ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ಮಂತ್ರವಾದಿಗಳ ಬೆನ್ನತ್ತಿದ ಎಸ್​​ಐಟಿ ಅಧಿಕಾರಿಗಳು!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ಮಂತ್ರವಾದಿಗಳ ಬೆನ್ನತ್ತಿದ ಎಸ್​​ಐಟಿ ಅಧಿಕಾರಿಗಳು!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡಿದೆ. ಈಗಾಗಲೇ ಮಾಸ್ಕ್‌ಮ್ಯಾನ್‌ನನ್ನ  ಎಸ್‌ಐಟಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿತ್ತು. ಇದೀಗ ಈ ಪ್ರಕಣದ ತನಿಖೆ ಚುರುಕುಗೊಂಡಿದೆ. ಇದೀಗ ಎಸ್‌ಐಟಿ ಅಧಿಕಾರಿಗಳು ಮಂತ್ರವಾದಿಗಳ ಬೆನ್ನಟ್ಟಿದ್ದಾರೆ.

ಇದನ್ನೂ ಓದಿ: ರೆಬಲ್ ಸ್ಟಾರ್​ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ – ಡಿಸಿಎಂ ಡಿಕೆಶಿ ಬಳಿ ಮನವಿ ಮಾಡಿದ ನಟಿ ತಾರಾ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ. ಈಗಾಗಲೇ ಧರ್ಮಸ್ಥಳದಲ್ಲಿ ಮಾಸ್ಕ್‌ಮ್ಯಾನ್‌ ಗುರುತು ಮಾಡಿದ್ದ ಸ್ಥಳಗಳಲ್ಲಿ ಉತ್ಖನನ ಮಾಡಲಾಗಿತ್ತು. ಇದೀಗ ತನಿಖೆ ವೇಳೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದು ಸೌಜನ್ಯ ಮಾವ ವಿಠ್ಠಲಗೌಡ ಎಂಬ ವಿಚಾರ ಬಯಲಾಗಿದೆ. ಈ ಬೆನ್ನಲ್ಲೇ ಬಂಗ್ಲೆಗುಡ್ಡದಿಂದ ಬುರುಡೆ ತಂದಿದ್ದು, ತಾನೇ ಎಂದು ಸೌಜನ್ಯ ಮಾವ ವಿಠ್ಠಲಗೌಡ  ಒಪ್ಪಿಕೊಂಡಿದ್ದಾರೆ. ಅಲ್ಲದೇ ಬಂಗ್ಲೆಗುಡ್ಡದಲ್ಲಿ ಹೆಣಗಳ ರಾಶಿಯೇ ಇದೆ ಎಂದು ವಿಠ್ಠಲಗೌಡ ವಿಡಿಯೋ ಮಾಡಿ ಆರೋಪಿಸಿದ್ದರು. ಅಲ್ಲದೇ, ಬಂಗ್ಲೆಗುಡ್ಡದಲ್ಲಿ ವಾಮಾಚಾರ ಮಾಡಲಾಗಿದೆ ಎಂದೂ ಆರೋಪ ಮಾಡಿದ್ದರು. ಈ ವಿಚಾರವನ್ನು ಪ್ರಣಬ್ ಮೊಹಂತಿಯವರಿಗೂ ತಿಳಿಸಿದ್ದರು. ಈ ಸಂಬಂಧ ಬಂಗ್ಲೆಗುಡ್ಡದಲ್ಲಿ ಶೋಧ ನಡೆಸುವ ಸಾಧ್ಯತೆ ಇದೆ. ಮಂಗಳವಾರವೇ ಬಂಗ್ಲೆಗುಡ್ಡದ ಇಂಚಿಂಚೂ ಶೋಧ ನಡೆಸುವ ಸಾಧ್ಯತೆ ಇದೆ.

ಇನ್ನು ವಿಠ್ಠಲಗೌಡ ಬಂಗ್ಲೆಗುಡ್ಡದಲ್ಲಿ ವಾಮಾಚಾರ ಮಾಡಲಾಗಿದೆ ಆರೋಪ ಮಾಡಿದ ಬೆನ್ನಲ್ಲೇ,  ಎಸ್ಐಟಿ ಅಧಿಕಾರಿಗಳು, ಬೆಳ್ತಂಗಡಿ ಸುತ್ತಮುತ್ತ ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಧರ್ಮಸ್ಥಳ ಪೊಲೀಸರಿಗೆ ಹಾಗೂ ಬೆಳ್ತಂಗಡಿ ಪೊಲೀಸರಿಗೆ ಜವಾಬ್ದಾರಿ ವಹಿಸಲಾಗಿದ್ದು, ತಲೆಬುರುಡೆ ಇಟ್ಟುಕೊಂಡು ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ತಿಳಿಸಿದ್ದಾರೆ. ಅಂಥವರು ಯಾರಾದರೂ ಸಿಕ್ಕಿದರೆ ಎಸ್ಐಟಿ ಠಾಣೆಗೆ ಕರೆಸಲು ಸೂಚನೆ ನೀಡಲಾಗಿದೆ.

ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸಲು ವಿಠ್ಠಲಗೌಡ ತೋರಿಸುವ ಪಾಯಿಂಟ್ ಗುರುತು ಮಾಡಿ ಶೋಧ ಕಾರ್ಯ ನಡೆಸುವ ಸಾಧ್ಯತೆ ಇದೆ. ಮಂಗಳವಾರ ಶೋಧ ಕಾರ್ಯ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಗುಡ್ಡದಲ್ಲಿರುವ ಮರಗಳ ಸರ್ವೆ ಕಾರ್ಯ ನಡೆಸಲಿದ್ದು, ಎಷ್ಟು ಮರಗಳಿವೆ, ಮರದ ಅಂದಾಜು ವಯಸ್ಸೆಷ್ಟು ಎಂಬ ವರದಿ ಸಿದ್ಧಪಡಿಸಲು ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಇವತ್ತು ಬಂಗ್ಲೆಗುಡ್ಡ ಸುತ್ತ ಮುತ್ತಾ ಭದ್ರತೆ ಒದಗಿಸಲಾಗಿದ್ದು, ಧರ್ಮಸ್ಥಳ ಆಸುಪಾಸಿನಲ್ಲಿ ಮತ್ತೆ ಉತ್ಖನನ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

Shwetha M