದಾರೆ. ಇಡೀ ಪ್ರಕರಣ ಹೊಸ ದಿಕ್ಕಿನತ್ತ ಹೊರಳುತ್ತಿರುವುದರಿಂದ ಈಗ ಸಿಎಂ ಜೊತೆ  ಪ್ರಣವ್ ಮೊಹಾಂತಿ ಚರ್ಚೆ ಮಾಡಿರೋವುದು ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಆನಂದ್ ಕುಮಾರ್ – ಇದೇ ಮೊದಲ ಬಾರಿಗೆ ಚಿನ್ನ ಗೆದ್ದು ಬೀಗಿದ ಭಾರತದ ಸ್ಕೇಟರ್

ಬಂಗ್ಲೆಗುಡ್ಡೆ ಮೀಸಲು ಅರಣ್ಯ ಪ್ರದೇಶ ಆಗಿರುವುದರಿಂದ ಉತ್ಖನನಕ್ಕೂ‌ ಮೊದಲು ಎಸ್ ಐಟಿ ಕಾನೂನು ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಅರಣ್ಯ ಇಲಾಖೆ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದೆ. ಈ ದಾಖಲೆಗಳನ್ನು ಅರಣ್ಯ ಇಲಾಖೆ ಎಸ್ ಐಟಿಗೆ ಕೊಡಲಿದೆ. ಅರಣ್ಯ ಇಲಾಖೆಯ ಸರ್ವೇ ರಿಪೋರ್ಟ್ ಪಡೆಯಲಾಗಿದೆ. ಚಿನ್ನಯ್ಯ ತೋರಿಸಿದ್ದ ಸ್ಥಳ ಬಂಗ್ಲೆಗುಡ್ಡೆಯ ಅಂಚಿನಲ್ಲಿ, ಹಾಗೂ ಸುತ್ತಮುತ್ತ 13 ಸ್ಥಳಗಳಲ್ಲಿ ಅಗೆಯಲಾಗಿತ್ತು.‌ಆದರೆ ಈಗ ವಿಠಲಗೌಡ ತೋರಿಸಿರುವುದು ಬಂಗ್ಲೆಗುಡ್ಡೆ ಮಧ್ಯಭಾಗದಲ್ಲಿ. ಅರಣ್ಯ ಇಲಾಖೆಯು ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವುದಕ್ಕೆ ಅನುಮತಿ ಕೊಟ್ಟಿರಲಿಲ್ಲ. ಈ ವಿಚಾರ ಸಚಿವ ಈಶ್ವರ ಖಂಡ್ರೆ ಅವರ ಬಳಿಯೂ ಹೋಗಿದೆ.

ಹೀಗಾಗಿ ಬಂಗ್ಲೆಗುಡ್ಡೆಯಲ್ಲಿ ಪಾಯಿಂಟ್ ಮಾಡುವ ಕೆಲಸವನ್ನು ಸದ್ಯಕ್ಕೆ ಕೈಬಿಟ್ಟಿರುವ ಎಸ್ ಐಟಿ, ಕಾನೂನು ತೊಡಕಾಗದಂತೆ ಮುನ್ನಡೆಯಲು ತೀರ್ಮಾನಿಸಿದೆ. ಜೊತೆಗೆ ಮುಖ್ಯಮಂತ್ರಿಗಳಿ ತನಿಖೆಯ ಪ್ರತಿ ಹಂತಗಳನ್ನು ಎಸ್ ಐಟಿ ವಿವರಿಸುತ್ತಿದೆ. ಧರ್ಮಸ್ಥಳ ಷಡ್ಯಂತ್ರ , ಧರ್ಮಸ್ಥಳ ಹೆಣ ಹೂತ ಪ್ರಕರಣಗಳ ಬಗ್ಗೆ ಎಸ್‌ಐಟಿಯು ಒಂದು ಹಂತದ ವಿಚಾರಣೆಗಳನ್ನು ಪೂರ್ಣಗೊಳಿಸಿದೆ. ಆದರೆ ವಿಠಲಗೌಡ ವೊಚಾರಣೆ ಹಾಗೂ ಸ್ಥಳ ಮಹಜರು ವೇಳೆ ಮತ್ತಷ್ಟು ಎಲುಬು, ಬುರುಡೆಗಳು ಸಿಕ್ಕಿದೆ ಎಂದು ವಿಠಲಗೌಡ ಹೇಳಿಕೆ ನೀಡಿದ್ದು, ಮುಂದಿನ ಕ್ರಮ ಕೈಗೊಳ್ಳಬೇಕಿರುವುದರಿಂದ ಎಸ್‌ಐಟಿ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ ಎನ್ನಲಾಗಿದೆ. ಹಾಗೇ ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಮುಂದೆ ಯಾವ ರೀತಿಯ ಹೆಜ್ಜೆಯನ್ನ ಇಡಬೇಕು ಅನ್ನೋದ್ದನ್ನ ಸಿಎಂ ಬಳಿ ಪ್ರಣವ್ ಮೊಹಾಂತಿ ಚರ್ಚೆ ನಡೆಸಿದ್ದಾರೆ. ಹಾಗೇ ಇಲ್ಲಿ ತನಕ ಹೇಗೆಲ್ಲಾ ತನಿಖೆ ಆಯ್ತು ಅನ್ನೋದ್ದನ್ನ ಕೂಡ ಪ್ರಣವ್ ಸಿಎಂಗೆ ತಿಳಿಸಿದ್ದಾರೆ.

Kishor KV