ಬಗೆದಷ್ಟು ಬಿಗಿಯಾಗುತ್ತಿದೆ ಬಂಗ್ಲೆ ಗುಡ್ಡದ ರಹಸ್ಯ – SIT ಗೊಂದಲ.. ಮತ್ತೆ ಕಾರ್ಯಾಚರಣೆ ನಡೆಯುತ್ತಾ?

ಬಗೆದಷ್ಟು ಬಿಗಿಯಾಗುತ್ತಿದೆ ಬಂಗ್ಲೆ ಗುಡ್ಡದ ರಹಸ್ಯ – SIT ಗೊಂದಲ.. ಮತ್ತೆ ಕಾರ್ಯಾಚರಣೆ ನಡೆಯುತ್ತಾ?

ಬಂಗ್ಲೆಗುಡ್ಡ.. ಧರ್ಮಸ್ಥಳದ ಈ ಕಾಡು ಪ್ರದೇಶ ಒಂದು ಗುಪ್ತಜಾಗ.. ಇಲ್ಲೇ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪ ಕೇಳಿ ಬಂದಿರೋದು. ಇದರ ಹೆಸರಲ್ಲೇ ಈಗ ರಾಜಕೀಯದ ಕೆಸರೆರಚಾಟ ನಡೆಯುತ್ತಿರುವುದು. ಇದರ ಮಧ್ಯೆ ಸೌಜನ್ಯ ಮಾವ ನೀಡಿರುವ ಹೇಳಿಕೆ, ಜೊತೆಗೆ ಬಂಗ್ಲೆಗುಡ್ಡದಲ್ಲಿ ಮಹಜರ್​ ನಡೆಸುವ ವಿಚಾರವಾಗಿ ಎಸ್​​ಐಟಿ ಗೊಂದಲಕ್ಕೀಡಾಗಿದೆ.

ಇದನ್ನೂ ಓದಿ: ಸೌಜನ್ಯಗೆ ನ್ಯಾಯ ಮಾತಿಗಷ್ಟೇ ಸೀಮಿತನಾ? – ಕುಸುಮಾವತಿಗೆ ಬಿಜೆಪಿ ಬೆಂಬಲ ನಿಜನಾ?

ಸೌಜನ್ಯಾ (Sowjanya) ಮಾವ ವಿಠಲ್​ ಗೌಡ, ಅಸ್ಥಿಪಂಜರಗಳನ್ನು ಬಂಗ್ಲೆಗುಡ್ಡ ಕಾಡಿನಲ್ಲಿ ನೋಡಿರುವುದಾಗಿ ಹೇಳಿಕೆ ಕೊಟ್ಟ ಮೇಲೆ ಬುರುಡೆ ಪ್ರಕರಣ ಮತ್ತಷ್ಟು ಚುರುಕುಗೊಂಡಿದೆ. ಮತ್ತೆ ಬಂಗ್ಲೆಗುಡ್ಡದಲ್ಲಿ ಮಹಜರ್​ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಮಹಜರ್ (ಉತ್ಖನನ) ನಡೆಸಲು ಎಸ್​ಐಟಿ ತಂಡ ಮೊನ್ನೆ ನಿರ್ಧಾರ ಮಾಡಿತ್ತು. ಆದರೆ ಈಗ ಮತ್ತೆ ಮುಂದೂಡಿಕೆ ಮಾಡಿದೆ. ಹೀಗಾಗಿ SIT ಅಧಿಕಾರಿಗಳು ಮಹಜರ್ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಎಸ್​ಐಟಿ ಅಧಿಕಾರಿಗಳು ಬಂಗ್ಲೆಗುಡ್ಡ ಮಹಜರ್​ ಕಾರ್ಯಾಚರಣೆಯಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ವಿಠಲ್ ಗೌಡ ತೋರಿಸಿದ ಜಾಗದಲ್ಲಿ ಮಾತ್ರ ಮಹಜರ್ ನಡೆಸಬೇಕೇ, ಅಥವಾ ಸಂಪೂರ್ಣ ಬಂಗ್ಲೆಗುಡ್ಡ ಪ್ರದೇಶದಲ್ಲಿ ಮಹಜರ್ ಮಾಡಬೇಕೇ ಎಂಬ ಗೊಂದಲದಲ್ಲಿದ್ದಾರೆ ಅಧಿಕಾರಿಗಳು. ಸ್ಥಳ ಮಹಜರ್ ಸಂದರ್ಭದಲ್ಲಿ ಹಲವಾರು ಅಸ್ಥಿಪಂಜರಗಳನ್ನು ನೋಡಿರುವ ಬಗ್ಗೆ ವಿಠಲ್ ಗೌಡ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ SIT ಮತ್ತೊಮ್ಮೆ ಮಹಜರ್ ನಡೆಸಲು ಚಿಂತನೆ ನಡೆಸಿದೆ.

SIT ಅಧಿಕಾರಿಗಳು ಮಹಜರ್​ ಸಂಬಂಧ ಈಗ ಕಾನೂನು ಸಲಹೆ ಪಡೆಯುತ್ತಿದ್ದಾರೆ. ಬಂಗ್ಲೆಗುಡ್ಡದಲ್ಲಿ ಮೊದಲು ನಡೆದ ಉತ್ಖನನದಲ್ಲಿ ಹೆಚ್ಚು ಅಸ್ಥಿಪಂಜರ ಸಿಕ್ಕಿಲ್ಲ. ಆದರೆ, ವಿಠಲ್ ಗೌಡ ಅವರು ತಮ್ಮ ವಿಡಿಯೋದಲ್ಲಿ ಹೇಳಿದಂತೆ, ಅವರು ಎರಡು ಬಾರಿ ಬಂಗ್ಲೆಗುಡ್ಡಕ್ಕೆ ಹೋಗಿ ಸ್ಥಳ ಮಹಜರ್ ಮಾಡಿದ್ದಾರೆ. ಅಲ್ಲಿ ಕೆಲವು ಅಸ್ಥಿಪಂಜರಗಳು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. SIT ಅಧಿಕಾರಿಗಳು ಈಗಾಗಲೇ ಹಲವು ರಹಸ್ಯಗಳನ್ನು ಭೇದಿಸಿದ್ದಾರೆ. ವಿಠಲ್ ಗೌಡ ಹೇಳಿಕೆಯಿಂದ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. ಸದ್ಯದಲ್ಲೇ ಮಹಜರ್ ನಡೆಸುವ ಸಾಧ್ಯತೆಯಿದೆ.

Sulekha