ಕೋಳಿ ಸಾಂಬಾರ್‌ಗಾಗಿ ಗಂಡ, ಹೆಂಡ್ತಿ ಮಧ್ಯೆ ಜಗಳ –  ಕೋಪಗೊಂಡ ಹೆಂಡ್ತಿ ಮಾಡಿದ್ದೇನು ಗೊತ್ತಾ?

ಕೋಳಿ ಸಾಂಬಾರ್‌ಗಾಗಿ ಗಂಡ, ಹೆಂಡ್ತಿ ಮಧ್ಯೆ ಜಗಳ –  ಕೋಪಗೊಂಡ ಹೆಂಡ್ತಿ ಮಾಡಿದ್ದೇನು ಗೊತ್ತಾ?

ಗಂಡ ಹೆಂಡ್ತಿ ಜಗಳ ಉಂಡು ಮಲಗುವವರೆಗೆ ಅನ್ನೋ ಮಾತಿದೆ. ಆದ್ರೆ ಇತ್ತೀಚೆಗೆ ಸಣ್ಣ ಪುಟ್ಟ ವಿಚಾರ ಸಿಕ್ಕಿದ್ರೆ ಸಾಕು, ದೊಡ್ಡ ಜಗಳ ನಡೆದುಹೋಗುತ್ತದೆ. ಇದೀಗ ಇಲ್ಲೊಂದು ಕಡೆ ಕೋಳಿ ಸಾಂಬಾರ್‌ ಮಾಡುವ ವಿಚಾರಕ್ಕೆ ಗಂಡ ಹೆಂಡ್ತಿ ಮಧ್ಯೆ ಶುರುವಾದ ಜಗಳ ಈಗ ಸಾವಿನಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ: ಹಾಸನ ದುರಂತದಲ್ಲಿ ಮನಕಲಕುವ ಕಥೆ – ವಿಧಿ ನೀ ಇಷ್ಟು ಕ್ರೂರಿ ಯಾಕಾದೆ?

ಏನಿದು ಘಟನೆ?

ಉತ್ತರ ಪ್ರದೇಶದ ಅಮ್ರೋಹಾ ಎಂಬಲ್ಲಿ ಈ  ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ರೀನಾ ಎಂಬಾಕೆ ಜೊತೆ ನಿಗಮ್ ಮದುವೆಯಾಗಿತ್ತು. ಆಗಸ್ಟ್ 21ರಂದು ನಿಗಮ್ ಮನೆಗೆ ಮದ್ಯ ಮತ್ತು ಕೋಳಿ ಮಾಂಸ ತೆಗೆದುಕೊಂಡು ಬಂದಿದ್ದನು. ನಿಗಮ್ ಬರೋಷ್ಟರಲ್ಲಿ ರೀನಾ ವೆಜ್ ಅಡುಗೆ ಮಾಡಿದ್ದಳು. ಚಿಕನ್ ಸಾಂಬಾರ್‌ ಮಾಡುವ ವಿಚಾರಕ್ಕೆ ರೀನಾ ಮತ್ತು ನಿಗಮ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದರಿಂದ ಕೋಪಗೊಂಡ ರೀನಾ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.

ಶವ ನದಿಗೆ ಎಸೆದು, ಪತ್ನಿ ಓಡಿ ಹೋಗಿದ್ದಾಳೆ ಎಂದು ಕತೆ ಕಟ್ಟಿದ ಭೂಪ!

ಇನ್ನು ಜಗಳದ ವೇಳೆ ರೀನಾ ಮೇಲೆ ನಿಗಮ್ ಹಲ್ಲೆ ನಡೆಸಿದ್ದ. ಇದ್ರಿಂದಾಗಿ ನೊಂದಿದ್ದ ರೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದ ಭಯಗೊಂಡ ನಿಗಮ್, ಸಂಬಂಧಿಕರ ಸಹಾಯದಿಂದ ರೀನಾ ಶವವನ್ನ ಗಂಗಾ ನದಿಗೆ ಎಸೆದಿದ್ದಾನೆ. ರೀನಾ ದೇಹವನ್ನು ಹಾಳೆಯಲ್ಲಿ ಸುತ್ತಿ, ಸುತ್ತಲೂ ಮಣ್ಣು ಹಚ್ಚಿ ಗಂಗಾನದಿಗೆ ಎಸೆಯಲಾಗಿತ್ತು. ಶವ ನದಿಗೆ ಎಸೆದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಪತ್ನಿ ರೀನಾ ಓಡಿ ಹೋಗಿದ್ದು, ಆಕೆಯನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಲೆ ನದಿಯಲ್ಲಿ ರೀನಾ ಬಟ್ಟೆ ಪತ್ತೆಯಾಗಿತ್ತು. ಇತ್ತ ರೀನಾ ಕುಟುಂಬಸ್ಥರು ಅಳಿಯ ನಿಗಮ್ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ನಿಗಮ್ ಚಲನವಲನ ಕಂಡು ಪೊಲೀಸರು ಮೊದಲು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ. ಜಗಳವಾಗಿದ್ದರಿಂದ ಪತ್ನಿ ನೇಣು ಹಾಕಿಕೊಂಡಳು. ಸಂಬಂಧಿಕರ ಸಹಾಯದಿಂದ ರೀನಾ ಶವ ನದಿಗೆ ಎಸೆದು ಎಂದು ಹೇಳಿದ್ದಾನೆ.

ನಿಗಮ್ ಹೇಳಿಕೆಯನ್ನಾಧರಿಸಿ ಪೊಲೀಸರು ಆರೋಪಿ ಸಂಬಂಧಿಕರಾದ ಜಿತೇಂದ್ರ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನಿಗಮ್ ಪೋಷಕರಾದ ತಂದೆ ಸುರೇಶ್ ಮತ್ತು ತಾಯಿ ಕುಂಟಾ ನಾಪತ್ತೆಯಾಗಿದ್ದಾರೆ. ಇವರಿಬ್ಬರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ನಿಗಮ್ ನೀಡಿರುವ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು, ರೀನಾಳದ್ದು ಕೊ*ಲೆಯಾ ಅಥವಾ ಆತ್ಮ*ಹತ್ಯೆಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದಾರೆ. ಮತ್ತೊಂದೆಡೆ ರೀನಾ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

Shwetha M