ಬೆಂಗಳೂರಿಗೆ ಬಂದಿಳಿದ ನಾಲ್ವರು ವಿದೇಶಿಗರಲ್ಲಿ ಸೋಂಕು ಪತ್ತೆ – ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್

ಬೆಂಗಳೂರಿಗೆ ಬಂದಿಳಿದ ನಾಲ್ವರು ವಿದೇಶಿಗರಲ್ಲಿ ಸೋಂಕು ಪತ್ತೆ – ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್

ಬೆಂಗಳೂರು : ರಾಜಧಾನಿ ಬೆಂಗಳೂರು ಹೊಸ ವರ್ಷಾಚರಣೆಯ ಸಿದ್ಧತೆಯಲ್ಲಿದೆ. ಇದರ ಮಧ್ಯೆ ರಾಜಧಾನಿಯಲ್ಲಿ ಕೋವಿಡ್ ಆತಂಕ ಇನ್ನಷ್ಟು ಹೆಚ್ಚಾಗಿದೆ.  ಡಿಸೆಂಬರ್ 27ರಂದು ವಿದೇಶದಿಂದ ಬಂದಿದ್ದ 119 ಪ್ರಯಾಣಿಕರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸದ್ಯ ನಾಲ್ವರು ಸೋಂಕಿತರಿಗೆ ವೈದ್ಯರು ಐಸೋಲೇಷನ್ ಮಾಡಿದ್ದು ಈ ಮೂಲಕ ವಿದೇಶದಿಂದ ಮರಳಿದ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಸಣ್ಣ ಪ್ರಮಾಣದಲ್ಲಿ‌ ಏರಿಕೆಯಾಗುತ್ತಿರುವುದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಗೆ ಕೊರೊನಾ ಸೋಂಕು – ಬಿಬಿಎಂಪಿ ಹೈ ಅಲರ್ಟ್

ಸದ್ಯ ರಾಜ್ಯದಲ್ಲಿ ಒಮಿಕ್ರಾನ್​ ರೂಪಾಂತರಿ ತಳಿ BF.7 ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್​ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಸಿ.ವಿ.ರಾಮನ್​ನಗರ ಆಸ್ಪತ್ರೆ, ​ESI ಆಸ್ಪತ್ರೆ ಸೇರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್​​​​​​​ ನಡೆಸಲಾಗುತ್ತಿದೆ. ಆಕ್ಸಿಜನ್ ಪೂರೈಕೆ, ಬೆಡ್‌ಗಳ ಸಿದ್ಧತೆ, ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ.

 

suddiyaana