ಕೈ ಕುಲುಕಲಿಲ್ಲ.. ಬಾಗಿಲು ಬಂದ್ – ಪೆಹಲ್ಗಾಮ್ ಅಟ್ಯಾಕ್ ಗೆ ಪಾಕಿಸ್ತಾನಕ್ಕೆ ಭಾರತದ ರಿಟರ್ನ್ ಗಿಫ್ಟ್!

ಏಷ್ಯಾ ಕಪ್ ಆರಂಭದಲ್ಲೇ ಪಾಕಿಸ್ತಾನ ವಿರುದ್ಧದ ಪಂದ್ಯವನ್ನ ಭಾರತ ಬಾಯ್ಕಟ್ ಮಾಡಬೇಕು ಅನ್ನೋ ಕೂಗು ಜೋರಾಗಿತ್ತು. ವಿಪಕ್ಷ ನಾಯಕರು ಮೋದಿ ನೀಡಿದ್ದಂತ ರಕ್ತ ಮತ್ತಯ ನೀರು ಒಟ್ಟಿಗೆ ಹರಿಯೋಕೆ ಸಾಧ್ಯವಿಲ್ಲ ಅನ್ನೋ ಹೇಳಿಕೆಯನ್ನ ಇಟ್ಕೊಂಡು ಪಂದ್ಯ ರದ್ದು ಮಾಡುವಂತೆ ಒತ್ತಾಯಿಸಿದ್ರು. ಪ್ರೊಟೆಸ್ಟ್ ಗಳೂ ನಡೆದ್ವು. ಬಟ್ ಈಗ ಟೀಂ ಇಂಡಿಯಾ ಪ್ಲೇಯರ್ಸ್ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಪೆಹಾಲ್ಗಮ್ ಅಟ್ಯಾಕ್ ಗೆ ರಿವೇಂಜ್ ತೀರಿಸಿಕೊಂಡಿದ್ದಾರೆ. ಒಂದೊಂದು ಹೆಜ್ಜೆಯಲ್ಲೂ ಮುಟ್ಟಿನೋಡಿಕೊಳ್ಳುವಂತೆ ಮಾಡಿದ್ದಾರೆ.
ಇದನ್ನೂ ಓದಿ : ಪಾಕ್ ನ ಬಗ್ಗುಬಡಿದ ಭಾರತ – ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ ಕ್ಯಾಪ್ಟನ್ ಸೂರ್ಯ
ಫಸ್ಟ್ ಬಾಲ್ ವಿಕೆಟ್.. ಭಾರತದೆದುರು ಮಕಾಡೆ ಮಲಗಿದ ಪಾಕ್!
ಭಾರತ ಪಾಕಿಸ್ತಾನ ಮ್ಯಾಚ್ ಅಂದ್ರೆ ಭಾರತವೇ ಗೆಲ್ಲೋದು ಅನ್ನೋದು ಎಲರಿಗೂ ಗೊತ್ತಿರೋ ಸತ್ಯವೇ. ನಿನ್ನೆ ಮ್ಯಾಚ್ ನಲ್ಲೂ ಅದೇ ಆಯ್ತು. ಟಾಸ್ ಗೆದ್ದ ಪಾಕಿಸ್ತಾನ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘ ಬ್ಯಾಟಿಂಗ್ ಚೂಸ್ ಮಾಡಿಕೊಂಡ್ರು. ಬಟ್ ಓಪನಿಂಗ್ ನಲ್ಲೇ ಫ್ಲಾಪ್ ಶೋ. ಸೈಮ್ ಅಯೂಬ್ ಮತ್ತು ಸಾಹೀಬ್ಜಾದಾ ಇನ್ನಿಂಗ್ಸ್ ಆರಂಭಿಸಿದ್ದು ಫಸ್ಟ್ ಬಾಲ್ನಲ್ಲೇ ಹಾರ್ದಿಕ್ ಪಾಂಡ್ಯ ಪೆವಿಲಿಯನ್ಗೆ ಅಟ್ಟಿದ್ರು. ಸೈಮ್ ಅಯೂಬ್ ಫಸ್ಟ್ ಬಾಲ್ನಲ್ಲೇ ಕ್ಯಾಚ್ ಕೊಟ್ಟು ಹೊರ ನಡೆದ್ರು. ಇನ್ನು ನೆಕ್ಸ್ಟ್ ಓವರ್ನಲ್ಲೇ ಜಸ್ಪ್ರೀತ್ ಬುಮ್ರಾ ಮೂರು ರನ್ ಗಳಿಸಿದ್ದ ಮೊಹಮ್ಮದ್ ಹ್ಯಾರಿಸ್ಗೆ ಗೇಟ್ಪಾಸ್ ಕೊಟ್ರು. 6 ರನ್ಗಳಿಗೆ ಎರಡು ವಿಕೆಟ್ ಉರಳಿತ್ತು. ಆ ಬಳಿಕ ಜೊತೆಯಾದ ಫರ್ಹಾನ್ ಮತ್ತು ಫಖರ್ ಝಮಾನ್ ಎಚ್ಚರಿಕೆಯ ಆಟವಾಡಿದ್ರು. ಬಟ್ ಅದೂ ಕೂಡ ಜಾಸ್ತಿ ಹೊತ್ತು ನಡೀತಿಲ್ಲ. ಆ ಬಳಿಕ ಬಂದ ಬ್ಯಾಟರ್ಸ್ ಯಾರು ಕ್ರೀಸ್ ಕಚ್ಚಿ ನಿಲ್ಲೋಕೆ ಸಾಧ್ಯವಾಗಿಲ್ಲ. ಎಂಡಲ್ಲಿ ಶಾಹೀನ್ ಆಫ್ರಿದಿ 4 ಸಿಕ್ಸರ್ ಸಿಡಿಸಿದ್ರಿಂದ 20 ಓವರ್ ವೇಳೆಗೆ 9 ವಿಕೆಟ್ ನಷ್ಟಕ್ಕೆ 127 ರನ್ಗಳನ್ನ ಕಲೆ ಹಾಕಿದರು. ಭಾರತಕ್ಕೆ 128 ರನ್ಗಳ ಟಾರ್ಗೆಟ್ ನೀಡಿದ್ರು.
