ತಿರುಪತಿಗೆ ಭೇಟಿ ನೀಡಿದ ಕೇಂದ್ರ ಸಚಿವೆ – ಭಕ್ತರಿಗೆ ಊಟ ಬಡಿಸಿದ ನಿರ್ಮಲಾ ಸೀತಾರಾಮನ್‌!

ತಿರುಪತಿಗೆ ಭೇಟಿ ನೀಡಿದ ಕೇಂದ್ರ ಸಚಿವೆ – ಭಕ್ತರಿಗೆ ಊಟ ಬಡಿಸಿದ ನಿರ್ಮಲಾ ಸೀತಾರಾಮನ್‌!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬೇಟಿ ನೀಡಿದ್ದಾರೆ. ಈ ವೇಳೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹೂವಿನ ಬಾಣದಂತೆ ಸಾಂಗ್‌ ಟ್ರೆಂಡ್‌.. ವೈರಲ್‌ ಹುಡ್ಗಿ ಹಾಡು ಮೆಚ್ಚಿದ ಸ್ಟಾರ್ಸ್!‌ – ರಾತ್ರೋ ರಾತ್ರಿ ಫೇಮಸ್‌.. ಯುವತಿ ಯಾರು?

ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸಂಜೆ ಕುಟುಂಬ ಸದಸ್ಯರೊಂದಿಗೆ ತಿರುಪತಿಗೆ ಆಗಮಿಸಿದ್ದರು. ಈ ವೇಳೆ ಟಿಟಿಡಿ ಅಧಿಕಾರಿಗಳು ಭವ್ಯ ಸ್ವಾಗತ ನೀಡಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಇಂದು ಮುಂಜಾನೆ ತಿರುಪತಿಗೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅದಾದ ಬಳಿಕ ರಂಗನಾಯಕಕುಲ ಮಂಟಪದಲ್ಲಿ ವಿದ್ವಾಂಸರು ಅವರನ್ನು ಆಶೀರ್ವದಿಸಿ ದೇವರ ಕಾಣಿಕೆಗಳನ್ನು ನೀಡಿದರು. ಸಿವಿಎಸ್ಒ ಮುರಳೀಕೃಷ್ಣ, ಸ್ವಾಗತ ಉಪ ಕಾರ್ಯನಿರ್ವಾಹಕ ಅಧಿಕಾರಿ ಭಾಸ್ಕರ್ ಇತರರು ಉಪಸ್ಥಿತರಿದ್ದರು.

ಇನ್ನು ಪೂಜೆ ಬಳಿಕ ನಿರ್ಮಲಾ ಸೀತಾರಾಮನ್‌ ಅವರು ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಗಮಾಂಬ ಅನ್ನಪ್ರಸಾದ ಸಂಕೀರ್ಣದಲ್ಲಿ ಭಕ್ತರಿಗೆ ಪ್ರಸಾದ ಬಡಿಸಿದರು. ಮತ್ತೊಂದೆಡೆ, ಸಂಗೀತಗಾರ ಅನಿರುದ್ಧ್ ರವಿಚಂದರ್ ಅವರು ಇಂದು ಮುಂಜಾನೆ ಅಭಿಷೇಕ ಸೇವೆಯಲ್ಲಿ ಭಾಗವಹಿಸಿ ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಅಧಿಕಾರಿಗಳು ಅವರಿಗೆ ತೀರ್ಥ ಪ್ರಸಾದವನ್ನು ನೀಡಿದರು.

Shwetha M