ಗಂಡನ ಪ್ರೀತಿ ಕಡಿಮೆಯಾಯ್ತು ಎಂದು ಮಗುವಿನ ಬಾಯಿಗೆ ಟಿಶ್ಯೂ ಪೇಪರ್‌ ತುರುಕಿ ಕೊಂದ ತಾಯಿ!

ಗಂಡನ ಪ್ರೀತಿ ಕಡಿಮೆಯಾಯ್ತು ಎಂದು ಮಗುವಿನ ಬಾಯಿಗೆ ಟಿಶ್ಯೂ ಪೇಪರ್‌ ತುರುಕಿ ಕೊಂದ ತಾಯಿ!

ಮಕ್ಕಳಿಗಾಗಿ ತಾಯಿ ಏನು ಬೇಕಾದ್ರೂ ಮಾಡೋದಿಕ್ಕೆ ರೆಡಿ ಇರ್ತಾರೆ. ಎಷ್ಟೇ ಕಷ್ಟ ಇದ್ರೂ ಏನು ಕೊರತೆ ಆಗದಂತೆ ಮಕ್ಕಳನ್ನ ಬೆಳೆಸುತ್ತಾರೆ. ಆದ್ರೆ ಇಲ್ಲೊಬ್ಬಳು ತಾಯಿ ಹೆಸರಿಗೆ ಕಳಂಕ ತಂದಿದ್ದಾಳೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎಂದು ತಾನು ಹೆತ್ತ ಮಗುವನ್ನೇ ಕೊಂದಿದ್ದಾಳೆ.

ಇದನ್ನೂ ಓದಿ: ಮಿಜೋರಾಂನ ಮೊದಲ ರೈಲು ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ!

ಏನಿದು ಘಟನೆ?

ಈ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರ್ ಕಟ್ಟುವಿಲೈ ಎಂಬಲ್ಲಿ ನಡೆದಿದೆ. ಬೆನಿತಾ ಜಯ ಅನ್ನಲ್ ತನ್ನ ಗಂಡನ ಪ್ರೀತಿ ಕಡಿಮೆ ಆಯ್ತು ಅನ್ನೋ ಕಾರಣಕ್ಕೆ ತಾನು ಹೆತ್ತ ಮಗುವನ್ನೇ ಕೊಂದಿದ್ದಾಳೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತಾಯಿಯನ್ನ ಬಂಧಿಸಿದ್ದಾರೆ.

ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊ*ಲೆ

ಬೆನಿತಾ ಜಯ ಅನ್ನಲ್ ಒಂದು ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು ಪ್ರದೇಶದ ಕಾರ್ತಿಕ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆ ಬಳಿಕ ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ ಕಾರ್ತಿಕ್, ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಬೆನಿತಾ ಕಳೆದ  40 ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗು ಜನ್ಮ ನೀಡಿದ್ರು. ಸೆಪ್ಟೆಂಬರ್ 9ರಂದು ಕಾರ್ತಿಕ್ 9 ರಂದು ಎಂದಿನಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳಿದ್ದರು. ಮನೆಗೆ ಬಂದು ಮಗುವನ್ನು ಎತ್ತಿಕೊಂಡಾಗ ಅದರಲ್ಲಿ ಯಾವುದೇ ಚಲನೆ ಇರಲಿಲ್ಲ. ಉಸಿರಾಟವೂ ನಿಂತಿತ್ತು. ಇನ್ನು ಮಗುವಿನ ಹಣೆಯ ಮೇಲೂ ಗಾಯವಾಗಿತ್ತು. ಈ ಬಗ್ಗೆ ಪತ್ನಿಯನ್ನು ಕೇಳಿದಾಗ, ಮಗು ಹಾಲು ಕುಡಿಯುವಾಗ ಕೆಳಗೆ ಬಿದ್ದು ಗಾಯಗೊಂಡಿದೆ ಎಂದು ಹೇಳಿದ್ದಳು. ಇದರಿಂದ ಆಘಾತಕ್ಕೊಳಗಾದ ಕಾರ್ತಿಕ್ ಮಗುವನ್ನು ಎತ್ತಿಕೊಂಡು ಕರುಂಗಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.  ಮಗುವನ್ನು ಪರಿಶೀಲಿಸಿದ ವೈದ್ಯರು, ಕಂದಮ್ಮ ಸಾವನ್ನಪ್ಪಿರೋದನ್ನು ಖಚಿತಪಡಿಸಿದ್ದಾರೆ.

ಇನ್ನು ಕಾರ್ತಿಕ್ ಈ ಸಂಬಂಧ ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ತಿಕ್ ದಾಖಲಿಸಿದ ದೂರಿನ ಮೇರೆಗೆ ಮಗುವಿನ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸರಿಪಲ್ಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಶವಪರೀಕ್ಷೆ ವರದಿ ನೋಡಿ ಪೊಲೀಸರು ಒಂದು ಕ್ಷಣ ಆಘಾತಕ್ಕೊಳಗಾದರು. ಮಗುವನ್ನು ಕೊಲೆ ಮಾಡಿರುವ ವಿಚಾರ ಈ ವೇಳೆ ಬಯಲಾಗಿದೆ. ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊ*ಲೆ ಮಾಡಿದ್ದಾಳೆ ಎಂಬ ವಿಚಾರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗಗೊಂಡಿತ್ತು.

ಗಂಡನ ಪ್ರೀತಿ ಕಡಿಮೆಯಾಗಲು ಮಗು ಕಾರಣ!

ಮರಣೋತ್ತರ ಪರೀಕ್ಷೆ ವರದಿ ಬಳಿಕ ಪೊಲೀಸರು ಮಗುವಿನ ತಾಯಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗುವನ್ನು ತಾನೇ ಕೊಂದಿದ್ದಾಗಿ ಅವಳು ಒಪ್ಪಿಕೊಂಡಳು. ಅಲ್ಲದೆ, ನನ್ನ ಮಗು ಹುಟ್ಟಿ 40 ದಿನಗಳು ಕಳೆದಿವೆ. ಅಂದಿನಿಂದ ನನ್ನ ಗಂಡನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ. ಇದರಿಂದಾಗಿ ಮನೆಯಲ್ಲಿ ಸಮಸ್ಯೆಗಳಿದ್ದವು. ಘಟನೆ ನಡೆದ ದಿನ ಕೋಪದಿಂದ ಮಗುವಿನ ಬಾಯಿಯಲ್ಲಿ ಕಾಗದವನ್ನು ತುರುಕಿದ್ದಳು. ಗಂಡನ ಪ್ರೀತಿ ಕಡಿಮೆಯಾಗಲು ಮಗುವೇ ಕಾರಣ ಎಂದು ಬೆನಿತಾ ಹೇಳಿದ್ದಳು. ಇದೀಗ ಬೆನಿತಾಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

Shwetha M