ಅಭಿಷೇಕ್ ಸಾಲಿಡ್ ಓಪನಿಂಗ್.. ಸೂರ್ಯ ಬೆಸ್ಟ್ ಫಿನಿಶರ್!
ಇನ್ನು 128 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ಒನ್ಸ್ ಅಗೇನ್ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಗಿಲ್ ಮತ್ತು ಅಭಿ ಕಾಂಬಿನೇಷನ್ ವರ್ಕೌಟ್ ಆಗೋ ಟೈಮಲ್ಲೇ ಗಿಲ್ ಸ್ಟಂಪ್ಔಟ್ ಆದ್ರು. ಅತ್ತ ಅಭಿಷೇಕ್ ಕೂಡ 31 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ನಂತ್ರ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ತಾಳ್ಮೆಯಿಂದ ಬ್ಯಾಟ್ ಬೀಸಿದ್ರು. 50 ರನ್ಗಳ ಪಾಟ್ನರ್ಶಿಪ್ ಕೂಡ ಬಂತು. ಅಷ್ಟ್ರಲ್ಲಿ ತಿಲಕ್ ಬೌಲ್ಟ್ ಆಗಿ ಶಿವಂ ದುಬೆ ಕ್ರೀಸ್ಗೆ ಬಂದ್ರು. ಅಂತಿಮವಾಗಿ 15.5ನೇ ಓವರ್ನಲ್ಲಿ ಸಿಕ್ಸ್ ಬಾರಿಸೋ ಮೂಲಕ ಸೂರ್ಯ ಮ್ಯಾಚ್ ಫಿನಿಶ್ ಮಾಡಿದ್ರು. 47 ರನ್ ಕಲೆ ಹಾಕೋ ಮೂಲಕ ಸೂರ್ಯ ಶೈನ್ ಆದ್ರು. ಈ ಮೂಲಕ ಭಾರತ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಬಟ್ ಇಲ್ಲಿ ಭಾರತ ಮ್ಯಾಚ್ ಗೆದ್ದಿದ್ದಕ್ಕಿಂತ ನಡೆದುಕೊಂಡು ರೀತಿಯೇ ಹಲ್ಚಲ್ ಎಬ್ಬಿಸಿದೆ. ಪಾಕಿಸ್ತಾನ ಟೀಂ ಸೋಲಿನ ಜೊತೆಗೆ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೊಳಗಾಗಿದೆ.
ಪಾಕ್ ಗೆ ಅವಮಾನ – 1
ಟಾಸ್ ವೇಳೆ ಕೈಕುಲುಕದೇ ಠಕ್ಕರ್ ಕೊಟ್ಟ ಸೂರ್ಯ!
ಯಾವುದೇ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ವೇಳೆ ಯಾರೇ ವಿನ್ ಆದ್ರೂ ಉಭಯ ತಂಡಗಳ ಕ್ಯಾಪ್ಟನ್ಸ್ ಕೈಕುಲುಕೋದು ಕಾಮನ್. ಬಟ್ ನಿನ್ನೆ ಮ್ಯಾಚಲ್ಲಿ ಇದಾಗ್ಲಿಲ್ಲ. ಭಾರತದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಟಾಸ್ ಫ್ಲಿಪ್ ಮಾಡಿದ್ರೂ ಕೂಡ ಗೆದ್ದಿದ್ದು ಪಾಕ್ ಕ್ಯಾಪ್ಟನ್. ಈ ಟೈಮಲ್ಲಿ ಸೂರ್ಯ ಶೇಕ್ಹ್ಯಾಂಡ್ ಮಾಡೋ ಗೋಜಿಗೇ ಹೋಗ್ಲಿಲ್ಲ. ಪಾಕ್ ನಾಯಕ ಸಲ್ಮಾನ್ ಜೊತೆ ಹ್ಯಾಂಡ್ ಶೇಕ್ ಮಾಡಲೇ ಇಲ್ಲ. ಟಾಸ್ ಮುಗಿಸಿ, ನೇರವಾಗಿ ಮರಳಿ ಬಂದರು. ಆಗಲೇ ಟೀಂ ಇಂಡಿಯಾ ತನ್ನ ನಿಲುವನ್ನು ಸ್ಪಷ್ಟವಾಗಿ ತೋರಿಸಿಯಾಗಿತ್ತು. ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸೋ ಇದು ಫಸ್ಟ್ ರಿವೇಂಜ್.
