ಕುಚಿಕು ಗೆಳೆಯರ ಕಣ್ಣೀರಿಗೆ ತಾರಮ್ಮ ಭಾವುಕ – ಶರಣ್ ತರುಣ್ ಸುಧೀರ್ ಗೆಳೆತನಕ್ಕೆ ಸೂರ್ಯ ಚಂದ್ರರೇ ಸಾಕ್ಷಿ..!

ಸ್ಯಾಂಡಲ್‌ವುಡ್ ಸ್ಟಾರ್‌ಗಳಾದ ಶರಣ್ ಹಾಗೂ ತರುಣ್ ಸುಧೀರ್ ಒಳ್ಳೆಯ ಗೆಳೆಯರು ಎಂಬುದು ಇಂಡಸ್ಟ್ರಿಗೇ ಗೊತ್ತು. ಅಷ್ಟೇ ಏಕೆ ಅನೇಕ ಅಭಿಮಾನಿಗಳು ಕೂಡ ಇದನ್ನು ಬಲ್ಲರು. ಈಗ ಇಬ್ಬರೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ‘ಮಹಾನಟಿ 2’ ಶೋಗೆ ತರುಣ್ ಸುಧೀರ್ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದರೆ, ಶರಣ್ ಅವರು, ‘ನಾವು ನಮ್ಮವರು’ ಶೋಗೆ ಜಡ್ಜ್ ಸ್ಥಾನವನ್ನು ತುಂಬಿದ್ದಾರೆ. ಈ ಎರಡೂ ರಿಯಾಲಿಟಿ ಶೋಗಳ ಮಹಾಸಂಗಮದಲ್ಲಿ ಇವರಿಬ್ಬರ ಸ್ನೇಹದ ರಹಸ್ಯ ಮತ್ತು ಯಶಸ್ಸಿನ ಸೀಕ್ರೆಟ್ ರಿವೀಲ್ ಆಗಿದೆ.
ಇದನ್ನೂ ಓದಿ: ಮಾರ್ಕ್ ಚಿತ್ರದ ಬಿಗ್ ಅಪ್‌ಡೇಟ್ ಕೊಟ್ಟ ಕಿಚ್ಚ – ಲಿರಿಕಲ್ ಸಾಂಗ್ ರಿಲೀಸ್ ಗೆ ಮುಹೂರ್ತ ಫಿಕ್ಸ್!
ಕನ್ನಡ ಚಿತ್ರರಂಗದ ಆಸ್ತಿ ನಿರ್ದೇಶಕ ತರುಣ್ ಸುಧೀರ್ ಮತ್ತು ನಟ ಶರಣ್. ಇವರಿಬ್ಬರ ಸ್ನೇಹ, ಇವರಿಬ್ಬರ ಅನುಬಂಧ, ಇವರಿಬ್ಬರು ಚಿತ್ರರಂಗಕ್ಕಾಗಿ ದುಡಿಯುವ ರೀತಿ ಹೊಸ ಕಲಾವಿದರಿಗೆ ಸ್ಪೂರ್ತಿ. ಇದೀಗ ಶರಣ್ ಮತ್ತು ಸುಧೀರ್ ಪ್ರಾಣ ಸ್ನೇಹಿತರು ಅನ್ನೋ ವಿಚಾರ ಅಭಿಮಾನಿಗಳಿಗೆ ಗೊತ್ತಿದೆ. ಇನ್ನು ಇವರಿಬ್ಬರ ಅನುಬಂಧ ಎಷ್ಟು ಆಳವಾಗಿದೆ ಅನ್ನೋದನ್ನ ಸ್ವತಃ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಜೊತೆಗೆ ಜೀವದ ಗೆಳೆಯನ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ಜೀ ಕನ್ನಡದಲ್ಲಿ ನಾವು ನಮ್ಮವರು ಮತ್ತು ಮಹಾನಟಿ ರಿಯಾಲಿಟಿ ಶೋಗಳ ಮಹಾ ಸಂಗಮ ನಡೆದಿದೆ. ಈ ಶೋನಲ್ಲಿ ಶರಣ್ ಸಿನಿಮಾ ಜರ್ನಿ ಬಗ್ಗೆ ಡ್ಯಾನ್ಸ್ ಮೂಲಕ ಟ್ರಿಬ್ಯೂಟ್ ಮಾಡಲಾಗಿತ್ತು. ಇದನ್ನು ನೋಡಿ ಭಾವುಕರಾಗಿದ್ದು ಬರೀ ಶರಣ್ ಮಾತ್ರವಲ್ಲ, ಜೀವದ ಗೆಳೆಯ ತರುಣ್ ಕೂಡಾ ಭಾವುಕರಾಗಿದ್ದರು. ಶರಣ್ ಹೀರೋ ಆಗಲು ತರುಣ್ ಕಾರಣ ಅಂತಾ ಎಲ್ಲಾ ಅಂದುಕೊಂಡಿದ್ದೀರಾ.. ತರುಣ್ ಯಶಸ್ವಿ ನಿರ್ದೇಶಕ ಆಗಲು ಕಾರಣವೇ ಶರಣ್. ನನ್ನ ಗೆಳೆಯ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಗಿದ್ದ. ನನ್ನೊಳಗೊಬ್ಬ ನಿರ್ದೇಶಕ ಇದ್ದಾನೆ ಅಂತಾ ಗುರುತಿಸಿದ್ದು ಕೂಡಾ ಶರಣ್ ಅಂತಾ ಹೇಳುತ್ತಾ ತರುಣ್ ಭಾವುಕರಾದರು. ಜೊತೆಗೆ ಕಾಟೇರ ಸ್ಟೈಲ್‌ನಲ್ಲೇ ಗೆಳೆಯನಿಗೆ ವೇದಿಕೆಯಲ್ಲಿ ಮಂಡಿಯೂರಿ ಕೈ ಮುಗಿದರು. ಈ ವೇಳೆ ಶರಣ್, ತಾರಮ್ಮ, ಅನುಶ್ರೀ ಎಲ್ಲರ ಕಣ್ಣಲ್ಲೂ ನೀರಿತ್ತು.
