ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಆನಂದ್ ಕುಮಾರ್ – ಇದೇ ಮೊದಲ ಬಾರಿಗೆ ಚಿನ್ನ ಗೆದ್ದು ಬೀಗಿದ ಭಾರತದ ಸ್ಕೇಟರ್
ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಆನಂದ್‌ಕುಮಾರ್‌ಗೆ ಪ್ರಧಾನಿ ಮೋದಿ ಅಭಿನಂದನೆ

ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಬಂಗಾರದ ಪದಕ ಗೆದ್ದಿದೆ. ಚೀನಾದಲ್ಲಿ ನಡೆದ ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 22 ವರ್ಷದ ಆನಂದ್ ಕುಮಾರ್ ವೇಲ್‌ಕುಮಾರ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಮೊದಲ ಭಾರತೀಯ ಎಂಬ ಹಿರಿಮೆಯನ್ನು ಆನಂದ್ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: RCB ಬದಲಿ ಆಟಗಾರರಿಗೆ ಗುಡ್ ಬೈ – ಮಯಾಂಕ್, ಟಿಮ್, ಬ್ಲೆಸ್ಸಿಂಗ್ ರಿಲೀಸ್
ಚೀನಾದಲ್ಲಿ ನಡೆದ ಪುರುಷರ ಸೀನಿಯರ್ 1000 ಮೀಟರ್ ಸ್ಪ್ರಿಂಟ್ ಸ್ಪರ್ಧೆಯ ಫೈನಲ್ ರೇಸ್‌ನಲ್ಲಿ ಆನಂದ್ ಕುಮಾರ್ ವೇಲ್‌ಕುಮಾರ್ ನಿಗದಿತ ದೂರವನ್ನು 1:24.924 ಸೆಕೆಂಡುಗಳಲ್ಲಿ ಕ್ರಮಿಸಿ, ಚಿನ್ನ ಗೆದ್ದಿದ್ದಾರೆ. ಅಲ್ಲದೆ ವಿಶ್ವ ಚಾಂಪಿಯನ್ ಪಟ್ಟವನ್ನು ಗೆದ್ದು ಚರಿತ್ರೆ ಸೃಷ್ಟಿಸಿದ್ದಾರೆ.
ಸೋಮವಾರ ಆನಂದ್ ಕುಮಾರ್ ಅವರು 500 ಮೀಟರ್ ಸ್ಪ್ರಿಂಟ್‌ನಲ್ಲಿ 43.072 ಸೆಕೆಂಡುಗಳ ಸಮಯವನ್ನು ತೆಗೆದುಕೊಂಡು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಆನಂದ್ ಕುಮಾರ್ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಪರ ಮೊದಲ ಸೀನಿಯರ್ ಪದಕವನ್ನು ಗೆದ್ದರು. ಸೋಮವಾರ ಸಂಜೆಯ ನಡೆದಿದ್ದ ಜೂನಿಯರ್ ವಿಭಾಗದಲ್ಲಿ ಭಾರತದ ಕ್ರಿಶ್ ಶರ್ಮಾ 1000 ಮೀಟರ್ ಸ್ಪ್ರಿಂಟ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಈ ಟೂರ್ನಿಯಲ್ಲಿ ಭಾರತ ಡಬಲ್ ಚಿನ್ನದ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಪದಕವು ರೋಲರ್ ಕ್ರೀಡೆಗಳಲ್ಲಿ ಭಾರತ ಜಯಿಸಿದ ಮೊದಲ ಪದಕ.
ಸ್ಪೀಡ್ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಆನಂದ್‌ಕುಮಾರ್‌ಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಪ್ರಧಾನಿ, ವೇಲ್‌ಕುಮಾರ್ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. ಆನಂದ್‌ಕುಮಾರ್ ಅವರ ಧೈರ್ಯ, ವೇಗ ಮತ್ತು ಚೈತನ್ಯ ಅವರನ್ನು ಸ್ಕೇಟಿಂಗ್‌ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗಿ ಮಾಡಿದೆ. ಅವರ ಸಾಧನೆ ಅಸಂಖ್ಯಾತ ಯುವಕರಿಗೆ ಸ್ಫೂರ್ತಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳು’ ಎಂದು ಮೋದಿ ಶ್ಲಾಘಿಸಿದ್ದಾರೆ.

ನೋಡಿರಿ