ಪಾಕ್ ಗೆ ಅವಮಾನ -2
ಮ್ಯಾಚ್ ಮುಗಿದ ಮೇಲೂ ನೋ ಹ್ಯಾಂಡ್ ಶೇಕ್!
ಇನ್ನು ಪಂದ್ಯ ಮುಗಿದ ಮೇಲೆ ಉಭಯ ತಂಡಗಳ ಆಟಗಾರರು ಹ್ಯಾಂಡ್ ಶೇಕ್ ಮಾಡೋದು ಕೂಡ ಸಾಮಾನ್ಯ. ಆಟಗಾರರು ಕೈ ಕುಲುಕಿ ಹೋಗೋದು ಸಂಪ್ರದಾಯ. ಆದರೆ, ಆ ಸಂಪ್ರದಯಾಕ್ಕೆ ಸೂರ್ಯಕುಮಾರ್ ಯಾದವ್ ಬ್ರೇಕ್ ಹಾಕಿದರು. ಸಿಕ್ಸರ್ ಮೂಲಕ ಮ್ಯಾಚ್ ಮುಗಿಸಿದ ಸೂರ್ಯ ಶಿವಂ ದುಬೆಗೆ ಹ್ಯಾಂಡ್ ಶೇಕ್ ಮಾಡಿ ಅಲ್ಲಿಂದ ಸೀದಾ ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದ್ರು.
ಅವಮಾನ -3
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಬಾಗಿಲು ಬಂದ್!
ಇನ್ನು ಹ್ಯಾಂಡ್ ಶೇಕ್ ಮಾಡದೇ ಟಾಂಟ್ ಕೊಟ್ಟಿದ್ದ ಟೀಂ ಇಂಡಿಯಾ ಆಟಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಅದೇನಂದ್ರೆ ಸೂರ್ಯ ನೇರವಾಗಿ ಡ್ರೆಸ್ಸಿಂಗ್ ರೂಂಗೆ ಹೋದ ಮೇಲೆ ರೂಮ್ನ ಬಾಗಿಲು ಹಾಕಿಕೊಂಡು ಬಿಟ್ಟರು. ಈ ಮೂಲಕ ಪಾಕ್ ಜೊತೆ ಹ್ಯಾಂಡ್ ಶೇಕ್ ಬೇಡ ಎಂಬ ಖಡಕ್ ಸಂದೇಶ ರವಾನಿಸಿದ್ರು.
ಪಾಕ್ ಗೆ ಅವಮಾನ – 4
ಸೈನಿಕರು ಮತ್ತು ಪೆಹಲ್ಗಾಮ್ ಸಂತ್ರಸ್ತರಿಗೆ ಗೆಲುವು ಅರ್ಪಣೆ!
ಇನ್ನು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯೂ ಪಾಕ್ಗೆ ಸೂರ್ಯ ತಿರುಗೇಟು ಕೊಟ್ಟಿದ್ದಾರೆ. ಈ ಗೆಲುವನ್ನು ಭಾರತೀಯ ಭದ್ರತಾ ಪಡೆಗಳಿಗೆ ಅರ್ಪಿಸಿದ ಸೂರ್ಯ ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಜೊತೆ ನಾವಿದ್ದೇವೆ. ಈ ವಿಜಯವನ್ನು ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಬಯಸುತ್ತೇನೆ, ಅವರು ಅದಮ್ಯ ಧೈರ್ಯವನ್ನು ತೋರಿಸಿದ್ದಾರೆ ಎನ್ನೋ ಮೂಲಕ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತ ಮೆಸೇಜ್ ಪಾಸ್ ಮಾಡಿದ್ರು. ಹಾಗೇ ಪೆಹಲ್ಗಾಮ್ ಅಟ್ಯಾಕ್ಗೆ ಇದು ರಿಟರ್ನ್ ಗಿಫ್ಟ್ ಅನ್ನೋದನ್ನೂ ಕೂಡ ಮರೆಯಲಿಲ್ಲ.

ನೋಡಿರಿ