ಇದಕ್ಕೂ ಮೊದಲು ಶರಣ್ ತನ್ನ ಗೆಳೆಯನ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದರು. ನಾವು ನಮ್ಮವರು ಶೋ ಒಪ್ಪಿಕೊಳ್ಳಿತ್ತೇನೆ ಎಂಬುದು ಅವನಿಗೆ ತಕ್ಕ ಮಟ್ಟಿಗೆ ಗೊತ್ತಿತ್ತು. ನನ್ನ ಜೀವನದಲ್ಲಿ ತೆಗೆದುಕೊಂಡ ದೊಡ್ಡ ನಿರ್ಧಾರಗಳನ್ನು ಒಪ್ಪಿಕೊಂಡಿದ್ದೇ ಇವನನ್ನು ಕೇಳಿ. ಸಿನಿಮಾ ಆಗಲಿ, ವೈಯಕ್ತಿ ಆಗಲಿ. ನನ್ನ ನಿರ್ಮಾಣ ಸಂಸ್ಥೆಗೆ ಹೆಸರು ಇಡುವುದರಿಂದ ಹಿಡಿದು, , ಮನೆಗೆ ಹೆಸರು ಇಡೋ ತನಕ ಎಲ್ಲವನ್ನೂ ಇವನೇ ಇಟ್ಟಿದ್ದು’ ಎಂದು ತರುಣ್ ಬಗ್ಗೆ ಶರಣ್ ಹೇಳಿದ್ದರು. ‘ನನ್ನ ಜೀವನದಲ್ಲಿ ಇವನು ಸಿಗದೇ ಇದ್ದಿದ್ದರೆ ನಾನು ಅಪೂರ್ಣ ಆಗುತ್ತಿದ್ದೆ. ನನ್ನ ಪೂರ್ಣಗೊಳಿಸಿದವನು. ಆಪ್ತ ಗೆಳೆಯನ ಸ್ಟ್ರೆಂತ್ಗಿಂತ ಆತನ ವೀಕ್ನೆಸ್ ಗೊತ್ತಿರಬೇಕು. ನನ್ ವೀಕ್ನೆಸ್ ಏನು ಎಂಬುದು ಆತನಿಗೆ ಗೊತ್ತು. ನಾನು ಶೋ ಮಾಡುತ್ತಿದ್ದೇನೆ ಎಂದಾಗ ನೈಟ್ ಓಕೆನಾ ಎಂದು ಕೇಳಿದ’ ಎಂದು ಶರಣ್ ಅವರು ಹೇಳಿದರು.
ಬದುಕಲ್ಲಿ ಸಿಕ್ಕಿದರೆ ಇಂಥಾ ಗೆಳೆಯರು ಸಿಗಬೇಕು. ಒಬ್ಬ ಚಿತ್ರರಂಗದ ನಾಯಕನಾಗಿ ಮೆರೆದರೆ, ಮತ್ತೊಬ್ಬರು ನಿರ್ದೇಶಕರಾಗಿ ಮೆರೆದರು. ಅವರನ್ನು ಇವರು ಇವರನ್ನು ಅವರು ಮೆರೆಸುತ್ತಿದ್ದಾರೆ. ಇವರಿಬ್ಬರ ಸ್ನೇಹದ ಯಶಸ್ಸನ್ನು ನೋಡಿ ಹೆತ್ತವರು ಹೆಮ್ಮೆಪಡುತ್ತಿದ್ದಾರೆ. ಈ ಸ್ಟಾರ್‌ಗಳು ಕನ್ನಡ ಚಿತ್ರರಂಗದಲ್ಲಿ ಹೊಳೆಯುವ ನಕ್ಷತ್ರಗಳು..

ನೋಡಿರಿ

