ಜೈಲಿನಲ್ಲಿ ನಟ ದರ್ಶನ್‌ಗೆ ನರಕ ದರ್ಶನ – ಕೋರ್ಟ್ ಆದೇಶಿಸಿದ್ರೂ ದಾಸನಿಗೆ ಸಿಗ್ತಿಲ್ಲ ಮೂಲ ಸೌರ್ಕಯ!

ಜೈಲಿನಲ್ಲಿ ನಟ ದರ್ಶನ್‌ಗೆ ನರಕ ದರ್ಶನ – ಕೋರ್ಟ್ ಆದೇಶಿಸಿದ್ರೂ ದಾಸನಿಗೆ ಸಿಗ್ತಿಲ್ಲ ಮೂಲ ಸೌರ್ಕಯ!

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಜೈಲುವಾಸ ಅನುಭವಿಸ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ಗೆ ನಿತ್ಯ ನರಕ ದರ್ಶನವಾಗ್ತಿದೆ. ಇತ್ತೀಚೆಗಷ್ಟೇ ಮೂಲ ಸೌಕರ್ಯವನ್ನ ಕೊಡಿ ಎಂದು ಕೋರ್ಟ್‌ ಬಳಿ ದರ್ಶನ್‌ ಮನವಿ ಮಾಡಿದ್ರು. ಹಾಸಿಗೆ, ದಿಂಬು ಕೋರ್ಟ್‌ ಆದೇಶ ನೀಡಿದ್ರೂ ಕೂಡ ಜೈಲಾಧಿಕಾರಿಗಳು ಯಾವುದೇ ಸೌಕರ್ಯ ನೀಡಿಲ್ಲ ಎಂದು ವರದಿಯಾಗಿದೆ. ಇದೀಗ ಈ ಸಂಬಂಧ ದರ್ಶನ್ ಪರ ವಕೀಲರು ಮತ್ತೆ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಉಪ್ಪಿದಾದನಿಗೂ ಹ್ಯಾಕರ್ಸ್ ಕಾಟ – ಉಪೇಂದ್ರ ದಂಪತಿ ಬಳಿ ಹಣಕ್ಕೆ ಬೇಡಿಕೆ ಇಟ್ಟ ಭೂಪ!

ಇತ್ತೀಚಿಗೆ ದರ್ಶನ್ ಪರ ವಕೀಲ ಸುನೀಲ್‌ ಅವರು, ತುಂಬಾ ಚಳಿಯಿದೆ, ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಕಷ್ಟವಾಗುತ್ತಿದೆ. ಹೀಗಾಗಿ ದಿಂಬು, ಹಾಸಿಗೆ ಕೊಡಿಸಬೇಕು ಎಂದು ಮನವಿ ಮಾಡಿ, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ದಿಂಬು, ಹಾಸಿಗೆ ಹಾಗೂ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಬೇಕು ಎಂದು ಆದೇಶಿಸಿತ್ತು. ಆದರೆ ಇದೀಗ ದರ್ಶನ್ ಪರ ವಕೀಲರು, ಕೋರ್ಟ್ ಆದೇಶ ಮಾಡಿದ್ರೂ ಯಾವುದೇ ಸೌಕರ್ಯ ನೀಡಿಲ್ಲ. ಹಾಸಿಗೆ, ದಿಂಬು ಒದಗಿಸಿಲ್ಲ ಎಂದು 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹಾಗೂ ಕೋರ್ಟ್ ಆದೇಶ ಮಾಡಿದ್ರೂ ಯಾವುದೇ ಸೌಕರ್ಯ ನೀಡಿಲ್ಲ. ಕೋರ್ಟ್ ಆದೇಶದ ಪ್ರತಿಯನ್ನು ಇ-ಮೇಲ್ ಮಾಡಲಾಗಿದೆ. ಆದರೂ ದರ್ಶನ್‌ಗೆ ಅದೇ ನರಕ ಮುಂದುವರಿದಿದೆ. ಎರಡು-ಮೂರು ಬಾರಿ ಜೈಲಿಗೆ ಹೋಗಿ ವಿಚಾರಿಸಿದ್ದೀವಿ. ಆದರೂ ಕೂಡ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Shwetha M